ನನ್ನ ತಾಯಿ ಭವಾನಿ ರೇವಣ್ಣ ಅವರಿಗೆ ಹಾಸನ ಟಿಕೆಟ್ ಕೊಡದೇ ಹೋದರೆ ವಿಧಿ ಇಲ್ಲದೆ ನಾನು ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ಪ್ರಜ್ವಲ್ ರೇವಣ್ಣ ತಾತ ಎಚ್ ಡಿ ದೇವೇಗೌಡರಿಗೆ ನೇರ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ
ಮಾಜಿ ಪ್ರಧಾನಿ , ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾಗಿ ತಾತನಿಗೆ ತಮ್ಮ ಸದಸ್ಯ ಸ್ಥಾನದ ರಾಜೀನಾಮೆ ನೀಡಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆಂದು ಗೊತ್ತಾಗಿದೆ.
ಹಾಸನ ಎಂದರೆ ಅದು ಕುಮಾರಸ್ವಾಮಿ ಸೊತ್ತಲ್ಲ. ಜೆಡಿಎಸ್ ಅವರೊಬ್ಬರ ಆಸ್ತಿಯೂ ಅಲ್ಲ. ಜನರಿಗೆ ಪರಿಚಯವೇ ಇಲ್ಲದ ಸ್ವರೂಪ್ ಪ್ರಕಾಶ್ ಟಿಕೆಟ್ ನೀಡುವ ಆಸಕ್ತಿ ಯಾಕೆ ಎಂದು ಕುಮಾರಸ್ವಾಮಿ ನಿಲುವು – ನಿರ್ಧಾರಗಳನ್ನು ಪ್ರಜ್ವಲ್ ಪ್ರಶ್ನೆ ಮಾಡಿದ್ದಾರೆ.
ನಮ್ಮ ತಾಯಿ ಸ್ಪರ್ಧೆ ಮಾಡಿದರೆ ಗೆಲುವು ನಿಶ್ಚಿತ.ಟಿಕೆಟ್ ಕೊಡಿ. ಹಿಂದೆ ಬೇಲೂರಿನಲ್ಲಿ ಸ್ಪರ್ಧೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿ ಟಿಕೆಟ್ ತಪ್ಪಿಸಿದರು. ಈಗ ಹಾಸನಕ್ಕೂ ಕೂಡ ಸಾಮಾನ್ಯ ಕಾರ್ಯಕರ್ತನ ಹೆಸರಿನಲ್ಲಿ ನನ್ನ ತಾಯಿ ಅನ್ಯಾಯವಾದರೆ ನಾನು ಸಹಿಸುವುದಿಲ್ಲ. ನಂಗೆ ಪಕ್ಷದ ಯಾವುದೇ ಅಧಿಕಾರ ಬೇಡ.ರಾಜೀನಾಮೆ ತೆಗೆದುಕೊಳ್ಳಿ ಎಂದು ದೇವೇಗೌಡರಿಗೆ ರಾಜೀನಾಮೆ ಸಲ್ಲಿಸಿ ಬಂದಿದ್ದಾರೆ ಗೊತ್ತಾಗಿದೆ.
ಈಗಿನ ಈ ಎಲ್ಲಾ ಬೆಳವಣಿಗೆಗಳು ದೇವೇಗೌಡರಿಗೆ ಬಿಸಿ ತುಪ್ಪವಾಗಿದೆ. ಭಾರಿ ಬಿಕ್ಕಟ್ಟು ತಂದು ಹಾಕುವ ಸಾಧ್ಯತೆ ಇದೆ.ಇದನ್ನು ಓದಿ –ಕೇಂದ್ರದಲ್ಲಿನ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಖಾಲಿ ಹುದ್ದೆಗಳು
- ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ
- ಕೆನಡಾವನ್ನು ಅಮೆರಿಕಾದ 51ನೇ ರಾಜ್ಯವನ್ನಾಗಿ ಮಾಡಲು ಟ್ರಂಪ್ ಆರ್ಥಿಕ ಒತ್ತಡದ ಬೆದರಿಕೆ
- ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ
- KRS ಡ್ಯಾಂನಿಂದ ಕೃಷಿಗೆ ನೀರು: ವೇಳಾಪಟ್ಟಿ ಪ್ರಕಟ
- BBMP ಕಚೇರಿಯಲ್ಲಿ ಇಡಿ ದಾಳಿ: 960 ಕೋಟಿ ರೂ. ಅಕ್ರಮ ತನಿಖೆ
- ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ: ಈಶ್ವರ್ ಖಂಡ್ರೆ ಸ್ಪಷ್ಟನೆ
More Stories
ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ
ಕೆನಡಾವನ್ನು ಅಮೆರಿಕಾದ 51ನೇ ರಾಜ್ಯವನ್ನಾಗಿ ಮಾಡಲು ಟ್ರಂಪ್ ಆರ್ಥಿಕ ಒತ್ತಡದ ಬೆದರಿಕೆ
ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ