ನ್ಯೂಸ್ ಸ್ನ್ಯಾಪ್.
ಮಂಡ್ಯ.
ಕರ್ನಾಟಕದ ಗುಪ್ತಚರ ಇಲಾಖೆ ಕತ್ತೆ ಕಾಯಲು ಮಾತ್ರ ಲಾಯಕ್. 32 ಮಂದಿ ರಾಜಕಾರಣಿಗಳು ಡ್ರಗ್ಸ್ ದಂಧೆಯಲ್ಲಿದ್ದಾರೆ. ಪಟ್ಟಿ ಮಾಡಿ ನಾನೇ ಗೃಹ ಮಂತ್ರಿಗಳಿಗೆ ಒಪ್ಪಿಸುತ್ತೇನೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶನಿವಾರ ಹೇಳಿದರು.
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಇಡೀ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಕೆಲಸ ಮಾಡುತ್ತದೆ. ರಾಜ್ಯ ಪೊಲೀಸರಿಗೆ ಎಲ್ಲವೂ ಗೊತ್ತು. ಎಳ್ಳಷ್ಟು ಗೊತ್ತಿಲ್ಲದವರಂತೆ ನಾಟಕ ಮಾಡುತ್ತಿದ್ದಾರೆ. ಕೇಂದ್ರದವರು ಬಂದು ರಾಜ್ಯದಲ್ಲಿ ರೈಡ್ ಮಾಡುತ್ತಾರೆ.
ಕರ್ನಾಟಕದವರು ಸಗಣಿ ತಿನ್ನುತ್ತಾರೆಯೇ? ರಾಜ್ಯ ಗುಪ್ತಚಾರ ಇಲಾಖೆ ಕತ್ತೆ ಕಾಯುತ್ತದೆಯೇ ಎಂದು ಪ್ರಶ್ನೆ ಮಾಡಿದರು.
ನಮಗೆ ಎಲ್ಲಾ ಗೊತ್ತು. ಈ ರಾಜಕಾರಣಿಗಳು ಪೊಲೀಸರ ಕೈ ಕಟ್ಟಿ ಹಾಕುತ್ತಿದ್ದಾರೆ. ಬಹುತೇಕ ರಾಜಕಾರಣಿಗಳು ಪಬ್, ಬಾರ್, ಕ್ಲಬ್‌ಗಳು ಇವೆ. ರಾಜಕಾರಣಿಗಳಿಗೆ ಡ್ರಗ್ಸ್ ನಿಂದಲೇ ಸಾವಿರಾರು ಕೋಟಿ ರು. ಹಣ ಬರುತ್ತದೆ. ಹೆಂಡ ಮತ್ತು ಡ್ರಗ್ಸ್ ಲಾಭಿಗಳೇ ರಾಜ್ಯದಲ್ಲಿ ರಾಜಕಾರಣವನ್ನು ಮಾಡುತ್ತವೆ ಎಂದರು.
32 ಮಂದಿ ಪಟ್ಟಿ ಕೊಡುವೆ ನನ್ನ ಹತ್ತಿರ 32 ಮಂದಿ ರಾಜಕಾರಣಿಗಳು ಡ್ರಗ್ ಮಾಫಿಯಾದಲ್ಲಿ ಇದ್ದಾರೆಂಬ ಪಟ್ಟಿ ಇದೆ. ಸಾಕ್ಷಿ ಸಮೇತವಾಗಿ ಈ ಪಟ್ಟಿಯನ್ನು ನಾನು ಹೋಂ ಮಿನಿಸ್ಟರ್ ಗೆ ಖಂಡಿತಾ ಕೊಡುತ್ತೇನೆ.
ಈ ಡ್ರಗ್ಸ್ ಮಾಫಿಯಾದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮಾಹಾಶಯರೂ ಇದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ 8 ಮತ್ತು 9 ನೇ ತರಗತಿ ಓದುವ ಶಾಲಾ ಮಕ್ಕಳಿಗೆ ಡ್ರಗ್ಸ್ ಸಿಗುತ್ತದೆ. ಮೈಸೂರಿನ ಶಾಲೆಯೊಂದರಲ್ಲಿ ಒಬ್ಬ ಹುಡುಗ ಪೆನ್ ಮೂಲಕ ವಾಸನೆ ತೆಗೆದುಕೊಳ್ಳುತ್ತಿದ್ದ. ಅದನ್ನು ಪರೀಕ್ಷೆ ಮಾಡಿದರೆ ಪೆನ್ ಒಳಗೆ ಡ್ರಗ್ಸ್ ಇತ್ತು. ತನಿಖೆ ಮಾಡಿದರೆ ಈ ಜಾಲದಲ್ಲಿ 10 ಜನ ಇದ್ದಾರೆ ಎನ್ನುವುದು ಬೆಳಕಿಗೆ ಬಂತು. ಹೀಗಾದರೆ ಮಕ್ಕಳ ಭವಿಷ್ಟದ ಗತಿ ಏನಾಗಬೇಕು?
ಪೊಲೀಸರು ಏನು ಮಾಡುತ್ತಿದ್ದಾರೆಂದು ಪ್ರಶ್ನೆ ಮಾಡಿದರು.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ