December 22, 2024

Newsnap Kannada

The World at your finger tips!

nda

ಎನ್.ಡಿ.ಎ ಜೊತೆ ಮೈತ್ರಿ‌ ಕಡಿದುಕೊಳ್ಳವಂತೆ ಬಿಜೆಪಿ‌ ಮಿತ್ರ ಪಕ್ಷಗಳ ಮೇಲೆ ಒತ್ತಡ

Spread the love

ಬಿಜೆಪಿ ಮಂಡಿಸಿರಿವ ಕೃಷಿ ಮಸೂದೆಗಳಿಗೆ ಎಲ್ಲೆಡೆಯಿಂದ ಭಾರಿ ವಿವಾದ ವ್ಯಕ್ತವಾಗಿದೆ. ಕೆಲವು ದಿನಗಳ ಹಿಂದೆ ಈ ವಿಚಾರವಾಗಿ ಹರ್ ಸಿಮ್ರತ್ ಕೌರ್ ಬಾದಲ್ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ರೈತ ಸಂಘಟನೆಗಳು ಹರಿಯಾಣದ ಜನನಾಯಕ್ ಜನತಾ ಪಕ್ಷಕ್ಕೆ ಎನ್.ಡಿ.ಎ ಮೈತ್ರಿ ಕೂಟ ತೊರೆಯುವಂತೆ ಒತ್ತಡ ಹೇರಿದ್ದಾರೆ.

ಕೇವಲ ರೈತ ಸಂಘಟನೆಗಳಷ್ಟೇ ಅಲ್ಲದೆ ವಿರೋಧ ಪಕ್ಷಗಳು‌ ಸಹ ಒತ್ತಡ ಹೇರುತ್ತಿವೆ.‌ ಹರಿಯಾಣದಲ್ಲಿ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜಿವಾಲಾ ಉಪ ಮುಖ್ಯಮಂತ್ರಿ ದುಷ್ಯಂತ್ ಸಿಂಗ್ ಚೌಟಾಲಾ ಅವರಿಗೆ ‘ನೀವೂ ಹರ್ ಸಿಮ್ರತ್ ಕೌರ್ ಹಾಗೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ’ ಎಂದು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಅಲ್ಲದೇ ದುಷ್ಯಂತ್ ನಾಯಕತ್ವ ವಿರುದ್ಧ ಅವರದೇ ಪಕ್ಷದ ಶಾಸಕರಾದ ದೇವೆಂದರ್ ಬಬ್ಲಿ ಮತ್ತು ರಾಮ್ ಕುಮಾರ್ ಗೌತಮ್ ಅವರು ಧ್ವನಿ‌ ಎತ್ತಿದ್ದಾರೆ.

ಶಿರೋಮಣಿ ಅಕಾಲಿದಳಕ್ಕೆ ಸೇರಿದ್ದ ಹರ್ ಸಿಮ್ರತ್ ಕೌರ್ ರ ನಿರ್ಧಾರಕ್ಕೆ ರೈತ ಸಂಘಟನೆಗಳು ಅಭಿನಂದಿಸಿವೆ. ಆದರೆ ಶಿರೋಮಣಿ ಅಕಾಲಿದಳವೂ ಸಹ ಎನ್.ಡಿ.ಎ ಮೈತ್ರಿ ಕೂಟದಿಂದ ಹೊರಬರಬೇಕೆಂದು ಒತ್ತಾಯಿಸುತ್ತಿವೆ. ರೈತ ವಿರೋಧಿ ಧೋರಣೆಗಳನ್ನು ಅನುಸರಿಸಿರುವ ಬಿಜೆಪಿಯು, ತನ್ನ ಎಷ್ಟು ಮಿತ್ರ ಪಕ್ಷಗಳನ್ನು ಕಳೆದುಕೊಳ್ಳುತ್ತದೋ? ಅವುಗಳ ಭವಿಷ್ಯ ಏನು ಎಂದು ತಿಳಿಯಬೇಕಿದೆ.

Copyright © All rights reserved Newsnap | Newsever by AF themes.
error: Content is protected !!