December 26, 2024

Newsnap Kannada

The World at your finger tips!

sakshi

ನಕಲಿ ಪೊಲೀಸ್ ಹೆಸರಿನಲ್ಲಿ ಯುವತಿ ಮಾವನಿಗೆ ದೂರವಾಣಿ: ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಸಾಕ್ಷಿ ಆತ್ಮಹತ್ಯೆ

Spread the love

ಪಾಗಲ್ ಪ್ರೇಮಿಯ ಹುಚ್ಚಾಟದ ಕಥೆ. ಮಾಜಿ ಪ್ರಿಯಕರನ ಹುಚ್ಚಾಟಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಘಟನೆ ಬೆಂಗಳೂರಿನಲ್ಲಿ ಜರುಗಿದೆ.

ಮೃತ ಯುವತಿ ಸಾಕಮ್ಮ(ಸಾಕ್ಷಿ). ಮೂಲತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವಳು.

ಬೆಂಗಳೂರಿನ ದೊಡ್ಡಬಿದರಕಲ್ಲು ಗ್ರಾಮದಲ್ಲಿರುವ ತನ್ನ ಅಕ್ಕನ ಮನೆಯಲ್ಲಿದ್ದುಕೊಂಡು,
ಯಶವಂತಪುರದ ಮೆಟ್ರೋ ಕ್ಯಾಸ್ ಅಂಡ್ ಕ್ಯಾರಿಂ ಮಾರ್ಕೆಟ್‍ನಲ್ಲಿ ಕೆಲಸ ಮಾಡುತ್ತಿದ್ದಳು.

ಅಲ್ಲಿ ಸಾಕ್ಷಿಗೆ ಅರುಣ್ ಎಂಬಾತನ ಪರಿಚಯವಾಗಿತ್ತು. ಸಾಕ್ಷಿ ಸಲುಗೆಯಿಂದ ಇರೋದನ್ನು ನೋಡಿ ಅರುಣ್, ಆಕೆಯ ಹಿಂದೆ ಬಿದ್ದಿದ್ದ. ಹಾಗೂ ಕೆಲದಿನಗಳಿಂದ ಮದುವೆ ಆಗುವಂತೆ ಪೀಡಿಸುತ್ತಿದ್ದ. ಈ ವಿಷಯವನ್ನ ಸಾಕ್ಷಿ ಮನೆಯಲ್ಲೂ ತಿಳಿಸಿದ್ದಳಂತೆ. ಬೇರೆ ಹುಡುಗನ ಜೊತೆ ಮದುವೆ ಮಾಡಿದ್ರೆ ಸಮಸ್ಯೆ ಸರಿ ಹೋಗುತ್ತೆ ಎಂದು ಸಾಕ್ಷಿ ಮನೆಯವರು ಮದುವೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು.

ಸಾಕ್ಷಿಗೆ ಮದುವೆ ಮಾಡಲು ಓಡಾಡ್ತಿರೋ ವಿಷಯ ತಿಳಿದ ಅರುಣ್, ಸಾಕ್ಷಿಯ ಭಾವ ಪ್ರಜ್ವಲ್‍ಗೆ ತನ್ನ ಸ್ನೇಹಿತ ಗೋಪಾಲನ ಕಡೆಯಿಂದ ಪೊಲೀಸರ ಸೋಗಿನಲ್ಲಿ ಕರೆ ಮಾಡಿಸಿದ್ದ. ಬಸವೇಶ್ವರ ಪೊಲೀಸ್ ಠಾಣೆಯಿಂದ ಕರೆ ಮಾಡ್ತಿದ್ದೀನಿ. ಅರುಣ್ ಎಂಬ ಯುವಕ ನಿಮ್ಮ ಹೆಸರೇಳಿ ಸೂಸೈಡ್ ಅಟೆಂಮ್ಟ್ ಮಾಡ್ಕೊಂಡಿದ್ದಾನೆ. ಅವನನ್ನು ಮದುವೆ ಮಾಡಿಕೊಳ್ಳಿ, ಇಲ್ಲವಾದ್ರೆ ಎಫ್‍ಐಆರ್ ದಾಖಲಿಸುತ್ತೇವೆ ಅಂತ ಬೆದರಿಸಿದ್ದ.

ಈ ಸುದ್ದಿ ಕೇಳಿ ಬೆದರಿದ ಸಾಕ್ಷಿ, ಅಕ್ಕನ ಮನೆಯಲ್ಲೇ ಫ್ಯಾನ್‍ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ.
ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೀಣ್ಯಾ ಪೊಲೀಸರು ಆರೋಪಿಗಳಾದ ಪಾಗಲ್ ಪ್ರೇಮಿ ಅರುಣ್ ಹಾಗೂ ನಕಲಿ ಪೊಲೀಸ್ ಗೋಪಾಲ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!