ಭಾರತೀಯ ಜನತಾ ಪಾರ್ಟಿ ಉತ್ತಮವಾದ ಆಡಳಿತ ಕೊಟ್ಟಿದೆ.
ಬಿಜೆಪಿ ಮೇಲೆ ಜನರ ಆಶೀರ್ವಾದ ಸದಾ ಇರುತ್ತೆ ಅಲ್ಲದೇ ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿಯಲ್ಲಿ ನಮ್ಮ ಪಕ್ಷ ಉತ್ತಮವಾದ ಆಡಳಿತ ನೀಡುತ್ತದೆ. ಬೆಳಗಾವಿ ನಗರ ಬಹಳಷ್ಟು ಅಭಿವೃದ್ಧಿಯಾಗಿದ್ದು ನಮ್ಮ ಆಡಳಿತದಲ್ಲಿ ಅವಧಿಯಲ್ಲಿ. ಹೀಗಾಗಿ ಜಯ ನಮ್ಮದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಮಂಡ್ಯ ದಲ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥ್ ನಾರಾಯಣ ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಪಾಲಿಕೆ ಚುನಾವಣೆ ಫಲಿತಾಂಶಕ್ಕೆ ಪ್ರತಿಕ್ರಿಯೆ ನೀಡಿದರು.
ಬೆಲೆ ಏರಿಕೆ ಕುಗ್ಗುತ್ತದೆ:
ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಳಕ್ಕೆ ಬಿಜೆಪಿ ಕಾರಣವಲ್ಲ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆ ಆಗುತ್ತಿದೆ. ಹೀಗಾಗಿ ಪೆಟ್ರೋಲ್ ಮತ್ತು ಗ್ಯಾಸ್ ಬೆಲೆ ಏರಿಕೆಯಾಗಿದೆ.
ಸದ್ಯದಲ್ಲೇ ಅದರ ಬೆಲೆ ಕಡಿಮೆ ಆಗಲಿದೆ. ಬೆಲೆ ಕಡಿಮೆ ಮಾಡುವ ಪ್ರಯತ್ನ ಆಗತ್ತೆ ಎಂದರು.
ಮುಂದಿನ ಚುನಾವಣೆಗಳನ್ನು ಸಿಎಂ ಹಾಗೂ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಎದುರಿಸಲಾಗುವುದು.
ಮುಂದಿನ ದಿನಗಳಲ್ಲಿ ಮಂಡ್ಯ ಭಾಗದಲ್ಲಿ ಸಿಎಂ ಪ್ರವಾಸ ಮಾಡಲಿದ್ದಾರೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಗೆ ಕಾಂಗ್ರೆಸ್ ವಿರೋಧಕ್ಕೆ ಪ್ರತಿಕ್ರಿಯೆ ನೀಡಿ
ಪ್ರತಿಯೊಬ್ಬರ ಬದುಕು ಹಸನಾಗಲಿಕ್ಕೆ ರಾಷ್ಟ್ರೀಯ ಶಿಕ್ಷಣ ಜಾರಿ ಆಗಬೇಕು. ಇದರ ಬಗ್ಗೆ ಏನು ತಪ್ಪು ಇದೆ ಅಂತ ವಿರೋಧ ಪಕ್ಷದವ್ರು ಹೇಳ್ತಿಲ್ಲ. ಈ ವಿಚಾರವಾಗಿ ಬರಿ ರಾಜಕೀಯ ಮಾಡ್ತಿದ್ದಾರೆ.
ಜನ ಹಿಂದುಳಿಬೇಕು. ಸದೃಢರಾಗಬಾರದು ಅನ್ನೋದು ಕೆಲವರಿಗಿದೆ ಎಂದು ಹೇಳಿದರು.
ಸರಿಯಾದ ಶಿಕ್ಷಣವಿಲ್ಲದೆ ಸಮಾಜಕ್ಕೆ ಅನ್ಯಾಯವಾಗ್ತಿತ್ತು ಈಗ ಅದನ್ನು ನಾವು ಸರಿಪಡಿಸಿದ್ದೇವೆ.
ರಾಷ್ಟ್ರೀಯ ಶಿಕ್ಷಣ ವನ್ನು ಹಂತ ಹಂತವಾಗಿ ಮಾಡಲಿದ್ದೇವೆ.
ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ಜಾರಿ ಮಾಡಿದ್ದು ಕರ್ನಾಟಕವಾಗಿದೆ ಎಂದರು
ಗಣೇಶ ಉತ್ಸವಕ್ಕೆ ಇಷ್ಟೆಲ್ಲ ಸೋಂಕಿನ ನಡುವೆಯೂ ನಿಯಮಗಳನ್ನು ಸಡಿಲಗೊಳಿಸಿದ್ದೇವೆ.
ಈಗ 5 ದಿನ ಹಬ್ಬ ಮಾಡಲು ಅವಕಾಶ ಮಾಡಿಕೊಡಲಾಗುದೆ. ಇದಕ್ಕಿಂತ ಇನ್ನೇನು ಮಾಡಲು ಸಾಧ್ಯ.
ಜನರಪರವಾಗೆ ಮಾಡಿದ್ದೇವೆ. ಜನರ ವಿರೋಧವಾಗಿ ಮಾಡಿಲ್ಲ ಎಂದರು.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ