January 6, 2025

Newsnap Kannada

The World at your finger tips!

WhatsApp Image 2022 05 22 at 7.44.59 AM

ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ರಾಕ್ ಲೈನ್ ಸ್ಪರ್ಧೆ – ತಲ್ಲಣಗೊಂಡ ಸ್ಪರ್ಧಿಗಳು

Spread the love

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸ್ಪರ್ಧೆಗೆ ಇಳಿದು, ಸದ್ದಿಲ್ಲದೇ ಮೇ 18 ರಂದು ನಾಮಪತ್ರ ಸಲ್ಲಿಸಿದ್ದಾರೆ. ಮೇ 28 ರಂದು ಚುನಾವಣೆ ನಡೆಯಲಿದೆ.

ಮೂರು ವರ್ಷಗಳ ನಂತರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದೆ. ನಿರ್ಮಾಪಕರಾದ ಸಾರಾ ಗೋವಿಂದು, ಬಾ.ಮಾ.ಹರೀಶ್‌ ನಾಮಪತ್ರ ಸಲ್ಲಿಸಿದ್ದರು.ರಾಕ್‌ಲೈನ್‌ ವೆಂಕಟೇಶ್‌ ನಾಮಪತ್ರ ಸಲ್ಲಿಸಿರುವುದು, ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೀತಿದೆ.

ಕಲಾವಿದರ ಸಂಘ ಹಾಗೂ ನಿರ್ಮಾಪಕರ ವಲಯದಲ್ಲಿ ಸಾಕಷ್ಟು ಸಕ್ರಿಯವಾಗಿರುವ ರಾಕ್‌ಲೈನ್ ವೆಂಕಟೇಶ್‌ ಅಧ್ಯಕ್ಷ ಸ್ಥಾನಕ್ಕೆ ಯಾಕೆ ನಾಮಪತ್ರ ಸಲ್ಲಿಸಿದರು ಅನ್ನೋದರ ಹಿಂದೆ ಸಾಕಷ್ಟು ಕಾರಣಗಳಿವೆ.

ವಾಣಿಜ್ಯ ಮಂಡಳಿಯ ಆಡಳಿತ ಹಲವು ವರ್ಷಗಳಿಂದ ಕೆಲವರ ಕೈಯಲ್ಲಿದೆ. ರೋಟೇಷನ್‌ ಪಾಲಿಸಿಯಲ್ಲಿ ಅಧ್ಯಕ್ಷ ಗಿರಿ ಚೇಂಜ್ ಆಗಲಿ ಎಂಬ ಕಾರಣಕ್ಕಾಗಿ ಹೊಸ ಜವಾಬ್ದಾರಿ ತೆಗೆದುಕೊಂಡು ಚಿತ್ರರಂಗವನ್ನು ಮತ್ತೆ ಒಂದುಗೂಡಿಸುವ ಲೆಕ್ಕಾಚಾರದಿಂದ ರಾಕ್‌ಲೈನ್‌ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : ದೇಶದ ಜನತೆಗೆ ಸಿಹಿ ಸುದ್ದಿ : ಪೆಟ್ರೋಲ್ ಗ್ಯಾಸ್ ಸಿಮೆಂಟ್ ಗೊಬ್ಬರ ಪ್ಲಾಸ್ಟಿಕ್ ಉಕ್ಕು ದರ ಇಳಿಕೆ

ಸಾ.ರಾ.ಗೋವಿಂದು, ಬಾ.ಮಾ.ಹರೀಶ್, ರಾಕ್‌ಲೈನ್ ವೆಂಕಟೇಶ್ ಜೊತೆ ಮಾತುಕತೆ ನಡೆಸಿ ನಾಮಪತ್ರ ವಾಪಸ್ ಪಡೆಯುವಂತೆ ಒತ್ತಡ ಹೇರಿದ್ದಾರೆನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!