ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಹೆಸರಿನಲ್ಲಿ ಪಬ್ ಇದ್ದು, ಅದಕ್ಕೆ ಕೋಟ್ಯಂತರ ಬಾಡಿಗೆ ಬರುತ್ತಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ ಅವರು, ಸಿಎಂ ಅವರ ಸೊಸೆ ಹೆಸರಿನಲ್ಲಿ ಪಬ್ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, “ಸಿದ್ದರಾಮಯ್ಯ, ನಿಮ್ಮ ಸೊಸೆಯ ಹೆಸರಿನಲ್ಲಿ ಪಬ್ ಇಲ್ಲವೇ? ಅದಕ್ಕೆ ಬಾಡಿಗೆ ಬರುತ್ತಿಲ್ಲವೇ?” ಎಂದು ಪ್ರಶ್ನಿಸಿದರು. ಜೊತೆಗೆ ಕಾಂಗ್ರೆಸ್ ನಾಯಕ ಬೈರತಿ ಸುರೇಶ್ ಮೇಲೆಯೂ ವಾಗ್ದಾಳಿ ನಡೆಸಿ, ಅವರ ಮೇಲೆ ಕ್ರಮ ತೆಗೆದು ಹಗರಣಗಳನ್ನು ಬಯಲು ಮಾಡಬೇಕೆಂದರು.
ಕುರುಬ ಸಮುದಾಯದ ಬಗ್ಗೆ ಸಿದ್ದರಾಮಯ್ಯ ಮತ್ತು ಬೈರತಿ ಸುರೇಶ್ ಅವರ ಕೆಲಸವನ್ನು ತೀವ್ರವಾಗಿ ವಿರೋಧಿಸಿದ ವಿಶ್ವನಾಥ್, “ಕುರುಬರ ಹೆಸರಿನಲ್ಲಿ ಸಿದ್ದರಾಮಯ್ಯ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.ಇದನ್ನು ಓದಿ –8 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ
ಇದೆಲ್ಲದರ ನಡುವೆ ವಿಶ್ವನಾಥ್ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೂ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, “ಯೋಗೇಶ್ವರ್ ಅವರು ಸೈನಿಕರಂತೆಲ್ಲ ಅಲ್ಲ, ಅವರು ಕಾಂಗ್ರೆಸ್ ಪಕ್ಷಕ್ಕೆ ಮತ್ತೊಬ್ಬ ಫ್ರಾಡ್,” ಎಂದು ಗಂಭೀರ ಆರೋಪ ಮಾಡಿದ್ದಾರೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು