December 28, 2024

Newsnap Kannada

The World at your finger tips!

psi a

ಮದುವೆ ಮನೆಗೆ ನುಗ್ಗಿ ಲಾಠಿ ಬೀಸಿದ PSI ಅಮಾನತ್ತು: ಐವರು ಪೋಲಿಸರು ಎತ್ತಂಗಡಿ

Spread the love

ಮದುವೆ ಮನೆಯಲ್ಲಿ ಡಿಜೆ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸರು ಮದುವೆ ಮನೆಗೆ ನುಗ್ಗಿ ಮನಬಂದಂತೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯ ಕೋಟ ಪಿಎಸ್ಐ ಸಂತೋಷ್ ಅವರನ್ನು ಅಮಾನತ್ತು ಮಾಡಲಾಗಿದೆ.

ಪಶ್ಚಿಮ ವಲಯ ಐಜಿಪಿ ಈ ಆದೇಶ ನೀಡಿ ಐವರು ಪೋಲಿಸರನ್ನು ಎತ್ತಂಗಡಿ ಮಾಡಲಾಗಿದೆ.

ಮದುವೆ ಮನೆಗೆ ನುಗ್ಗಿ ಮದುಮಗ ಸೇರಿದಂತೆ ಹಲವರಿಗೆ ಥಳಿಸಿದ ಆರೋಪ ಕೇಳಿ ಬಂದ ಬೆನ್ನಲ್ಲೇ ಪಶ್ಚಿಮ ವಲಯ ಐಜಿಪಿ ಈ ಕ್ರಮ ಕೈಗೊಂಡಿದ್ದಾರೆ.

ಘಟನೆಯ ವಿಡಿಯೊ ವೈರಲ್​ ಆಗುತ್ತಿದ್ದಂತೆ ಪೊಲೀಸ್ ದೌರ್ಜನ್ಯದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನರಿತ ಐಜಿಪಿ ಪಿಎಸ್ಐರನ್ನು ಅಮಾನತುಗೊಳಿಸಿ ಉಳಿದ ಐವರು ಪೊಲೀಸ್​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!