ಕನ್ನಡ ಚಿತ್ರ ರಂಗದ ಭರವಸೆಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (46)ತೀವ್ರ ಹೃದಯಾಘಾತ ದಿಂದ ಬೆಂಗಳೂರಿನಲ್ಲಿ ಶುಕ್ರವಾರ ಕೊನೆಯುಸಿರೆಳೆದರು.
ಪತ್ನಿ ಅಶ್ವಿನಿ, ಇಬ್ಬರು ಮಕ್ಕಳಾದ ಧೃತಿ ಹಾಗೂ ವಂದಿತಾ ಸೇರಿದಂತೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಅಕ್ಕಂದಿರನ್ನು ಅಪ್ಪು ಅಗಲಿದ್ದಾರೆ.
ವರ ನಟ ಡಾ ರಾಜ್ ಕುಮಾರ್ ಮೂರನೇ ಪುತ್ರ ಪುನೀತ್ ಗೆ ವಿಕ್ರಮ್ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ
1975 ಮಾಚ್೯ 17 ರಂದು ಜನಿಸಿದ ಅಪ್ಪು ( ಪುನೀತ್ ರಾಜ್‍ಕುಮಾರ್) ಕನ್ನಡದ ಚಿತ್ರರಂಗದ ಅತ್ಯಂತ ಭರವಸೆ ನಟರಾಗಿದ್ದರು.
ಸರಳ, ಸಜ್ಜನಿಕೆಯ ಅಪ್ಪು ಕನ್ನಡದ ಚಿತ್ರರಂಗದ ಬಹು ದೊಡ್ಡ ಆಸ್ತಿ ಆಗಿದ್ದರು. ಬಾಲ ನಟನಾಗಿ ಚಿತ್ರರಂಗ ಪ್ರವೇಶ ಮಾಡಿದ ಪುನೀತ್ ನಟಿಸಿದ ಬೆಟ್ಟದ ಹೂ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ.
ಭಕ್ತ ಪ್ರಹ್ಲಾದ ಚಿತ್ರದಲ್ಲಿ ಡಾ ರಾಜ್ ಕುಮಾರ್ ಎದುರಿನಲ್ಲೇ ಪುನೀತ್ ಅದ್ಭುತ ನಟನೆ ಮಾಡಿದ್ದರು.
ಭಜರಂಗಿ-2 ಚಿತ್ರದ ಇಂದಿನ ಶೋ ಕ್ಯಾನ್ಸಲ್
ಹೃದಯಾಘಾತ ದಿಂದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾದ ಹಿನ್ನೆಲೆಯಲ್ಲಿ ಶಿವಣ್ಣ ಅಭಿನಯದ ಭಜರಂಗಿ-2 ಸಿನಿಮಾದ ಎಲ್ಲಾ ಶೋಗಳನ್ನ ರದ್ದು ಮಾಡಲಾಗಿದೆ. ಇಂದು ಬೆಳಗ್ಗೆ ಭಜರಂಗಿ-2 ಸಿನಿಮಾ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಿತ್ತು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು