ನ್ಯೂಸ್ ಸ್ನ್ಯಾಪ್.
ಬೆಂಗಳೂರು.
ನಾಳೆ ಹಿಂದಿ ದಿವಸದ ನಿಮಿತ್ಯ ಹಿಂದಿ ವಿರೋಧಿಗಳು ಕೇಂದ್ರದ ವಿರುದ್ಧ ಗುಡುಗಿದ್ದಾರೆ. ಕೇಂದ್ರದ ಹಿಂದಿ ಹೇರಿಕೆಯ ನೀತಿಯ ವಿರುದ್ಧ ಬಹು ಭಾಷಾ ನಟ ಪ್ರಕಾಶ್ ರಾಜ್ ಮತ್ತೆ ದನಿ ಎತ್ತಿದ್ದಾರೆ.
ತಮ್ಮ ಟೀ ಶರ್ಟ್ ನಲ್ಲಿ ಕರ್ನಾಟಕ ಭೂಪಟ ಬರೆಸಿಕೊಂಡು, ಅದರ ಮಧ್ಯೆ ನಂಗೆ ಹಿಂದಿ ಬರಲ್ಲ ಹೋಗ್ರಪ್ಪ… ಎಂದು ನಿಷ್ಠೂರವಾಗಿ ಹೇಳುವ ಮೂಲಕ ಹಿಂದಿ ವಿರುದ್ದ ಹೇರಿಕೆ ವಿರುದ್ಧ ಗುಡುಗಿದ್ದಾರೆ. ಪ್ರಕಾಶ್ ರಾಜ್ ಅಭಿಪ್ರಾಯ ವೈರಲ್ ಆಗಿದೆ.
ಪ್ರಕಾಶ್ ರಾಜ್ ತಮ್ಮ ಟ್ವಿಟ್ನಲ್ಲಿ ಹೀಗೆ ಹೇಳಿದ್ದಾರೆ. ನಾನು ಹಲವು ಭಾಷೆ ಬಲ್ಲೆ. ಹಲವು ಭಾಷೆಯಲ್ಲಿ ಕೆಲಸವನ್ನೂ ಮಾಡಿದ್ದೇನೆ. ಆದರೆ ನನ್ನ ಕಲಿಕೆ, ನನ್ನ ಗ್ರಹಿಕೆ, ನನ್ನ ಶಕ್ತಿ ಮತ್ತು ನನ್ನ ಮಾತೃಭಾಷೆ ಮಾತ್ರ ಕನ್ನಡ. ಹಿಂದಿ ಹೇರಿಕೆ ಬೇಡ ಎಂದಿದ್ದಾರೆ.
ನಟ ಪ್ರಕಾಶ್ ರಾಜ್ ಕನ್ನಡ ಪ್ರೇಮಕ್ಕೆ ಅನೇಕರು ಫಿದಾ ಆಗಿದ್ದಾರೆ. ಮತ್ತೆ ಕೆಲವರು ಮಾತ್ರ ನಿಮ್ಮ ಪ್ರೊಪೈಲ್ ಪಿಕ್ಚರ್ ನಲ್ಲಿರುವ ಹಿಂದಿ ಪದವನ್ನು ತೆಗೆಯಿರಿ. ನಂತರ ಕನ್ನಡ ಪ್ರೇಮದ
ಬಗ್ಗೆ ಮಾತನಾಡಿ ಎಂದೂ ಸಹ ಪ್ರಕಾಶ್ ರಾಜ್ ಗೆ ಕುಟುಕಿದ್ದಾರೆ.
More Stories
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ