ಲಾಕ್ ಡೌನ್ ಕೊನೆಯ ಅಸ್ತ್ರ: ಕೊರೋನಾ ಯುದ್ದ ಎದುರಿಸೋಣ ಪ್ರಧಾನಿ ಮೋದಿ ರಾಷ್ಟ್ರದ ಜನರಿಗೆ ಕರೆ

Team Newsnap
1 Min Read
Modi to Hubballi on January 12: Preparations for the rush ಜನವರಿ 12ರಂದು ಹುಬ್ಬಳ್ಳಿಗೆಮೋದಿ: ಭರದ ಸಿದ್ಧತೆ

ಕೊರೊನಾ ಸೋಂಕು ಏರುತ್ತಿರುವ ಹಿನ್ನೆಲೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ದೇಶ ಇಂದು ಕೊರೋನಾ ಮತ್ತೊಂದು ಹೋರಾಟ ನಡೆಸುತ್ತಿದೆ. ಕೊನೆಯ ಅಸ್ತ್ರವಾಗಿ ಲಾಕ್ ಡೌನ್ ಪ್ರಯೋಗ ಜಾರಿ ಮಾಡೋಣ. ಅಲ್ಲಿಯವರೆಗೆ ಜನರೇ ಸ್ವಯಂ ಪ್ರೇರಣೆಯಿಂದ ಕೊರೋನಾ ವಿರುದ್ದ ಹೋರಾಡೋಣ ಎಂದು ಕರೆ ನೀಡಿದರು.

ಮೋದಿ ಭಾಷಣದ ಮುಖ್ಯ ಅಂಶಗಳು:

  • ಕೊರೋನಾ ದಿಂದ ಜೀವ ಕಳೆದುಕೊಂಡ ಕುಟುಂಬಗಳ ನಿಮ್ಮ ದು:ಖದಲ್ಲಿ ನಾನು ಭಾಗಿಯಾಗುತ್ತೇನೆ.
  • ಎಲ್ಲಾ ಫ್ರಂಟ್ ಲೈನ್ ವರ್ಕರ್​ಗಳು ಶ್ರಮವಹಿಸಿ ಜನರ ಜೀವನ ರಕ್ಷಿಸಲು ಶ್ರಮಿಸುತ್ತಿದ್ದೀರಿ.
  • ಕಠಿಣ ಸಮಯದಲ್ಲೂ ನಾವು ಎದೆಗುಂದಬಾರದು. ಸರಿಯಾದ ನಿರ್ಣಯ ತೆಗೆದುಕೊಂಡಾಗ ನಾವು ವಿಜಯರಾಗುತ್ತೇವೆ. ಇದೇ ಮಂತ್ರವನ್ನು ಮುಂದಿಟ್ಟುಕೊಂಡು ದೇಶ ದಿನ ರಾತ್ರಿ ಶ್ರಮಿಸುತ್ತಿದೆ.
  • ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಪ್ರೈವೇಟ್ ಸೆಕ್ಟರ್ ಎಲ್ಲವೂ ಜನರಿಗೆ ಆಕ್ಸಿಜನ್ ಸಿಗಬೇಕೆಂದು ಬಯಸುತ್ತದೆ. ಅದಕ್ಕಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
  • ಈ ಬಾರಿ ಕೊರೊನಾ ಕೇಸ್ ಹೆಚ್ಚಾದಂತೆ ದೇಶದ ಫಾರ್ಮಾ ಸೆಕ್ಟರ್ ಔಷಧಿಗಳ ಉತ್ಪಾದನೆ ಹೆಚ್ಚಿಸಿದೆ.
  • ದೇಶದ ಪ್ರಮುಖ ಫಾರ್ಮಾ ಕಂಪನಿಗಳ ಜೊತೆಗೆ ಇಂದು ಸಭೆ ನಡೆಯಿತು. ವ್ಯಾಕ್ಸಿನ್ ತಯಾರಿಕೆ ಹೆಚ್ಚಿಸಲು ಎಲ್ಲರೂ ಕಟಿಬದ್ಧರಾಗಿದ್ದಾರೆ. ಇಂಥ ಬಲಾಢ್ಯ ಫಾರ್ಮಾ ಸೆಕ್ಟರ್ ಹೊಂದಿರುವುದು ದೇಶದ ಅದೃಷ್ಟ.
  • ವ್ಯಾಕ್ಸಿನ್​ನ ವೇಗ ಹೆಚ್ಚಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಾರತ 2 ಮೇಡ್ ಇನ್ ಇಂಡಿಯಾ ವ್ಯಾಕ್ಸಿನ್ ಉತ್ಪಾದಿಸುತ್ತಿದೆ.
  • ಇಂದು ಈ ಹೋರಾಟದಲ್ಲಿ ಎಲ್ಲಾ ಆರೋಗ್ಯ ಸಿಬ್ಬಂದಿ, ಫ್ರಂಟ್ ಲೈನ್ ವರ್ಕರ್ಸ್ ಹಾಗೂ ಹಿರಿಯ ಜನರಿಗೆ ವ್ಯಾಕ್ಸಿನ್ ಸಿಗುತ್ತಿದೆ.
  • ಮೇ 1 ರಿಂದ 18 ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಸಿಗಲಿದೆ.
  • ಇಲ್ಲಿವರೆಗೆ ಧೈರ್ಯದಿಂದ ಹೋರಾಟ ನಡೆಸಿದ್ದೇವೆ. ಅದರ ಶ್ರೇಯಸ್ಸು ಎಲ್ಲರಿಗೂ ಸಿಗುತ್ತದೆ. ನೀವು ಇಲ್ಲಿವರೆಗೆ ದೇಶವನ್ನು ತಂದಿದ್ದೀರಿ.. ನಾವು ಕೊರೊನಾದಿಂದ ಮುಕ್ತಿ ಹೊಂದುತ್ತೇವೆಂದು ನಂಬಿಕೆ ಇದೆ.
Share This Article
Leave a comment