November 23, 2024

Newsnap Kannada

The World at your finger tips!

vidan sabha

ತಾಲೂಕು ಪಂಚಾಯತಿ ವ್ಯವಸ್ಥೆಯನ್ನೇ ರದ್ದುಪಡಿಸಿ ಸರ್ಕಾರದ ಮೇಲೆ ಶಾಸಕರ ಒತ್ತಡ ?

Spread the love

ರಾಜ್ಯದಲ್ಲಿ ತಾಲೂಕು ಪಂಚಾಯತ್‌ ವ್ಯವಸ್ಥೆಯನ್ನೇ ರದ್ದುಗೊಳಿಸುವಂತೆ ಶಾಸಕರಿಂದ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಸಿಎಂ ಯಡಿಯೂರಪ್ಪ ಜೊತೆ ಶಾಸಕರ ಜತೆ ನಡೆಸಿದ ಸಭೆಯಲ್ಲಿ ಶಾಸಕರು ಇಂತಹ ಪ್ರಸ್ತಾವ ಮಂಡಿಸಿದ್ದಾರೆ.
ಈ ಸಂಬಂಧಿಸಿ ಕಾನೂನು ತಿದ್ದುಪಡಿ ತರುವಂತೆಯೂ ಶಾಸಕರು ಒತ್ತಾಯಿಸಿದ್ದಾರೆಂದು ಹೇಳಲಾಗಿದೆ.

ಮೂರು ಸ್ತರದ ಪಂಚಾಯತ್‌ ವ್ಯವಸ್ಥೆ ಜಾರಿಯಲ್ಲಿದ್ದರೂ ತಾ.ಪಂ.ಗಳಿಗೆ ಅನುದಾನ, ನಿರ್ದಿಷ್ಟ ಕೆಲಸ ಇಲ್ಲ. ಹೀಗಾಗಿ ಈ ವ್ಯವಸ್ಥೆ ಏಕೆ ಬೇಕು? ಅನಗತ್ಯ ಆರ್ಥಿಕ ಹೊರೆ ತಪ್ಪಿಸುವಂತೆ ಸಭೆಯಲ್ಲಿ ಶಾಸಕರು ಅಭಿಪ್ರಾಯಪಟ್ಟಿದ್ದಾರೆ .

ಕೇಂದ್ರದ ಪಂ. ರಾಜ್‌ ಕಾಯ್ದೆಯ ಪ್ರಕಾರ, ಗ್ರಾ.ಪಂ. ಮತ್ತು ಜಿ.ಪಂ. ವ್ಯವಸ್ಥೆ ಕಡ್ಡಾಯ. ತಾ.ಪಂ. ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಗಳು ಅಗತ್ಯವಿದ್ದರೆ ಉಳಿಸಿಕೊಳ್ಳಬಹುದು. ಸದ್ಯ ಕೇಂದ್ರದಿಂದ ಬರುವ ಯೋಜನೆಗಳು ನೇರವಾಗಿ ಗ್ರಾ.ಪಂ.ಗೆ ಹೋಗುತ್ತವೆ. ಹೀಗಾಗಿ ಜಿ.ಪಂ.ಗೂ ಕೆಲವು ನಿರ್ದಿಷ್ಟ ಜವಾಬ್ದಾರಿಗಳಿವೆ. ಆದರೆ ತಾ.ಪಂ.ಗಳಿಗಿಲ್ಲ ಎಂಬುದು ಶಾಸಕರ ವಾದವಾಗಿದೆ.

ಪಂಚಾಯತ್ ರಾಜ್‌ ವ್ಯವಸ್ಥೆ ಬಗ್ಗೆ 1993ರಲ್ಲಿ ಸಂವಿಧಾನಕ್ಕೆ 73ನೇ ತಿದ್ದುಪಡಿ ತರಲಾಗಿದೆ. ಅದರಂತರ ಪ್ ಪಂಚಾಯತ್‌ ರಾಜ್‌ ಕಾಯ್ದೆ ಜಾರಿಗೆ ಬಂದಿದೆ. ಯಾವ ರಾಜ್ಯದ ಜನಸಂಖ್ಯೆ 20 ಲಕ್ಷಕ್ಕಿಂತ ಹೆಚ್ಚಿದೆಯೋ ಆ ರಾಜ್ಯದಲ್ಲಿ ಮೂರು ಹಂತದ ಪಂಚಾಯತ್‌ ವ್ಯವಸ್ಥೆ ಇರಬೇಕು ಎಂದು ಸಂವಿಧಾನದಲ್ಲಿಯೇ ಸ್ಪಷ್ಟಪಡಿಸಲಾಗಿದೆ.

ಈಗಿರುವ ವ್ಯವಸ್ಥೆಯನ್ನು ಬದಲಾಯಿಸಲು ರಾಜ್ಯ ಸರಕಾರಗಳಿಗೆ ಅಧಿಕಾರವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಬದಲಾಯಿಸಬಹುದು.

Copyright © All rights reserved Newsnap | Newsever by AF themes.
error: Content is protected !!