ಆನ್ ಲೈನ್ ಮತ್ತು ಆಫ್ ಲೈನ್ ಕ್ಲಾಸ್ ಗಳು ಸ್ಥಗಿತಕ್ಕೆ ಖಾಸಗಿ ಶಾಲೆಗಳ ಸಂಘ ನಿರ್ಧಾರ

Team Newsnap
1 Min Read
Just for fun, I threatened with a bomb call - statement of a minor boy ಜಸ್ಟ್ ಫಾರ್ ಫನ್‍ ಗೆ ಬಾಂಬ್ ಬೆದರಿಕೆ ಹಾಕಿದ್ದೆ – ಅಪ್ರಾಪ್ತ ಬಾಲಕ ಹೇಳಿಕೆ

ಕೊರೊನಾ ಸೋಂಕು ಇಳಿಮುಖ ವಾಗುತ್ತಿದ್ದಂತೆ ಸರ್ಕಾರ ಜನವರಿ 1 ರಿಂದ ಶಾಲೆ ಆರಂಭ ಮಾಡಲು ತೀರ್ಮಾನ ಮಾಡಿದರೆ, ಇತ್ತ ಅನುದಾನ ರಹಿತ ಖಾಸಗಿ ಶಾಲೆಗಳ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಾಳೆಯಿಂದಲೇ ಆನ್ ಲೈನ್ ಕ್ಲಾಸ್ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.
ಇದರಿಂದ ರಾಜ್ಯಸರ್ಕಾರಕ್ಕೆ ಮತ್ತೊಂದು ದೊಡ್ಡ ವಿಘ್ನ ಎದುರಾದಂತಾಗಿದೆ.‌

ತಮ್ಮ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ತೀವ್ರ ರೀತಿಯ ಹೋರಾಟಕ್ಕೆ ಮತ್ತೆ ಸಜ್ಜಾಗಿ ನಿಂತಿದೆ.

ನಾಳೆಯಿಂದ ಆನ್ ಲೈನ್ ಮತ್ತು ಆಫ್ ಲೈನ್ ಕ್ಲಾಸ್ ಬಂದ್ ಮಾಡಲಾಗು ವುದು. ಜೊತೆಗೆ ನಮ್ಮ ಬೇಡಿಕೆ ಈಡೇರುವ ತನಕ ಶಾಲೆಗಳನ್ನು ಮುಚ್ಚಲಾಗುವುದು ಎಂದು ಸಂಘ ಸ್ಪಷ್ಟವಾಗಿ ಹೇಳಿದೆ.

ರಾಜ್ಯದಲ್ಲಿ 12,800 ಶಾಲೆಗಳು ಬಂದ್ ಆಗಲಿವೆ. ನಾಳೆಯಿಂದ ಆನ್ ಲೈನ್ ಮತ್ತು ಆಫ್ ಲೈನ್ ಕ್ಲಾಸ್ ಸ್ಥಗಿತ ಮಾಡಿ, ಈ ಹೋರಾಟಕ್ಕೂ ಸರ್ಕಾರ ಒಪ್ಪದೇ ಹೋದರೆ ಜ. 6 ರಿಂದ ರಾಜ್ಯಾದ್ಯಾಂತ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

Share This Article
Leave a comment