ಅರ್ಚಕರ ಕೊಲೆ ಪ್ರಕರಣ : ಅರೋಪಿಗಳ ಮೇಲೆ ಶೂಟೌಟ್‌ – ಮೂವರ ಬಂಧನ

Team Newsnap
1 Min Read

ಮಂಡ್ಯ

ಅರ್ಕೇಶ್ವರ ದೇವಾಲಯದಲ್ಲಿ ಮೂವರು ಅರ್ಚಕರನ್ನು ಕೊಲೆ ಮಾಡಿದ್ದ ಆರೋಪಿಗಳ ಹೆಡೆ ಮುರಿ ಕಟ್ಟುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.

ದುಷ್ಕರ್ಮಿಗಳನ್ನು ಬಂಧಿಸಲು ಪೋಲೀಸ್‌ ವರಿಷ್ಠಾಧಿಕಾರಿ ಪರಶುರಾಮ್ ಐದು ತಂಡಗಳನ್ನು ರಚನೆ ಮಾಡಿದ್ದರು.
ಗ್ರಾಮಾಂತರ ಪೋಲೀಸ್ ಠಾಣಾ ವೃತ್ತ ನಿರೀಕ್ಷಕ ಎನ್.ವಿ.ಮಹೇಶ್ ಹಾಗೂ ಪೂರ್ವ ಪೋಲೀಸ್ ಠಾಣೆಯ ಪಿ.ಎಸ್.ಐ ಶರತ್ ಕುಮಾರ್ ರವರ ನೇತೃತ್ವದ ತಂಡ ಮದ್ದೂರಿನ ಸಾದೊಳಲು ಸಮೀಪ ಆರೋಪಿಗಳನ್ನು ಬಂದಿಸಿದ್ದಾರೆ.

ಆರೋಪಿಗಳನ್ನು ಬಂಧಿಸುವ ವೇಳೆ ಆರೋಪಿಗಳಾದ ಆಂಧ್ರ ಪ್ರದೇಶದ ವಿಜಿ , ತೊಪ್ಪನಹಳ್ಳಿ ಗ್ರಾಮದ ಮಂಜ , ಅರೆಕಲ್ ದೊಡ್ಡಿ ಗ್ರಾಮದ ಗಾಂಧಿ ಎಂಬುವವರು ಪೋಲೀಸ್ ಸಿಬ್ಬಂದಿಗಳ ಮೇಲೆ ಕಲ್ಲು ಮತ್ತು ಚಾಕುಗಳಿಂದ ಹಲ್ಲೆ ನಡೆಸಲು ಮುಂದಾದಾಗ ಪೋಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರು.
ಆದರೆ ಆರೋಪಿಗಳು ಪುನಃ ಹಲ್ಲೆಗೆ ಮುಂದಾದ ವೇಳೆ ಕಾರ್ಯಾಚರಣೆ ಕೈಗೊಂಡ ಪೋಲೀಸರು 3 ಮಂದಿ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿ ಓಡಲು ಯತ್ನಿಸಿದವರನ್ನು ಬಂಧಿಸಿದ್ದಾರೆ.
ಕಾರ್ಯಚರಣೆ ವೇಳೆ ಪೂರ್ವ ಪೋಲೀಸ್ ಠಾಣೆಯ ಪಿಎಸ್ಐ ಶರತ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಅನಿಲ್ ಕುಮಾರ್ , ಕೃಷ್ಣ ಕುಮಾರ್ ರವರು ತೀವ್ರವಾಗಿ ಗಾಯಗೊಂಡಿದ್ದು ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ಬಳಿಕ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ 3 ಮಂದಿ ಆರೋಪಿಗಳನ್ನು ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ

Share This Article
Leave a comment