ಬೆಂಗಳೂರು : ರಾಜ್ಯ ಸರ್ಕಾರ 2024 ನೇ ಸಾಲಿನ ‘ಸಾರ್ವತ್ರಿಕ ರಜೆ’ ಗಳ ಪಟ್ಟಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಸಾರ್ವತ್ರಿಕ ರಜಾ ದಿನಗಳ ಪಟ್ಟಿ
- ದಿನಾಂಕ 15-01-2024 ಸೋಮವಾರ – ಮಕರ ಸಂಕ್ರಾಂತಿ
- ದಿನಾಂಕ 26-01-2024 ಶುಕ್ರವಾರ-ಗಣರಾಜ್ಯೋತ್ಸ
- ದಿನಾಂಕ 08-03-2024- ಶುಕ್ರವಾರ – ಮಹಾಶಿವರಾತ್ರಿ
- ದಿನಾಂಕ 29-03-2024ರಂದು ಶುಕ್ರವಾರ -ಗುಡ್ ಪ್ರೈಡೆ
- ದಿನಾಂಕ 09-04-2024 – ಮಂಗಳವಾರ – ಯುಗಾದಿ ಹಬ್ಬ
- ದಿನಾಂಕ 11-04-2024 – ಗುರುವಾರ ಖುತುಬ್ ಎ ರಂಜಾನ್
- ದಿನಾಂಕ 01-05-2024ರಂದು ಬುಧವಾರ – ಕಾರ್ಮಿಕರ ದಿನಾಚರಣೆ
- ದಿನಾಂಕ 10-05-2024ರ ಶುಕ್ರವಾರ – ಬಸವ ಜಯಂತಿ, ಅಕ್ಷಯ ತೃತೀಯ
- ದಿನಾಂಕ 17-06-2024ರ ಸೋಮವಾರ – ಬಕ್ರೀದ್
- ದಿನಾಂಕ 17-07-2024ರ ಬುಧವಾರ – ಮೋಹರಂ ಕಡೇ ದಿನ
- ದಿನಾಂಕ 15-08-2024ರ ಗುರುವಾರ – ಸ್ವಾತಂತ್ರ್ಯ ದಿನಾಚರಣೆ
- ದಿನಾಂಕ 07-09-2024ರ ಶನಿವಾರ – ವರಸಿದ್ಧಿ ವಿನಾಯಕ ವ್ರತ
- ದಿನಾಂಕ 16-09-2024ರ ಸೋಮವಾರ – ಈದ್ ಮಿಲಾದ್
- ದಿನಾಂಕ 02-10-2024ರ ಬುಧವಾರ – ಗಾಂಧಿ ಜಯಂತಿ, ಮಹಾಲಯ ಅಮವಾಸೆ
- ದಿನಾಂಕ 11-10-2024ರ ಶುಕ್ರವಾರ – ಮಹಾನವಮಿ, ಆಯುಧಪೂಜೆ
- ದಿನಾಂಕ 17-10-2024ರ ಗುರುವಾರ – ಮಹರ್ಷಿ ವಾಲ್ಮೀಕಿ ಜಯಂತಿ
- ದಿನಾಂಕ 31-10-2024ರ ಗುರುವಾರ – ನರಕ ಚತುರ್ದಶಿ
- ದಿನಾಂಕ 01-11-2024ರ ಶುಕ್ರವಾರ – ಕನ್ನಡ ರಾಜ್ಯೋತ್ಸವ
- ದಿನಾಂಕ 02-11-2024ರ ಶನಿವಾರ – ಬಲಿಪಾಡ್ಯಮಿ, ದಿಪಾವಳಿ
- ದಿನಾಂಕ 18-11-2024ರ ಸೋಮವಾರ – ಕನಕದಾಸ ಜಯಂತಿ
- ದಿನಾಂಕ 25-12-2024ರ ಬುಧವಾರ – ಕ್ರಿಸ್ ಮಸ್
ಸೂಚನೆ:
1. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ|| ಬಿ. ಆರ್. ಅಂಬೇಡ್ಕರ್ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (12.10.2024) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ. 100 ಕೋಟಿ ಮಹಿಳಾ ಪ್ರಯಾಣಿಕರ ದಾಟಿದ ಶಕ್ತಿ ಯೋಜನೆ !
2. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.
3. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.
4. ದಿನಾಂಕ:03.09.2024 (ಮಂಗಳವಾರ) ಕೈಲ್ ಮೂಹೂರ್ತ, ದಿನಾಂಕ:17.10.2024 (ಗುರುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:14.12.2024 (ಶನಿವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
Karnataka Holiday List 2024, ರಾಜ್ಯ ಸರ್ಕಾರದಿಂದ 2024 ನೇ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿ ಬಿಡುಗಡೆ – List of public holidays for the year 2024 has been released by the state government #holidaylist #karnataka #india #mysore #bengaluru
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ