February 21, 2026

Newsnap Kannada

The World at your finger tips!

food , security , Yojana

ಈ ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

Spread the love

ಪ್ರಧಾನಿ ನರೇಂದ್ರ ಮೋದಿ ಇಂದ ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಪಿಎಂಒ ಇಂಡಿಯಾ ಟ್ವೀಟ್ ನಲ್ಲಿ ಹೇಳಿದೆ.

ಗುರುವಾರ 100 ಕೋಟಿ ಲಸಿಕೆ ವಿತರಿಸಿ ಭಾರತ ಮೈಲಿಗಲ್ಲು ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆಯೇ ಭಾಷಣ ಮಾಡಬಹುದು ಎಂಬ ಸುದ್ದಿ ಹರಿದಾಡಿತ್ತು. ಆದರೆ ನಿನ್ನೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿರಲಿಲ್ಲ. 

ಗುರುವಾರ ಬೆಳಗ್ಗೆ 9 ಗಂಟೆ 47 ನಿಮಿಷಕ್ಕೆ 100 ಕೋಟಿ ಹನಿ ಲಸಿಕೆ ವಿತರಿಸುವ ಮೂಲಕ ಇತಿಹಾಸ ನಿರ್ಮಾಣವಾಗಿತ್ತು.

ಚೀನಾದ ಬಳಿಕ 100 ಕೋಟಿ ಡೋಸ್ ನೀಡಿರುವ ವಿಶ್ವದ 2ನೇ ದೇಶವಾಗಿ ಭಾರತ ಹೊರಹೊಮ್ಮಿದೆ. ಶೇಕಡಾವಾರು ಪ್ರಮಾಣದಲ್ಲಿ ಶೇ. 23ರಷ್ಟು ಮಾತ್ರ ವ್ಯಾಕ್ಸಿನೇಷನ್ ಆಗಿದೆ.

error: Content is protected !!