March 17, 2026

Newsnap Kannada

The World at your finger tips!

kannu p

ಪುನೀತ್ ಆದರ್ಶದಂತೆ ನೇತ್ರ ದಾನ ಮಾಡಲು ನೇಣಿಗೆ ಶರಣಾದ ಅಭಿಮಾನಿ

Spread the love

ನಟ ಪುನೀತ್ ರಾಜ್‍ಕುಮಾರ್ ಅವರಂತೆಯೇ ನಿಧನ ನಂತರ ತಾನೂ ನೇತ್ರ ದಾನ ಮಾಡುವುದಕ್ಕಾಗಿ ಅಭಿಮಾನಿಯೊಬ್ಬ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಶ್ಯಾನುಬೋಗನಹಳ್ಳಿಯ ರಾಜೇಂದ್ರ (40) ನೇಣಿಗೆ ಶರಣಾದ ಅಭಿಮಾನಿ.

ಪುನೀತ್ ರಾಜಕುಮಾರರಂತೆಯೇ ತನ್ನ ಕಣ್ಣನ್ನು ದಾನ ಮಾಡಿ ಎಂದು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಭಾನುವಾರ ಸಂಜೆ ಸಾವನ್ನಪ್ಪಿದ ರಾಜೇಂದ್ರನ ಮೃತದೇಹವನ್ನು ಕಂಡ ಸಂಬಂಧಿಗಳು ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ನಟ ಪುನೀತ್ ಸಾವಿನಿಂದ ಕಂಗಾಲಾಗಿದ್ದ ರಾಜೇಂದ್ರ, ಇದೇ ದುಃಖದಲ್ಲಿ ಪುನೀತ್ ಕಣ್ಣು ದಾನ ಮಾಡಿದ್ದನ್ನು ಆದರ್ಶವಾಗಿ ತೆಗೆದುಕೊಂಡು ವಿಷಯವನ್ನು ಮನೆಯವರಿಗೆ ತಿಳಿಸುತ್ತಲೇ ಇದ್ದ. ವರ್ಷದ ಹಿಂದೆ ಮದುವೆಯಾಗಿದ್ದ ರಾಜೇಂದ್ರ ತಮ್ಮ ನೆಚ್ಚಿನ ನಾಯಕನ ಮಾದರಿಯನ್ನು ಜೀವಂತವಾಗಿಡಲು ಜೀವ ಬಿಟ್ಟಿದ್ದಾನೆ ಎಂದು ಸಹೋದರ ಲೋಹಿತ್ ತಿಳಿಸಿದ್ದಾರೆ.

error: Content is protected !!