March 15, 2026

Newsnap Kannada

The World at your finger tips!

police

ಪ್ರಮೋಷನ್ ಸಿಕ್ಕ ಖುಷಿಯಲ್ಲಿ​ ಠಾಣೆಯಲ್ಲಿ ಸೆಲೆಬ್ರೇಟ್ ಮಾಡಿದ್ದ ಪಿಎಸ್ ಐ ಅಮಾನತ್ತು

Spread the love

ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ರಾಜು ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಹಿನ್ನೆಲೆ ಅವರನ್ನು ಅಮಾನತು ಮಾಡಿ ಡಿಜಿ-ಐಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಸ್ಟೇಷನ್​ನಲ್ಲಿ ಅದ್ದೂರಿ ಸಂಭ್ರಮಾಚರಣೆಯಿಂದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು.

ಇತ್ತೀಚೆಗಷ್ಟೇ ರಾಜುಗೆ ಪಿಎಸ್ಐಯಿಂದ ಇನ್ಸ್ ಪೆಕ್ಟರ್ ಆಗಿ ಮುಂಬಡ್ತಿ ಸಿಕ್ಕಿತ್ತು. ಯಾವಾಗ ಬರ್ತ್ ಡೇ ವಿಡಿಯೋ ಪೋಟೋ ವೈರಲ್ ಆಗಿತ್ತೋ ಇದರ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಡಿಜಿ ಆದೇಶಿಸಿದ್ರು.

ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿ.ಡಿ.ಚನ್ನಣನವರ್ ತನಿಖಾ ವರದಿ ನೀಡಿ ಹಿನ್ನೆಲೆಯಲ್ಲಿ ಡಿಜಿ ಪ್ರವೀಣ್ ಸೂದ್ ಪಿಎಸ್ಐ ರಾಜು ಸಂಸ್ಪೆಡ್ ಮಾಡಿ ಆದೇಶಿಸಿದ್ದಲ್ಲದೇ ,ಮುಂಬಡ್ತಿಯನ್ನು ತಡೆ ಹಿಡಿದಿದ್ದಾರೆ.

ಇಲಾಖಾ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಹೊಸಕೋಟೆ ಠಾಣೆಯಲ್ಲಿ ಪಿಎಸ್ಐ ರಾಜು ವಿರುದ್ಧವೇ ಎಫ್ಐಆರ್ ದಾಖಲಾಗಿದೆ.

error: Content is protected !!