December 23, 2024

Newsnap Kannada

The World at your finger tips!

neet,pg,exam

NEET-PG 2021 - Counseling for 1,456 seats only: Supreme

ಪ್ರಧಾನಿ ಭದ್ರತಾ ಲೋಪ; ವಿಚಾರಣೆಗೆ ನಾಲ್ವರು ನಿವೃತ್ತ ನ್ಯಾಯಾಧೀಶರ ತಂಡ ರಚನೆ

Spread the love

ಜ. 5 ರಂದು ಪಂಜಾಬ್​ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣ ಕುರಿತಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ನಾಲ್ವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ತೀಪು೯ ನೀಡಿದೆ.

ಸಾವಿರಕ್ಕೂ ಹೆಚ್ಚು ಕರೆಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್​​ನಿಂದ ಸುಪ್ರೀಂ ಕೋರ್ಟ್​ನ ಹಲವು ವಕೀಲರಿಗೆ ಬೆದರಿಕೆ ಕರೆಗಳು ಬಂದಿವೆ. ಮೂಲಗಳ ಪ್ರಕಾರ, ರೆಕಾರ್ಡ್​​ ಮಾಡಿರುವ ಮೆಸೇಜ್​​ಗಳ ಜೊತೆಗೆ ಬೆದರಿಕೆ ಕರೆ ಕೂಡ ಬಂದಿದೆವೆಯಂತೆ.

ಈ ಕರೆಗಳು ಇಂಗ್ಲೆಂಡ್​ ನಂಬರ್​​ನಿಂದ ಬಂದಿವೆ ಅಂತಾರಾಷ್ಟ್ರೀಯ ಹುನ್ನಾರದ ಬಗ್ಗೆ ಮತ್ತಷ್ಟು ಶಂಕೆ ವ್ಯಕ್ತವಾಗಿದೆ . ಹೆಸರು ಹೇಳದ ಸಂಘಟನೆಯ ಹೆಸರಲ್ಲಿ ಬೆದರಿಕೆ ಕರೆ ಹಾಗೂ ಮೆಸೇಜ್​ಗಳನ್ನು ಕಳುಹಿಸಲಾಗಿದೆ.

1984ರಲ್ಲಿ ಸಿಖ್ ವಿರೋಧಿ ದಂಗೆಯ ಹಿಂಸಾಚಾರಕ್ಕೆ ಇನ್ನೂ ನಿಮಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ, ಮೋದಿ ಭದ್ರತಾ ಲೋಪ ಪ್ರಕರಣವನ್ನು ಸ್ವತಂತ್ರ ತನಿಖೆಗೆ ನೀಡ್ತೀರಾ? ಎಂದು ಬೆದರಿಕೆ ಹಾಕಿದ್ದಾರೆ ಅಂತಾ ವರದಿಯಾಗಿದೆ.

ಈ ಬಗ್ಗೆ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ನನ್ನ ಪ್ರಕಾರ ಸುಪ್ರೀಂ ಕೋರ್ಟ್ ಬಹುತೇಕ ವಕೀಲರಿಗೆ ಇಂಥ ಮೆಸೇಜ್ ಕಳುಹಿಸಿದ್ದಾರೆ. ಈ ವಿಚಾರವನ್ನ ‘ದಿ ಅಡ್ವೋಕೇಟ್ಸ್ ಆನ್ ರೆಕಾರ್ಡ್​ ಅಸೋಸಿಯೇಷನ್’ ಗಂಭೀರವಾಗಿ ಪರಿಗಣಿಸಬೇಕು. ಇದು ಸತ್ಯ. ನನಗೆ ಓರ್ವ ವಕೀಲರೊಬ್ಬರು ಕರೆ ಮಾಡಿ ತಿಳಿಸಿದ್ದಾರೆ. ಲಂಡನ್​​ನಿಂದ ಕರೆ ಮಾಡಿರೋದಾಗಿ ತಿಳಿಸಿದ್ದಾರೆ. ಸುಪ್ರಿಂ ಕೋರ್ಟ್​ ನಡೆಸುವ ವಿಚಾರಣೆಯಲ್ಲಿ ಭಾಗಿಯಾಗದಂತೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲ ಪ್ರಧಾನಿ ಮೋದಿ ಭದ್ರತಾ ಲೋಪದ ಹೊಣೆಯನ್ನೂ ಈ ಸಂಘಟನೆ ಹೊತ್ತಿದೆ, ಅದಕ್ಕೆ ಕಾರಣ ನಾವೇ ಎಂದು ಹೇಳಿದ್ದಾರೆ. ಇನ್ನು ಈ ರೀತಿಯ ಕರೆಯನ್ನು ನಿಷೇಧಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!