November 24, 2024

Newsnap Kannada

The World at your finger tips!

mohan bagavat

ದೇಶದಲ್ಲಿ ಜನಸಂಖ್ಯಾ ಅಸಮತೋಲನ ದೊಡ್ಡ ಸಮಸ್ಯೆ-ಮೋಹನ್ ಭಾಗವತ್

Spread the love

ದೇಶದಲ್ಲಿ ಜನಸಂಖ್ಯಾ ಅಸಮತೋಲನ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಜನಸಂಖ್ಯಾ ನೀತಿಯನ್ನು ಮತ್ತೊಮ್ಮೆ ಪರಿಗಣಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಮುಂದಿನ 50 ವರ್ಷಗಳವರೆಗೆ ಹೊಸ ನೀತಿಯನ್ನು ರೂಪಿಸಬೇಕು ಮತ್ತು ಅದನ್ನು ಸಮಾನಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.

ಇಂದು ನಾಗಪುರದಲ್ಲಿ96ನೇ ಆರ್ ಎಸ್ ಎಸ್ ಸಂಸ್ಥಾಪನಾ ದಿನ ಹಾಗೂ ವಿಜಯ ದಶಮಿ ಹಬ್ಬದ ಹಿನ್ನೆಲೆ ಮಾತನಾಡಿದ ಅವರು, ಸ್ವಾಧೀನತದಿಂದ ಸ್ವಾತಂತ್ರ್ಯದವರೆಗೂ ದೇಶದ ಪ್ರಯಾಣ ಇನ್ನೂ ಪೂರ್ಣಗೊಂಡಿಲ್ಲ. ಏಕೆಂದರೆ ಭಾರತ ಪ್ರಗತಿ ಮತ್ತು ಗೌರವಾನ್ವಿತ ಸ್ಥಾನಕ್ಕೆ ಜನಸಂಖ್ಯಾ ಅಸಮತೋಲನ ಅಡ್ಡಿಯನ್ನುಂಟು ಮಾಡುತ್ತಿದೆ.

ಸ್ವತಂತ್ರ ಭಾರತದ ಆದರ್ಶಗಳೊಂದಿಗೆ ಪ್ರಸ್ತುತ ಸನ್ನಿವೇಶವನ್ನು ಹೋಲಿಸಿದಾಗ ಮತ್ತು ವ್ಯತಿರಿಕ್ತಗೊಳಿಸಿದಾಗ, ಸ್ವಾಧೀನತದಿಂದ ಸ್ವಾತಂತ್ರ್ಯದವರೆಗೂ ನಮ್ಮ ಪ್ರಯಾಣ ಪೂರ್ಣಗೊಂಡಿಲ್ಲ. ಜಗತ್ತಿನಲ್ಲಿ ಭಾರತ ಪ್ರಗತಿ ಮತ್ತು ಗೌರವಾನ್ವಿತ ಸ್ಥಾನಕ್ಕೆ ಏರುವ ಅಂಶಗಳು ಅವರ ಪಟ್ಟಭದ್ರ ಹಿತಾಸಕ್ತಿಗಳಿಗೆ ಅಡ್ಡಿಯುಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.  

sumaravi conventional hall 3

ನಾವು ಸಂಸ್ಕೃತಿಯನ್ನು ವಿಭಜನೆಗೊಳಿಸಲು ಇಷ್ಟಪಡುವುದಿಲ್ಲ. ಆದರೆ ರಾಷ್ಟ್ರವನ್ನು ಪ್ರೀತಿ ಎಂಬ ಸಂಸ್ಕೃತಿಯಿಂದ ಬಂಧಿಸುತ್ತೇವೆ. ಹೀಗಾಗಿ ಹುಟ್ಟುಹಬ್ಬದಂತೆ ಎಲ್ಲಾ ಹಬ್ಬಗಳನ್ನು ಕೂಡ ಒಟ್ಟಿಗೆ ಆಚರಿಸಬೇಕು. ದೇಶವನ್ನು ವಿಭಜನೆಗೊಳಿಸುವುದು ದುಃಖಕರವಾದ ಇತಿಹಾಸ, ಈ ಇತಿಹಾಸದ ಸತ್ಯವನ್ನು ಅರಿತು ಕಳೆದುಹೋದ ಸಮಗ್ರತೆ ಮತ್ತು ಏಕತೆಯನ್ನು ಮರಳಿ ತರಲು ಹೊಸ ಪೀಳಿಗೆಯವರು ಇತಿಹಾಸದ ಬಗ್ಗೆ ತಿಳಿದಿರಬೆಕು ಎಂದಿದ್ದಾರೆ.

ಇದೇ ವೇಳೆ ಬಿಟ್ ಕಾಯಿನ್ ಮತ್ತು ಒಟಿಟಿ ಫ್ಲಾಟ್‍ಫಾರ್ಮ್‍ಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಈ ವಿಚಾರವನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ಭಯೋತ್ಪಾದಕರು ಜನರಲ್ಲಿ ಭಯ ಹುಟ್ಟಿಸುವ ಸಲುವಾಗಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಹಿಂಸಾಚಾರ ನಡೆಸುತ್ತಿದ್ದಾರೆ. ಹೀಗಾಗಿ ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಿ ಅವರು ಸದಾ ಸನ್ನದ್ಧರಾಗಿರುವಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!