ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: 40ಕ್ಕೂ ಹೆಚ್ಚು ಮಂದಿ ದುರ್ಮರಣ

Team Newsnap
1 Min Read

ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, ಈ ತೀವ್ರತೆಗೆ 40 ಕ್ಕೂ ಅಧಿಕ ಮಂದಿ ದುರ್ಮರಣ ಹೊಂದಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.

ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.2 ದಾಖಲಾಗಿದ್ದು, ಭೂಕಂಪದ ಕೆಂದ್ರ ಬಿಂದು ಮುಜಾನೆ ನಗರದ ಈಶಾನ್ಯ 6 ಕಿ.ಮೀ. ದೂರದಲ್ಲಿದ್ದು, ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ ಭೂಕಂಪದ ಕೇಂದ್ರಬಿಂದು ಭೂಮಿಯಿಂದ 10 ಕಿ.ಮೀ. ಕೆಳಗೆ ವರದಿಯಾಗಿದೆ.

ಸುಮಾರು 10 ಸೆಂಕೆಡುಗಳ ಕಾಲ ಭೂಕಂಪವಾಗಿದ್ದು, ಆಸ್ಪತ್ರೆ ಕಟ್ಟಡ ಕುಸಿದ್ದು ಬಿದ್ದಿದ್ದರಿಂದ ರೋಗಿಗಳು ವೈದ್ಯರು ಕೂಡ ಭೂಕಂಪದ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಬದುಕುಳಿದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಣ್ಣ ಟೆಂಟ್‌ಗಳನ್ನು ಹಾಕಿ ವ್ಯವಸ್ಥೆ ಮಾಡಲಾಗಿದೆ. ಇದ್ದಕ್ಕಿದ್ದಂತೆ ಆಸ್ಪತ್ರೆ ಅಲುಗಾಡಿದಂತಾಗಿದ್ದು, ನೋಡ ನೋಡುತ್ತಿದ್ದಂತೆ ಒಂದು ಭಾಗ ಕುಸಿದು ಬಿದ್ದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Share This Article
Leave a comment