ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (84) ನವದೆಹಲಿಯಲ್ಲಿ ಸೋಮವಾರ ವಿಧಿವಶರಾದರು.
ಕಾಂಗ್ರೆಸ್ ಕಟ್ಟಾಳು ಎಂದೇ ಖ್ಯಾತಿಯಾಗಿ ಪಕ್ಷ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದ ಪ್ರಣಬ್ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಶಿಸ್ತಿನಿಂದ ಆಡಳಿತ ನಡೆಸಿದರು.
ತಮ್ಮ ತಂದೆ ಪ್ರಣಬ್ ಮುಖರ್ಜಿ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಪುತ್ರ ಅಭಿಜಿತ್ ತಿಳಿಸಿದರು. 2012 ರಿಂದ 2017 ರವರೆಗೆ ರಾಷ್ಟ್ರಪತಿಯಾಗಿ ದೇಶ ಸೇವೆ ಮಾಡಿದ ಪ್ರಣಬ್ ಮೆದುಳಿನ ರಕ್ತ ಸ್ರಾವದಿಂದ ಬಳಲುತ್ತಿದ್ದರು. ಅಲ್ಲದೇ ಕೊರೋನಾ ಪಾಸಿಟಿವ್ ಪತ್ತೆಯಾದ ನಂತರ ಉಸಿರಾಟದ ತೊಂದರೆಯೂ ಆಗಿತ್ತು.
ಪಶ್ಚಿಮ ಬಂಗಾಲ ರಾಜ್ಯದ ಪ್ರಣಬ್, ಇಂದಿರಾ ಗಾಂಧಿಗೆ ಪರಮ ಆಪ್ತರಾಗಿದ್ದರು. 1969 ರಲ್ಲಿ ಮೊದಲ ಬಾರಿ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಬಹು ದೊಡ್ಡ ಮುತ್ಸದ್ಧಿ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಪ್ರಣಬ್, ಕಾಂಗ್ರೆಸ್ ಪಕ್ಷದಲ್ಲಿ ಎಂತಹ ಬಿರುಗಾಳಿ ಎದ್ದಾಗಲೂ ಸಮಸ್ಯೆಗಳನ್ನು ಬೆಣ್ಣೆಯಲ್ಲಿ ಕೂದಲು ತೆಗೆದ ಮಾದರಿಯಲ್ಲಿ ಪರಿಹಾರ ಮಾಡಿರುವ ಉದಾಹರಣೆಗಳು ಇವೆ. 2019 ರಲ್ಲಿ ಬಿಜೆಪಿ ಸಕರ್ಾರವು ಪ್ರಣಬ್ ರಾಜಕೀಯ ಸೇವೆ ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಮಾಜಿ ರಾಷ್ಟ್ರಪತಿ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದ್ದಾರೆ.
ಪರಮಾತ್ಮನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ 🙏🙏
ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ದೇವರು ಅವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಸಹಿಸಿಕೊಳ್ಳಲು ಧರ್ಯ ಮತ್ತ ವಿಶ್ವಾಸವನ್ನು ಕೊಡಲಿ..💐💐💐