December 23, 2024

Newsnap Kannada

The World at your finger tips!

prabhudeva

ಪ್ರಭುದೇವ್ ಜಸ್ಟ್ 47; ಸೆಕೆಂಡ್ ಮ್ಯಾರೇಜ್ ಗೆ ರೆಡಿ – ಹುಡುಗಿ ಯಾರು?

Spread the love

ಕಾಲಿವುಡ್ ನಟ, ನಿರ್ದೇಶಕ, ನೃತ್ಯ ನಿರ್ದೇಶಕ ಪ್ರಭುದೇವಾ ಗೆ ಈಗ 47 ವರ್ಷ ವಯಸ್ಸು. ಈಗಾಗಲೇ ಒಂದು ಬಾರಿ ಮದುವೆಯಾಗಿದ್ದಾರೆ. ಒಂದು ಲಿವ್‌ ಇನ್ ರಿಲೇಶನ್‌ಶಿಪ್ ನಲ್ಲಿದ್ದಾರೆ. ಈಗ ಮತ್ತೆ ಮದುವೆ ಆಗುವ ಯೋಚನೆಯಲ್ಲಿದ್ದಾರೆ ಆಸಾಮಿ!

ಹೌದು, ನಟ ಪ್ರಭುದೇವಾ 1995 ರಲ್ಲಿಯೇ ರಾಮಲತಾ ಜೊತೆ ವಿವಾಹವಾದರು. ಅವರಿಗೆ ಮೂರು ಜನ ಮಕ್ಕಳಿದ್ದಾರೆ. ಮೊದಲನೇ ಮಗು 2008 ರಲ್ಲಿ ಕ್ಯಾನ್ಸರ್‌ಗೆ ತುತ್ತಾಗಿ ಅಸುನೀಗಿದ. ಆ ನಂತರ ಅವರು ನಯನತಾರಾ ಜೊತೆಗೆ ಲಿವ್ ಇನ್ ರಿಲೇಶನ್‌ಶಿಪ್‌ಗೆ ಒಳಗಾದರು.

ಆದರೆ ಪ್ರಭುದೇವಾ-ನಯನತಾರಾ ಸಂಬಂಧ ತಮಿಳುನಾಡಿನಲ್ಲಿ ವಿವಾದವನ್ನು ಸೃಷ್ಟಿಸಿತು. ಪ್ರಭುದೇವಾ ಮೊದಲ ಪತ್ನಿ ಕೋರ್ಟ್ ಮೆಟ್ಟಿಲೇರಿದರು. ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಸಿದರು. ಮಹಿಳಾ ಪರ ಸಂಘಟನೆಗಳು ನಯನತಾರಾ ಪುತ್ಥಳಿ ಸುಟ್ಟವು. ನಂತರ ನಯನತಾರಾ ಸಹ ಪ್ರಭುದೇವಾ ಇಂದ ದೂರಾದರು.

ನಯನತಾರಾ ಪ್ರಭುದೇವಾ ಇಂದ ದೂರಾಗಿ ವಿಘ್ನೇಶ್ ಶಿವನ್‌ ಜೊತೆಗೆ ಸುತ್ತಾಟ ಪ್ರಾರಂಭಿಸಿದರು. ಇತ್ತ ಪ್ರಭುದೇವಾ ಪತ್ನಿ ರಾಮಲತಾಗೆ ವಿಚ್ಛೇಧನ ನೀಡಿ ಮತ್ತೆ ಒಂಟಿಯಾದರು. ಆದರೆ ಈಗ ಪ್ರಭುದೇವಾ ಮತ್ತೆ ಮದುವೆಯಾಗುವ ನಿರ್ಣಯ ಮಾಡಿದ್ದಾರೆ.

PRABHU1

ಹೌದು, ಪ್ರಭುದೇವಾ ತಮ್ಮ 47 ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗುವ ನಿರ್ಣಯ ಮಾಡಿದ್ದು, ತಮ್ಮ ಸಂಬಂಧಿಯೊಬ್ಬರನ್ನೇ ಮದುವೆ ಆಗಲಿದ್ದಾರಂತೆ. ಈ ಬಗ್ಗೆ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ. ಈಗಾಗಲೇ ಅವರಿಬ್ಬರು ಪ್ರೇಮದಲ್ಲಿದ್ದಾರಂತೆ.

ಅತ್ತಕಡೆ ಪ್ರಭುದೇವಾ ಹಳೆ ಪ್ರೇಯಸಿ ನಯನತಾರಾ ಹೊಸ ಬಾಯ್‌ಫ್ರೆಂಡ್ ವಿಗ್ನೇಶ್ ಶಿವನ್ ಜೊತೆಗೆ ಸಖತ್ ಟ್ರಿಪ್‌ಗಳನ್ನು ಹೊಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗೆಳೆಯನೊಂದಿಗೆ ಆಪ್ತ ಕ್ಷಣಗಳ ಫೊಟೊ ಹಂಚಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದ ತಾವೂ ಮತ್ತೆ ಮದುವೆಯಾಗುವ ಯೋಚನೆ ಮಾಡಿದರೋ ಏನೋ ಪ್ರಭುದೇವಾ?

ಸಿನಿಮಾ ವಿಷಯಕ್ಕೆ ಬರುವುದಾದರೆ, ಪ್ರಭುದೇವಾ ನಿರ್ದೇಶಿಸಿರುವ ಸಲ್ಮಾನ್ ನಟನೆಯ ರಾಧೆ ಸಿನಿಮಾ ಬಿಡುಗಡೆ ಆಗಬೇಕಿದೆ. ಅದರ ಹೊರತಾಗಿ ತಮಿಳಿನ ಪೊನ್ ಮಾಣಿಕ್‌ವೇಲ್, ತೀಲ್, ಯಂಗ್ ಮಂಗ್ ಸಂಗ್, ಭಗೀರಾ, ಒಮೈ ವಿಜಿಗೈ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಕುಲದಲ್ಲಿ ಕೀಳ್ಯಾವುದೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!