ನ್ಯೂಯಾರ್ಕ್: ವ್ಯಾಪಾರ ಅಸಮತೋಲನ ಮತ್ತು ಯುಎಸ್ ಸೈನಿಕ ಬೆಂಬಲವನ್ನು ಪ್ರಮುಖ ಸಮಸ್ಯೆಗಳಾಗಿ ಉಲ್ಲೇಖಿಸಿ, ಕೆನಡಾವನ್ನು ಅಮೆರಿಕಾದ 51ನೇ ರಾಜ್ಯವನ್ನಾಗಿ ಮಾಡಲು “ಆರ್ಥಿಕ ಶಕ್ತಿ” ಬಳಸುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ್ದಾರೆ.
ಕೆನಡಾ ಮತ್ತು ಮೆಕ್ಸಿಕೊದಿಂದ ಬರುವ ಸರಕುಗಳ ಮೇಲೆ ಗಣನೀಯ ಸುಂಕವನ್ನು ವಿಧಿಸಲು ಟ್ರಂಪ್ ಯೋಜನೆ ಘೋಷಿಸಿದ್ದಾರೆ. ತಮ್ಮ ಎರಡನೇ ಅವಧಿಗೆ ಮುಂಚಿತವಾಗಿ, ನೆರೆಯ ದೇಶಗಳ ಮೇಲೆ ವ್ಯಾಪಾರದ ವಿಚಾರದಲ್ಲಿ ಕಠಿಣ ನಿಲುವು ತಾಳಲು ಅವರು ಪ್ರಾರಂಭಿಸಿದ್ದಾರೆ.
“ಕೆನಡಾ ಯುಎಸ್ಗೆ ಹೊರೆಯಾಗಿದೆ”
ಜನವರಿ 7ರಂದು ಮಾರ್-ಎ-ಲಾಗೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, “ವ್ಯಾಪಾರ ಅಸಮತೋಲನದಿಂದಾಗಿ ಮತ್ತು ಕೆನಡಾವನ್ನು ರಕ್ಷಿಸುವ ಹೊಣೆ ಯುಎಸ್ ಮೇಲೆಯೇ ಇದೆ. ಇದನ್ನು ಶಾಶ್ವತವಾಗಿ ಮುಂದುವರಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಕೆನಡಾದ ಸರ್ಕಾರ ಯುಎಸ್ ಕಾರುಗಳು ಮತ್ತು ಕೃಷಿ ಉತ್ಪನ್ನಗಳನ್ನು ಸ್ವೀಕರಿಸಲು ತಡೆಯುಂಟು ಮಾಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ನಾವು ಉತ್ತಮ ನೆರೆಹೊರೆಯವರಾಗಿದ್ದೇವೆ, ಆದರೆ ಈ ಪ್ರಕ್ರಿಯೆಯನ್ನು ಶಾಶ್ವತವಾಗಿ ತಾಳಲು ಸಾಧ್ಯವಿಲ್ಲ” ಎಂದು ಹೇಳಿದರು.
ಟ್ರುಡೋ ರಾಜೀನಾಮೆ ನಂತರದ ಪ್ರಸ್ತಾಪ
ಕ್ಯಾನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ ರಾಜೀನಾಮೆ ನಂತರ, ಕೆನಡಾವನ್ನು 51ನೇ ರಾಜ್ಯವನ್ನಾಗಿ ಮಾಡುವುದು ಒಳ್ಳೆಯ ಆಯ್ಕೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.
ಆರ್ಥಿಕ ಒತ್ತಡದ ಸಾಧನೆ
ಕೆನಡಾವನ್ನು ಯುಎಸ್ ಹಿತಾಸಕ್ತಿಗಳೊಂದಿಗೆ ಹೊಂದಿಸಿಕೊಳ್ಳಲು ಆರ್ಥಿಕ ಒತ್ತಡವನ್ನು ಹೇರಲು ಸಾಧ್ಯವಿರುವುದಾಗಿ ಟ್ರಂಪ್ ಹೇಳಿದ್ದಾರೆ. “ಅಮೆರಿಕ ಕೆನಡಾಕ್ಕೆ ಹಲವು ರೀತಿಯಲ್ಲಿ ಆರ್ಥಿಕ ನೆರವನ್ನು ನೀಡುತ್ತದೆ, ಆದರೆ ನಮಗೆ ಕೆನಡಾದ ಆಮದುಗಳಿಲ್ಲದೆ ಸಹ ಕಾರ್ಯನಿರ್ವಹಿಸಲು ಸಾಧ್ಯ” ಎಂದು ಅವರು ವಾದಿಸಿದರು.ಇದನ್ನು ಓದಿ –ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ
ಈ ಪ್ರಸ್ತಾಪವು ಕಾನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಬಾಂಧವ್ಯಕ್ಕೆ ಹೊಸ ಸವಾಲುಗಳನ್ನು ಸೃಷ್ಟಿಸಿದೆ.
More Stories
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!