ಸುಳ್ಯದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಹಂತಕರನ್ನು ಬೆನ್ನತ್ತಿರುವ ಎನ್ಐಎ ತಂಡ, ಮತ್ತಿಬ್ಬರನ್ನು ಬಂಧಿಸಿದೆ.
ಸುಳ್ಯದ ನಾವೂರಿನ ಅಬೀದ್ ಮತ್ತು ನೌಪಾಲ್ರನ್ನು ಬಂಧಿಸಿದೆ. ಈ ಮೂಲಕ ಕೇಸ್ನಲ್ಲಿ ಈವರೆಗೂ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ.
ಮಸೂದ್, ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಫಾಜಿಲ್ ಹತ್ಯೆ ಕರಾವಳಿ ತೀರವನ್ನ ದಂಗುಬಡಿಸಿತ್ತು. ಸದ್ಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಪ್ರಕರಣವನ್ನು ಕೈಗೆತ್ತಿಕೊಂಡಿರುವ ಎನ್ಐಎ, ಆರೋಪಿಗಳನ್ನು ಹೆಡೆಮುರಿ ಕಟ್ಟುತ್ತಿದೆ.
ಪ್ರವೀಣ್ ಹತ್ಯೆ ಕೇಸ್ನಲ್ಲಿ ಮತ್ತಿಬ್ಬರನ್ನು ಬಂಧಿಸಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರು ಲಾಕ್ ಆಗಿದ್ದಾರೆ. ಸುಳ್ಯದ ನಾವೂರಿನ ಅಬೀದ್ ಮತ್ತು ಬೆಳ್ಳಾರೆಯ ನೌಫಾಲ್ರನ್ನು ಅರೆಸ್ಟ್ ಮಾಡಲಾಗಿದೆ. ಈ ಮೂಲಕ ಪ್ರವೀಣ್ ಹತ್ಯೆ ಕೇಸ್ನಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಆದರೆ ಹತ್ಯೆಯ ಮಾಸ್ಟರ್ ಮೈಂಡ್ಗಳಿಗಾಗಿ ಎನ್ಐಎ ಮತ್ತು ಪೊಲೀಸರು ಇನ್ನೂ ತಲಾಶ್ ನಡೆಸುತ್ತಿದ್ದಾರೆ.
ಜುಲೈ 28 ರಂದು ಸವಣೂರಿನ ಝಾಕೀರ್ ಹುಸೇನ್ ಮತ್ತು ಶಫೀಕ್ ಬೆಳ್ಳಾರೆಯನ್ನು ಬಂಧಿಸಲಾಗಿತ್ತು. ಬಳಿಕ ಜುಲೈ 31ರಂದು ಬೆಂಗಳೂರಲ್ಲಿ ನೌಪಾಲ್ರನ್ನು ವಶಕ್ಕೆ ಪಡೆಯಲಾಗಿತ್ತು. ದೀರ್ಘ ವಿಚಾರಣೆ ಬಳಿಕ ನಿನ್ನೆ, ಅರೆಸ್ಟ್ ಮಾಡಲಾಗಿದೆ. ಇವರ ಜೊತೆ ಸದ್ದಾಂ ಮತ್ತು ಹ್ಯಾರಿಸ್ ಎಂಬುವವನ್ನೂ ಪೊಲೀಸರು ಬಂಧಿಸಿದ್ದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು