ಜನವರಿ 31ರಂದು ಉತ್ತಮ ಆಡಳಿತಕ್ಕಾಗಿ ಆಧಾರ್ ದೃಢೀಕರಣ (ಸಾಮಾಜಿಕ ಕಲ್ಯಾಣ, ನಾವೀನ್ಯತೆ, ಜ್ಞಾನ) ತಿದ್ದುಪಡಿ ನಿಯಮಗಳನ್ನು ಪರಿಚಯಿಸಿದ ನಂತರ ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
swik.meity.gov.in ನಲ್ಲಿ ಲಭ್ಯವಿರುವ ಈ ಪೋರ್ಟಲ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ 275 ಬಳಕೆಯ ಪ್ರಕರಣಗಳನ್ನು ಪಟ್ಟಿ ಮಾಡಿದ್ದು, ಆಗಸ್ಟ್ 2020 ರಿಂದ ಕೇಂದ್ರ ಸರ್ಕಾರವು ಆಧಾರ್ ಆಧಾರಿತ ದೃಢೀಕರಣವನ್ನು ಅನುಮೋದಿಸಿದೆ.
ಈ ಹೊಸ ತಿದ್ದುಪಡಿಯ ಮೂಲಕ ಆತಿಥ್ಯ, ಆರೋಗ್ಯ, ಕ್ರೆಡಿಟ್ ರೇಟಿಂಗ್ ಬ್ಯೂರೋ, ಇ-ಕಾಮರ್ಸ್ ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ಅಗ್ರಿಗೇಟರ್ ಸೇವಾ ಪೂರೈಕೆದಾರರು ಸೇರಿದಂತೆ ಹಲವು ವಲಯಗಳಲ್ಲಿ ಆಧಾರ್ ಸಂಖ್ಯೆಯ ಆಧಾರದ ಮೇಲೆ ಸೇವೆಗಳನ್ನು ಸುಲಭವಾಗಿ ಪಡೆಯಲು ಅವಕಾಶ ಒದಗಿಸಲಾಗಿದೆ.ಇದನ್ನು ಓದಿ -SSLC ಮತ್ತು PUC ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಗಳಲ್ಲಿ ಉಚಿತ KSRTC ಬಸ್ ಪ್ರಯಾಣ
ಸಿಬ್ಬಂದಿ ಹಾಜರಾತಿ, ಗ್ರಾಹಕರ ಆನ್‌ಬೋರ್ಡಿಂಗ್, ಇ-ಕೆವೈಸಿ (e-KYC) ಪರಿಶೀಲನೆ, ಪರೀಕ್ಷಾ ನೋಂದಣಿ ಇತ್ಯಾದಿ ಸೇವೆಗಳ ಸುಗಮಗೊಳನೆಗಾಗಿ ಈ ವ್ಯವಸ್ಥೆ ಸಹಾಯಕವಾಗಲಿದೆ ಎಂದು ಎಂಇಐಟಿವೈ (MeitY) ತನ್ನ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು