February 21, 2026

Newsnap Kannada

The World at your finger tips!

shock

ಜಗಳೂರಿನಲ್ಲಿ ವಿದ್ಯುತ್ ಕಾಯಿಲ್ ಶಾಕ್ ನಿಂದ ಗರ್ಭಿಣಿ ಸಾವು

Spread the love

ಗರ್ಭಿಣಿಯೊಬ್ಬರು ನೀರು ಕಾಯಿಸುವ ವಿದ್ಯುತ್ ಕಾಯಿಲ್ ತಾಗಿ ಸಾವನ್ನಪ್ಪಿದ ಘಟನೆ ಶನಿವಾರ ಬೆಳಿಗ್ಗೆ ಜಗಳೂರು ಬಳಿ ಜರುಗಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹನುಮಂತಾಪುರ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಮೃತ ದುರ್ದೈವಿಯನ್ನು ನೇತ್ರಾವತಿ ಬಸವರಾಜ್ (23) ಎಂದು ಹೇಳಲಾಗಿದೆ.

ನೇತ್ರಾವತಿ ಅವರು ಸ್ನಾನ ಮಾಡಲೆಂದು ಬಿಂದಿಗೆಯಲ್ಲಿ ನೀರು ತುಂಬಿಸಿ ಬಿಸಿಯಾಗಲು ವಿದ್ಯುತ್ ಕಾಯಿಲ್ ಹಾಕಿದ್ದರು. ಈ ವೇಳೆ ವಿದ್ಯುತ್ ತಗುಲಿ ಗರ್ಭಿಣಿ ಮೃತಪಟ್ಟಿದ್ದಾರೆ. ಈಕೆ ಎಷ್ಟು ತಿಂಗಳ ಗರ್ಭಿಣಿ ಎಂಬುದು ತಿಳಿದುಬಂದಿಲ್ಲ.

ಜಗಳೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!