Categories: Main News

ಪಿಯುಸಿ ಪರೀಕ್ಷೆ ರದ್ದು: ಮನನೊಂದ ವಿದ್ಯಾರ್ಥಿನಿ‌ ಆತ್ಮಹತ್ಯೆ

ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಿದ್ಯಾರ್ಥಿನಿಯೊಬ್ಬಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಧನ್ಯಾ (17) ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡವಳು. ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಮನನೊಂದು ನೇಣಿಗೆ ಶರಣಾಗಿದ್ದಾಳೆಂದು‌ ಪೋಲಿಸರು ತಿಳಿಸಿದ್ದಾರೆ. ಈ ಬಗ್ಗೆ ಶಿರಸಿ ಗ್ರಾಮಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿಯ ಯಡಳ್ಳಿ ಗ್ರಾಮದ ಧನ್ಯಾ ಶಿರಸಿಯ ಮಾರಿಕಾಂಬಾ ಕಾಲೇಜಿನಲ್ಲಿ ದ್ವಿತೀಯ ಪಿ.ಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು.

ದ್ವಿತೀಯ ಪಿಯುಸಿಯ ಪರೀಕ್ಷೆ ರದ್ದಾಗಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಖುಷಿಯಿಂದ ಕುಣಿದಾಡುತ್ತಿದ್ದರೆ, ಮತ್ತೊಂದೆಡೆ ತುಂಬಾ ಶ್ರಮಪಟ್ಟು ಓದಿ, ರ್ಯಾಂಕ್‌ ಬರುವ ನಿರೀಕ್ಷೆಯಲ್ಲಿ ಕಾದುಕುಳಿತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಮಾಡಿರುವ ಪರಿಣಾಮ ಶಾಕ್‌ ನೀಡುವಂತಾಗಿದೆ.

ತುಂಬಾ ಶ್ರಮಪಟ್ಟು ಓದಿದ್ದೇನೆ, ನಮಗೆ ಪರೀಕ್ಷೆ ಬೇಕು ಎಂದುಕೊಳ್ಳುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ಮಾಡಲಾಗುವುದು, ಯಾರೂ ನೊಂದುಕೊಳ್ಳುವ ಅಗತ್ಯವಿಲ್ಲ. ಖಂಡಿತವಾಗಿಯೂ ಪರೀಕ್ಷೆ ನಡೆಸಿ ಅವರ ಆಸೆ ಈಡೇರಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಭರವಸೆ ನೀಡಿದ್ದರೂ ಈ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Team Newsnap
Leave a Comment
Share
Published by
Team Newsnap

Recent Posts

ಡಿ.20 ರಿಂದ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಸಿಎಂ

ಬೆಂಗಳೂರು : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ಡಿಸೆಂಬರ್‌ 20 ರಿಂದ ಮೂರು… Read More

June 25, 2024

ವಿಷಯುಕ್ತ ಮದ್ಯ ಸೇವಿಸಿ 58 ಮಂದಿ ದುರ್ಮರಣ

ಚೆನ್ನೈ : ವಿಷಯುಕ್ತ ಮದ್ಯ ಕುಡಿದು ತಮಿಳು ನಾಡಿನಲ್ಲಿ 58 ಮಂದಿ ಮೃತಪಟ್ಟಿದ್ದಾರೆ. ಆರೋಗ್ಯ ಸಚಿವ ಮಾ ಸುಬ್ರಹ್ಮಣಿಯನ್, ದುರಂತದಲ್ಲಿ… Read More

June 25, 2024

ರಾಜ್ಯ ಸರ್ಕಾರದಿಂದ ಪ್ರತಿ ಲೀಟರ್ ‘ಹಾಲಿಗೆ’ 2.10 ರೂ ಹೆಚ್ಚಳ

ಬೆಂಗಳೂರು: ಪೆಟ್ರೋಲ್‌, ಡಿಸೇಲ್‌ ಮೇಲಿನ ಸೆಸ್‌ ದರವನ್ನು ಹೆಚ್ಚಿದ ರಾಜ್ಯ ಸರ್ಕಾರ ಇದೀಗ ಹಾಲಿನ ದರವನ್ನು ಹೆಚ್ಚಿಸಿ ಆದೇಶವನ್ನು ಹೊರಡಿಸಿದೆ.… Read More

June 25, 2024

ನಿವೃತ್ತ ಸಿಜಿಎಂ ಎ.ಕೆ.ಸಿಂಗ್ ‘ಬಂಧನ್ ಬ್ಯಾಂಕ್’ ಮಂಡಳಿಯ ಹೆಚ್ಚುವರಿ ನಿರ್ದೇಶಕರಾಗಿ ನೇಮಕ

ಇಂದು ರಿಸರ್ವ್ ಬ್ಯಾಂಕ್ , ಎ.ಕೆ.ಸಿಂಗ್ ಅವರನ್ನು ಬಂಧನ್ ಬ್ಯಾಂಕಿನ ಮಂಡಳಿಯ ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಿದೆ. ಆರ್‌ಬಿಐನ ಮುಖ್ಯ ಜನರಲ್… Read More

June 25, 2024

ಪುನೀತ್ ಮತ್ತೆ ಹುಟ್ಟಿ ಬಂದರೆ ಮಗಳ ಹೊಟ್ಟೆಯಲ್ಲಿ : ಆತ್ಮ ಸಂಭಾಷಣೆ ಯಲ್ಲಿ ಪುನೀತ್ ಹೇಳಿಕೆ

ಬೆಂಗಳೂರು: ಕಳೆದ ಮೂರು ವರ್ಷಗಳ ಹಿಂದೆ ಹಠಾತ್ ನಿಧನರಾದ ಪುನೀತ್ ರಾಜ್ ಕುಮಾರ್ ಪುನರ್ ಜನ್ಮದಲ್ಲಿ ಮಗಳ ಹೊಟ್ಟೆಯಲ್ಲಿ ಹುಟ್ಟಿ… Read More

June 24, 2024

ಸರ್ಕಾರಿ ನೌಕರರಿಗೆ 27% ವೇತನ ಹೆಚ್ಚಳ : ಸಿಎಂ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಶೇಕಡಾ 27 %ರಷ್ಟು ವೇತನ… Read More

June 20, 2024