November 15, 2024

Newsnap Kannada

The World at your finger tips!

mamath banrgi

ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟ :ಬಂಗಾಳದಲ್ಲಿ ದೀದಿ, ಕೇರಳದಲ್ಲಿ ಎಲ್ ಡಿಎಫ್ ಅಧಿಕಾರಕ್ಕೆ ?

Spread the love

ಬಂಗಾಳದಲ್ಲಿ ದೀದಿ ಹ್ಯಾಟ್ರಿಕ್‌ ಹಾಗೂ ಕೇರಳದಲ್ಲಿ ಎಲ್‍ಡಿಎಫ್ ಸೇಫ್ ಆಗಿದೆ.‌
ತಮಿಳುನಾಡು ಕಾಂಗ್ರೆಸ್ ಮತ್ತು ಡಿಎಂಕೆ, ಅಸ್ಸಾಂನಲ್ಲಿ ಬಿಜೆಪಿಗೆ ಬಿಗ್ ಫೈಟ್ ಮತ್ತು ಪುದುಚೇರಿಯಲ್ಲಿ ಎನ್‍ಡಿಎಗೆ ಗೆಲುವಿನ ನಗೆ ಬೀರುವ ಸಾಧ್ಯತೆ ಇದೆ.

ಮಾರ್ಚ್ 27ರಿಂದ ಮತದಾನ ಆರಂಭ:

  • ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
  • ಅಸ್ಸಾಂನಲ್ಲಿ ಮಾರ್ಚ್ 27ರಿಂದ ಏಪ್ರಿಲ್ 6ರವರಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ.
  • ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ.
  • ಮಾರ್ಚ್ 27 ಮೊದಲ ಹಂತದ ಮತದಾನ ನಡೆಯಲಿದೆ. ತದನಂತರ ಏಪ್ರಿಲ್ 1, 6, 10, 17, 22, 26, 29 ಮತದಾನ ನಡೆಯಲಿದೆ.
  • ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಒಂದು ಕೇಂದ್ರಾಡಳಿಯ ಪ್ರದೇಶ ಪುದುಚೇರಿ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ಟೈಮ್ಸ್ ನೌ- ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ.

ಬಿಜೆಪಿಯ ತೀವ್ರ ಸ್ಪರ್ಧೆಯ ನಡುವೆಯೂ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕೇರಳದಲ್ಲಿ ಎಲ್‍ಡಿಎಫ್ ಬಳಿಯಲ್ಲಿಯೇ ಉಳಿಯಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ವಾಪಸ್ ಬರಲಿದೆ.

ಬಿಜೆಪಿ ಸರ್ಕಾರ ಇರೋ ಅಸ್ಸಾಂನಲ್ಲಿ ನೇರ ಹಣಾಹಣಿಇದೆ. ಪುದುಚೇರಿ ಯಲ್ಲಿ ಎನ್‍ಡಿಎಗೆ ಗೆಲುವು ಸಿಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಬಂಗಾಳದಲ್ಲಿ ಬಿಜೆಪಿ ಅಧಿಕಾರದಿಂದ ದೂರ: ಲಾಭ ಹೆಚ್ಚು‌:

ಅಭಿಪ್ರಾಯ ಸಮೀಕ್ಷೆ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ, ದೀದಿ ಮೂರನೇ ಬಾರಿ ಸರ್ಕಾರ ರಚನೆ ಮಾಡಲಿದ್ದಾರೆ.

ಟಿಎಂಸಿ 160 ಕ್ಷೇತ್ರಗಳಲ್ಲಿ ಗೆಲುವು ಕಾಣಬಹುದು. 2016ರಲ್ಲಿ ಟಿಎಂಸಿ 211 ಕ್ಷೇತ್ರಗಳಲ್ಲಿ ಜಯ ದಾಖಲಿಸಿತ್ತು.

ಈ ಬಾರಿ 200 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ ಅಂತ ಕಮಲ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2016ರಲ್ಲಿ ಮೂರು ಕ್ಷೇತ್ರಗಳಲ್ಲಿದ್ದ ಬಿಜೆಪಿ ಈ ಬಾರಿ 100ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಮಲ ಧ್ವಜ ಹಾರಿಸಲಿದೆ ಎಂದು ಪೋಲ್ ನಲ್ಲಿ ಹೇಳಲಾಗಿದೆ. ಟಿಎಂಸಿ ಗಿಂತ ಬಿಜೆಪಿ ಶೇಕಡಾವಾರು ಮತಗಳಿಕೆ ಹೆಚ್ಚಿರಲಿದೆ.

ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ:

ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಜೊತೆಯಾಗಿ ಚುನಾವಣೆ ಎದುರಿಸುತ್ತಿವೆ. ಅಲ್ಲದೆ ಸರ್ಕಾರ ರಚಿಸಲಿದೆ ಎಂದು ಅಭಿಪ್ರಾಯ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.

234 ವಿಧಾನಸಭಾ ಕ್ಷೇತ್ರಗಳಲ್ಲಿ 177ರಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಗೆಲ್ಲಲಿದೆ. ಸದ್ಯ ಅಧಿಕಾರದಲ್ಲಿರುವ ಎಐಎಎಂಡಿಕೆ ಬಿಜೆಪಿ ಜೊತೆಯಲ್ಲಿ ಚುನಾವಣೆ ಎದುರಿಸಿದೆ ಮತಗಳಿಕೆಯಲ್ಲಿ ದೊಡ್ಡ ಪೆಟ್ಟು ಬೀಳಲಿದೆ.

ಅಸ್ಸಾಂನಲ್ಲಿ ಎನ್‍ಡಿಎ-ಯುಪಿಎ ಸಮಬಲದ ಸೆಣಸಾಟ:

ಸಮೀಕ್ಷೆ ಪ್ರಕಾರ ಬಿಜೆಪಿ ಸರ್ಕಾರ ಇರೋ ಅಸ್ಸಾಂನಲ್ಲಿ ಎನ್‍ಡಿಎ ಮತ್ತು ಯುಪಿಎ ನಡುವೆ ಸಮಬಲದ ಹೋರಾಟ ನಡೆಯಲಿದೆ.

ಸಮೀಕ್ಷೆಯ ಪ್ರಕಾರ 126 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‍ಡಿಎ 69 ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ 56ರಲ್ಲಿ ಗೆಲುವು ಕಾಣಲಿದೆ.

ಈ ಬಾರಿ ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ಮತ್ತು ಬೋಡೋ ಪೀಪಲ್ಸ್ ಫ್ರಂಟ್ ಸೇರಿದಂತೆ ಮೂರು ಎಡಪಕ್ಷಗಳೊಂದಿಗೆ ಮೈತ್ರಿ ರಚಿಸಿಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿದೆ.

ಕೇರಳದಲ್ಲಿ ವಿಜಯನ್ ಗೆ ಬಹುಮತ:

ಆಡಳಿತದಲ್ಲಿರುವ ಪಿಣರಾಯಿ ವಿಜಯನ್ ನೇತೃತ್ವದ ಎಲ್‍ಡಿಎಫ್ ಸರ್ಕಾರ ಮತ್ತೊಮ್ಮೆ ಅಧಿಕಾರ ಬರುವ ಸಾಧ್ಯತೆಗಳಿವೆ ಅನ್ನೋದು ಸಮೀಕ್ಷೆ ಹೇಳಿದೆ.

ಪಿಣರಾಯಿ ವಿಜಯನ್ ನೇತೃತ್ವದ ಘಟಬಂಧನ 140ರಲ್ಲಿ 77 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಲಿದೆ. 2016ರಲ್ಲಿ ಪಿಣರಾಯಿ ಸರ್ಕಾರ 91ರ ಶಾಸಕರೊಂದಿಗೆ ಸರ್ಕಾರ ರಚನೆ ಮಾಡಿತ್ತು. ಆಡಳಿತ ವಿರೋಧ ಅಲೆಯ ನಡುವೆಯೂ ಎಲ್‍ಡಿಎಫ್ ಮತ್ತಷ್ಟು ಕ್ಷೇತ್ರ ಗೆದ್ದು ಸರ್ಕಾರ ರಚನೆ ಮಾಡಲಿದೆ ಸಮೀಕ್ಷೆ ಹೇಳಿದೆ.

ಪುದುಚೇರಿಯಲ್ಲಿ ಮಾತ್ರ ಎನ್‍ಡಿಎ ಗೆಲವು:

ಪುದುಚೇರಿಯ 30 ಸದಸ್ಯರ ಪೈಕಿ 21 ಎನ್‍ಡಿಎ ಕೂಟದ ಅಭ್ಯರ್ಥಿಗಳು ಗೆಲ್ಲುತ್ತಾರೆ. ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಮತ್ತು ಡಿಎಂಕೆ ಜೊತೆಯಾಗಿ ಸ್ಪರ್ಧೆ ಮಾಡಿದ್ದು, 9 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಎಐಎನ್‍ಆರ್‍ಸಿಯ ಎನ್.ರಂಗಸ್ವಾಮಿ ಅವರನ್ನು ಮುಖ್ಯಮಂತ್ರಿಗಳನ್ನಾಗಿ ನೋಡಲು ಶೇ.50ರಷ್ಟು ಜನ ಇಷ್ಟಪಡುತ್ತಾರೆ.

Copyright © All rights reserved Newsnap | Newsever by AF themes.
error: Content is protected !!