ಬಳಕೆದಾರರ ಭದ್ರತೆ ಮತ್ತು ಖಾಸಗಿತನದ ದೃಷ್ಟಿಯಿಂದ ಪಬ್‌ಜಿ ಗೇಮ್ ಮತ್ತು ಚೀನಾ ಮೂಲದ ಹಲವು ಅಪ್ಲಿಕೇಶನ್‌ಗಳನ್ನು ದೇಶದಲ್ಲಿ ನಿಷೇಧಿಸಲಾಗಿತ್ತು.
ಪಬ್‌ಜಿ ಮೊಬೈಲ್ ಗೇಮ್ ಅತ್ಯಂತ ಜನಪ್ರಿಯತೆ ಹೊಂದಿದೆ. ದೇಶದಲ್ಲಿ ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿತ್ತು. ಆದರೆ ನಿಷೇಧದ ಬಳಿಕ ಪಬ್‌ಜಿ ಗೇಮ್ ಮೊಬೈಲ್‌ನಲ್ಲಿ ಲಭ್ಯವಿಲ್ಲ. ಆದರೆ ಹೊಸ ರೂಪದಲ್ಲಿ ದೇಶದಲ್ಲಿ ಪಬ್‌ಜಿ ಮತ್ತೆ ಬಿಡುಗಡೆಗೆ ಸಜ್ಜಾಗಿದೆ.
ಬಳಕೆದಾರರ ಭದ್ರತೆ ಮತ್ತು ಸುರಕ್ಷತೆ ಯನ್ನು ಗಮನದಲ್ಲಿರಿಸಿಕೊಂಡು ವಿಶೇಷವಾಗಿ ದೇಶದಲ್ಲಿಯೇ ಸರ್ವರ್ ನಿರ್ವಹಣೆ ಮಾಡುವ ಮೂಲಕ ಜತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪಬ್‌ಜಿ ಹೊಸ ಆವೃತ್ತಿ ದೇಶದಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.
ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್ ಕಂಪನಿಯ ಒಡೆತನದಲ್ಲಿನ ಪಬ್‌ಜಿ ಮೊಬೈಲ್, ಹೊಸದಾಗಿ ದೇಶದ ಮಾರುಕಟ್ಟೆಗೆ ಪೂರಕವಾದ ಮತ್ತು ಹೆಚ್ಚಿನ ಬಳಕೆದಾರರ ಭದ್ರತೆ ಹೊಂದಿರುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಸರಕಾರದ ನಿಯಮಾವಳಿಗೆ ಅನುಗುಣವಾಗಿ ಹೊಸ ಗೇಮ್ ಅಭಿವೃದ್ಧಿಪಡಿಸಲಾಗುತ್ತಿದೆ. ಸರ್ವರ್ ನಿರ್ವಹಣೆ ಮತ್ತು ಇತರ ತಾಂತ್ರಿಕ ಅಗತ್ಯವನ್ನು ದೇಶದಲ್ಲೇ ಸ್ಥಾಪಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.
ದೇಶದಲ್ಲಿ ಪಬ್‌ಜಿ ನಿಷೇಧಿಸಬೇಕು ಎನ್ನುವ ಕೂಗು ಒಂದೆಡೆಯಾಗಿದ್ದರೆ, ಮತ್ತೊಂದೆಡೆ ಚೀನಾ ಮೂಲದ ಕಂಪನಿ ಸರ್ವರ್ ನಿರ್ವಹಣೆ ಹೊಂದಿದ್ದ ಪಬ್‌ಜಿ ಬಳಕೆದಾರರ ಮಾಹಿತಿ ಕದಿಯಲಾಗುತ್ತದೆ ಎಂಬ ಆರೋಪದ ಮೇರೆಗೆ ಕೇಂದ್ರ ಸರಕಾರ ಪಬ್‌ಜಿ ಗೇಮ್ ನಿಷೇಧಿಸಿತ್ತು. ಈಗ ಮತ್ತೆ ಹೊಸರೂಪದಲ್ಲಿ ಪಬ್‌ಜಿ ಗೇಮ್ ದೇಶದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು