ಸರ್ಕಾರಿ ನೌಕರ ರತನ್ ಎಂಬಾತ ಥೈಲ್ಯಾಂಡ್ ಯುವತಿಯನ್ನು ಕರೆತಂದು ಮೈಸೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದನೆಂಬ ಮಾಹಿತಿ ತಿಳಿದು ಪೊಲೀಸರು ದಾಳಿ ಮಾಡಿದ್ದಾರೆ.
ಅನಾಮಿಕ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೋಗಾದಿ ಬಳಿಯ ಹೋಟೆಲ್‌ನಲ್ಲಿ ವಾಸವಿದ್ದ ಥೈಲ್ಯಾಂಡ್ ಯುವತಿ ಮತ್ತು ಇನ್ನೊಬ್ಬ ಯುವತಿಯನ್ನು ರಕ್ಷಿಸಿದ್ದಾರೆ. ಆರೋಪಿ ರತನ್ ಸಹಕರಿಸಿದ್ದ ರೇವಣ್ಣ ಎಂಬಾತನನ್ನೂ ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ರತನ್ ಹಾಗೂ ರೇವಣ್ಣ ಥೈಲ್ಯಾಂಡ್ ಯುವತಿಯರನ್ನು ಬಳಸಿ ಪ್ರತಿ ಗ್ರಾಹಕರಿಂದ ₹8,000 ರಿಂದ ₹10,000 ವಸೂಲಿ ಮಾಡುತ್ತಿದ್ದರು. ಪ್ರಕರಣ ದಾಖಲಾದ ಬಳಿಕ, ಬಂಧಿತ ಯುವತಿಯರು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಥೈಲ್ಯಾಂಡ್ ಯುವತಿ, ವಿಚಾರಣೆ ವೇಳೆ, “ಬ್ಯೂಸಿನೆಸ್ ಪರ್ಪಸ್‌ನಿಂದ 1 ದಿನದ ಹಿಂದಷ್ಟೇ ಮೈಸೂರಿಗೆ ಬಂದಿದ್ದೇನೆ” ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಒಡನಾಡಿ ಸೇವಾ ಸಂಸ್ಥೆ ಸಹಕಾರದಿಂದ ನಡೆದ ದಾಳಿಯಲ್ಲಿ 7 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.ಇದನ್ನು ಓದಿ –ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಕಠಿಣ ಕ್ರಮ: ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು – ಸಿಎಂ ಸಿದ್ದರಾಮಯ್ಯ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು