December 24, 2024

Newsnap Kannada

The World at your finger tips!

thimmegowda

ಮಾರ್ಚ್ 12, 13ರಂದು ಜಾನಪದ ಲೋಕದಲ್ಲಿ (Janapada loka)‘ಪ್ರವಾಸಿ ಜಾನಪದ ಲೋಕೋತ್ಸವ’

Spread the love

ರಾಮನಗರ (Ramanagar ) – ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರು-ಮೈಸೂರು ಹೆದ್ದಾರಿಯ ರಾಮನಗರ ಬಳಿ ಇರುವ ಜಾನಪದ ಲೋಕದಲ್ಲಿ (Janapada loka) 2022ರ ಮಾರ್ಚ್ 12 ಮತ್ತು 13 ಎರಡು ದಿನ ಪ್ರವಾಸಿ ಜಾನಪದ ಲೋಕೋತ್ಸವ-2022 ಆಚರಿಸಲಾಗುತ್ತಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಘಟಕದ ಅದ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು.

ಜಾನಪದ ಲೋಕದಲ್ಲಿ (Janapada loka) ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ದಿನ ಬೆಳಿಗ್ಗೆ 9 ರಿಂದ ರಾತ್ರಿ 10 ಗಂಟೆವರೆಗೂ ರಾಜ್ಯ ಹಾಗೂ ಹೊರ ರಾಜ್ಯಗಳ ಜಾನಪದ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ, ಜಿಲ್ಲಾಅಧ್ಯಕ್ಷರೊಡನೆ ಸಂವಾದ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಉದ್ಘಾಟನಾಸಮಾರಂಭ :

ಮಾ. 12 ರಂದು ಬೆಳಿಗ್ಗೆ 10.30 ಗಂಟೆಗೆ ಇಂಧನ ಹಾಗೂ ಕನ್ನಡ ಮತ್ತ ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಪ್ರವಾಸಿ ಜಾನಪದ ಲೋಕೋತ್ಸವ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಮನಗರ ಜಿಲ್ಲೆಯ ಸಂಸದರು, ವಿಧಾನ ಪರಿಷತ್ ಸದಸ್ಯರುಗಳು, ಶಾಸಕರು, ಜಿಲ್ಲಾ ಅಧಿಕಾರಿಗಳು ವರಿಷ್ಠಾಧಿಕಾರಿಗಳು ಇತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಇದೇ ದಿನ ಕರಕುಶಲ ಮೇಳ ಉದ್ಘಾಟನೆಯನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಬಿ, ಮಂಜಮ್ಮಜೋಗತಿ ನಡೆಸಿಕೊಡಲಿದ್ದಾರೆ.

ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಮನಗರ ಇವರ ವತಿಯಿಂದ ಎರಡೂ ದಿನ ಕಲಾವಿದರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಗಳಲ್ಲಿ ಜಾನಪದ ಸಂವರ್ಧನೆ :

ಮಧ್ಯಾಹ್ನ 2.30 ಗಂಟೆಗೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲೆಗಳ ಅಧ್ಯಕ್ಷರುಗಳೊಡನೆ ಸಂವಾದಕಾರ್ಯಕ್ರಮ, ಸ್ಥಳೀಯ ಕಲಾವಿದರಿಂದ ಕೊಂಬು ಕಹಳೆ, ತಮಟೆ ವಾದನ, ಪೂಜಾಕುಣಿತ, ಡೊಳ್ಳು ಕುಣಿತ, ಚಿಲಿಪಿಲಿ ಗೊಂಬೆ, ವೀರಗಾಸೆ, ಗೊರವರಕುಣಿತ ಪ್ರದರ್ಶನಗಳಿರುತ್ತವೆ.

ವಿಶೇಷವಾಗಿ ಗ್ರಾಮೀಣ ಪರಿಸರದಲ್ಲಿ ಕಾಣಬಹುದಾದ ಬಳೆಗಾರ, ಉರುಮೆ (ಪೆಟ್ಟಿಗೆ ಮಾರಮ್ಮ) ಕಲಾವಿದರು, ದಾಸಪ್ಪ-ಜೋಗಯ್ಯ ಬುಡಬುಡಕೆಯವರು, ಹಚ್ಚೆ ಕಲಾವಿದರು, ತಂಬೂರಿ, ಏಕತಾರಿ, ಸೋಬಾನೆ ಕಲಾವಿದರು ಹಳ್ಳಿ ನೈಜ್ಯ ವಾತಾವರಣದ ಅನಾವರಣ ಮಾಡಲಿದ್ದಾರೆ ಎಂದರು.

ರಾಜ್ಯ ಹೊರ ರಾಜ್ಯ ಕಲಾವಿದರಿಂದ ಜಾನಪದ ವೈಭವ ಸಂಜೆ 5.00 ಗಂಟೆಗೆ ಮತ್ತು ಶ್ರೀ ಕೆರೆಮನೆ ಶಿವನಂದ ಹೆಗಡೆ, ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಇವರಿಂದ “ಸುಭದ್ರಾಕಲ್ಯಾಣ” ಯಕ್ಷಗಾನ ಪ್ರದರ್ಶನವಿದೆ ಎಂದರು.

ಬದಲಾದ ಕಾಲ ಘಟ್ಟದಲ್ಲಿ ಜಾನಪದ-ಪರ್ಯಾಯ ಚಿಂತನೆ,ವಿಚಾರ ಸಂಕಿರಣ :

ಮಾ.13 ರಂದು ಬೆಳಗ್ಗೆ 11ಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷಟಿ.ತಿಮ್ಮೇಗೌಡ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಜಾನಪದ ವಿದ್ವಾಂಸರುಗಳಿಂದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.

ಕನ್ನಡ ನಾಡಿನ ಹಿರಿಯ ಜಾನಪದ ವಿದ್ವಾಂಸರಾದ ಡಾ. ಬಿ. ಎ ವಿವೇಕ ರೈ ಅವರು ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಡಾ ಹಿ.ಚಿ. ಬೋರಲಿಂಗಯ್ಯ ಪ್ರಾಸ್ತಾವಿಕ ನುಡಿ ನುಡಿಯಲಿದ್ದಾರೆ.

ಜನಪದ ಕಲೆ: ಪ್ರಯೋಗ ಮತ್ತು ಪ್ರದರ್ಶನ,

ಡಾ.ಬಾನಂದೂರು ಕೆಂಪಯ್ಯ ಜನಪದ ಸಂಗೀತ:ಆಧುನಿಕ ಸ್ಪರ್ಶ,

ಕೆರೆಮನೆ ಶಿವಾನಂದ ಹೆಗಡೆಜನಪದರಂಗಭೂಮಿ ಹೊಸ ಸಾಧ್ಯತೆಗಳು,

ಡಾ.ಮೋಹನ ಚಂದ್ರಗುತ್ತಿ ಜನಪದ ಆರಾಧನೆ, ಆಚರಣೆಗಳು: ಅಧ್ಯಯನದ ಹೊಸ ಸಾಧ್ಯತೆಗಳು ಕುರಿತು ಮಾತನಾಡಲಿದ್ದಾರೆ ಎಂದರು.

ಹಿರಿಯಜಾನಪದ ವಿದ್ವಾಂಸರು ಮತ್ತುಕಲಾವಿದರಿಗೆ ಪ್ರಶಸ್ತಿ ಪ್ರದಾನ :
ಮಾ.13 ರಂದು ರಂದುಸಂಜೆ 5 ಗಂಟೆಗೆ ಜಾನಪದ ಪ್ರಶಸ್ತಿ ಪ್ರದಾನಕಾರ್ಯಕ್ರಮವಿದೆ

ಆದಿಚುಂಚನಗಿರಿ ರಾಮನಗರ ಶಾಖಾ ಮಠಾಧೀಶ ಶ್ರೀಅನ್ನದಾನೇಶ್ವರನಾಥ ಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.

ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಸಚಿವರಾದ ಡಾ. ಸಿ.ಎನ್ ಅಶ್ವಥನಾರಾಯಣ ಅವರು ಹಿರಿಯ ಜಾನಪದ ವಿದ್ವಾಂಸರು, ಕಲಾವಿದರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಶಾಸಕರಾದ ಶ್ರೀಮತಿ ಅನಿತಾಕುಮಾರಸ್ವಾಮಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಜಿಲ್ಲಾವಾರು, ಕಲಾವಾರು ಪ್ರಶಸ್ತಿಗೆ ಆಯ್ಕೆಯಾದ ಕಲಾವಿದರಿಗೆ ಒಟ್ಟು 27 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

Janapada loka details and photographs –

ಪ್ರವಾಸಿ ಜಾನಪದ ಬೆಂಗಳೂರು – ಮೈಸೂರು ಹೆದ್ದಾರಿ ರಾಮನಗರದಿಂದ 4 ಕಿ.ಮೀ. ಜನಪದ ಲೋಕ ಅಥವಾ ಜಾನಪದ ಪ್ರಪಂಚ ಅಥವಾ ಜಾನಪದ ಸಂಸ್ಕೃತಿ, ಕರ್ನಾಟಕದ ಹಳ್ಳಿಯ ಜಾನಪದ ಕಲೆಗಳ ವಿಶೇಷ ಪ್ರದರ್ಶನವನ್ನು ಹೊಂದಿರುವ ಜಾನಪದ ವಸ್ತುಸಂಗ್ರಹಾಲಯ. ಇದು ಕರ್ನಾಟಕ ಜನಪದ ಪರಿಷತ್ತಿನ ಅಧೀನದಲ್ಲಿದೆ. ವಸ್ತುಸಂಗ್ರಹಾಲಯದಲ್ಲಿರುವ ಲೋಕ ಮಹಲ್, 5,000 ಜಾನಪದ ಕಲಾಕೃತಿಗಳ ಪ್ರದರ್ಶನವನ್ನು ಹೊಂದಿದೆ. ಇದು ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ರಾಮನಗರ ಜಿಲ್ಲೆಯಲ್ಲಿದೆ. ಭಾರತೀಯ ನಾಗರಿಕ ಸೇವಕ ಮತ್ತು ಜಾನಪದ ತಜ್ಞ ಎಚ್.ಎಲ್.ನಾಗೇಗೌಡ ಅವರು ಕರ್ನಾಟಕದ ವೈವಿಧ್ಯಮಯ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಲು ವಸ್ತುಸಂಗ್ರಹಾಲಯವನ್ನು ರಚಿಸುವ ಚಿಂತನೆ ನಡೆಸಿದರು. ಕರ್ನಾಟಕ ಜನಪದ ಪರಿಷತ್ತಿನ ಪ್ರಕಾರ 21 ಮಾರ್ಚ್ 1979 ರಂದು ಮೊದಲ ಬಾರಿಗೆ ಸ್ಥಾಪಿಸಲಾಯಿತು. ಜಾನಪದ ಕಲೆಗಳ ವಸ್ತುಸಂಗ್ರಹಾಲಯ, ಲೋಕ ಮಹಲ್, ಚಿತ್ರಕುಟೀರ, ದೊಡ್ಡಮನೆ, ಶಿಲಾಮಲ, ಅರ್ಘ್ಯಮಾಲ ಇತ್ಯಾದಿ. ವಸ್ತುಸಂಗ್ರಹಾಲಯವು 5,000 ಜಾನಪದ ಕಲಾಕೃತಿಗಳ ಸಂಗ್ರಹವನ್ನು ಹೊಂದಿದೆ. ಪ್ರದರ್ಶನವು ಕೃಷಿ ಬೇಟೆ ಮತ್ತು ಮೀನುಗಾರಿಕೆ ಉಪಕರಣಗಳು, ಆಯುಧಗಳು, ಚತುರ ಗೃಹೋಪಯೋಗಿ ಮುಖವಾಡಗಳು, ಗೊಂಬೆಗಳು ಮತ್ತು ನೆರಳಿನ ಬೊಂಬೆಗಳನ್ನು ಒಳಗೊಂಡಿರುವ ಈ ಸ್ಥಳವು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ರೆಸ್ಟೊರೆಂಟ್, ಕುಡಿಯುವ ನೀರು, ವಸತಿ ಮತ್ತು ಇತರ ಸೌಲಭ್ಯಗಳು ಲಭ್ಯವಿದೆ.

Bangalore – mysore highway 4 km from Ramanagara. Janapada loka or Folk world or folk culture, folk museum that has an exclusive display of the village folk arts of Karnataka. It is under the aegis of the Karnataka janapada parishat. Loka mahal, a wing in the museum has a dislay of 5,000 folk artifacts. It is situated in Ramanagara district , on the south of Bangalore. H. L. Nage Gowda, an Indian civil servent and folklorist thought of creating a museum to exhibit the varied folk art and cutlture of Karnataka. According Karnataka janapada parishat was first established on 21 march 1979. Folk arts museum, Loka mahal, chitra kuteera, Doddamane, Shilamala, Arghyamala etc. The museum has a collection of 5,000 folk artefacts. The display includes an array of agriculture hunting and fishing implements, weapons, ingenious household adgetsmasks, dolls and shadow puppets this place is most attract of tourists. Restaurant, drinking water, accomadation,and other facilities are available .

https://www.google.com/search?sa=X&biw=1366&bih=600&tbs=lf:1,lf_ui:2&tbm=lcl&q=janapada+loka&rflfq=1&num=10&rldimm=13542995223052568208#

Janapada loka

Copyright © All rights reserved Newsnap | Newsever by AF themes.
error: Content is protected !!