Trending

ದೇಶದಲ್ಲಿ ಮತ್ತೆ ಬರಲಿದೆ ಪಬ್‌ಜಿ ಮೊಬೈಲ್ ಗೇಮ್!

ಬಳಕೆದಾರರ ಭದ್ರತೆ ಮತ್ತು ಖಾಸಗಿತನದ ದೃಷ್ಟಿಯಿಂದ  ಪಬ್‌ಜಿ ಗೇಮ್ ಮತ್ತು ಚೀನಾ ಮೂಲದ ಹಲವು ಅಪ್ಲಿಕೇಶನ್‌ಗಳನ್ನು ದೇಶದಲ್ಲಿ ನಿಷೇಧಿಸಲಾಗಿತ್ತು.

ಪಬ್‌ಜಿ ಮೊಬೈಲ್ ಗೇಮ್ ಅತ್ಯಂತ ಜನಪ್ರಿಯತೆ ಹೊಂದಿದೆ. ದೇಶದಲ್ಲಿ ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿತ್ತು. ಆದರೆ ನಿಷೇಧದ ಬಳಿಕ ಪಬ್‌ಜಿ ಗೇಮ್ ಮೊಬೈಲ್‌ನಲ್ಲಿ ಲಭ್ಯವಿಲ್ಲ. ಆದರೆ ಹೊಸ ರೂಪದಲ್ಲಿ ದೇಶದಲ್ಲಿ ಪಬ್‌ಜಿ ಮತ್ತೆ ಬಿಡುಗಡೆಗೆ ಸಜ್ಜಾಗಿದೆ.

ಬಳಕೆದಾರರ ಭದ್ರತೆ ಮತ್ತು ಸುರಕ್ಷತೆ ಯನ್ನು ಗಮನದಲ್ಲಿರಿಸಿಕೊಂಡು ವಿಶೇಷವಾಗಿ ದೇಶದಲ್ಲಿಯೇ ಸರ್ವರ್ ನಿರ್ವಹಣೆ ಮಾಡುವ ಮೂಲಕ ಜತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪಬ್‌ಜಿ ಹೊಸ ಆವೃತ್ತಿ ದೇಶದಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್ ಕಂಪನಿಯ ಒಡೆತನದಲ್ಲಿನ ಪಬ್‌ಜಿ ಮೊಬೈಲ್, ಹೊಸದಾಗಿ ದೇಶದ ಮಾರುಕಟ್ಟೆಗೆ ಪೂರಕವಾದ ಮತ್ತು ಹೆಚ್ಚಿನ ಬಳಕೆದಾರರ ಭದ್ರತೆ ಹೊಂದಿರುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಸರಕಾರದ ನಿಯಮಾವಳಿಗೆ ಅನುಗುಣವಾಗಿ ಹೊಸ ಗೇಮ್ ಅಭಿವೃದ್ಧಿಪಡಿಸಲಾಗುತ್ತಿದೆ. ಸರ್ವರ್ ನಿರ್ವಹಣೆ ಮತ್ತು ಇತರ ತಾಂತ್ರಿಕ ಅಗತ್ಯವನ್ನು ದೇಶದಲ್ಲೇ ಸ್ಥಾಪಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.

ದೇಶದಲ್ಲಿ ಪಬ್‌ಜಿ ನಿಷೇಧಿಸಬೇಕು ಎನ್ನುವ ಕೂಗು ಒಂದೆಡೆಯಾಗಿದ್ದರೆ, ಮತ್ತೊಂದೆಡೆ ಚೀನಾ ಮೂಲದ ಕಂಪನಿ ಸರ್ವರ್ ನಿರ್ವಹಣೆ ಹೊಂದಿದ್ದ ಪಬ್‌ಜಿ ಬಳಕೆದಾರರ ಮಾಹಿತಿ ಕದಿಯಲಾಗುತ್ತದೆ ಎಂಬ ಆರೋಪದ ಮೇರೆಗೆ ಕೇಂದ್ರ ಸರಕಾರ ಪಬ್‌ಜಿ ಗೇಮ್ ನಿಷೇಧಿಸಿತ್ತು. ಈಗ ಮತ್ತೆ ಹೊಸರೂಪದಲ್ಲಿ ಪಬ್‌ಜಿ ಗೇಮ್ ದೇಶದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

Team Newsnap
Leave a Comment
Share
Published by
Team Newsnap

Recent Posts

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More

September 21, 2024

10 ವರ್ಷದ ಬಾಲಕ ಹೃದಯಘಾತದಿಂದ ಸಾವು

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್‌… Read More

September 21, 2024

ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More

September 21, 2024

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024