ಭಾರತ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಅಂತಾರಾಷ್ಟ್ರೀಯ ಪಾಪ್ ಸ್ಟಾರ್ ರಿಹಾನ್ನ ಬೆಂಬಲ ನೀಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ರಿಹಾನ್ನ ಅಂತಾರಾಷ್ಟ್ರೀಯ ಮಾಧ್ಯಮವೊಂದು ರೈತರ ಪ್ರತಿಭಟನೆಯ ಕುರಿತು ವರದಿ ಮಾಡಿರುವುದನ್ನು ಉಲ್ಲೇಖಿಸಿದ್ದಾರೆ. ನಾವ್ಯಾಕೆ ಇದರ ಬಗ್ಗೆ ಮಾತಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರ್ಯೂಡೂ ಸಹ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಇನ್ನು ಬಾಲಿವುಡ್ ಹಲವು ನಟ ನಟಿಯರೂ ಸಹ ಟ್ವೀಟ್ ಮಾಡುವ ಮೂಲಕ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.
ಯೂ ಫೂಲ್ – ಕಂಗಾನ , ರಿಹಾನ್ನ ಟಾಂಗ್ :
ಕೃಷಿ ಕಾಯ್ದೆಗಳ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅಂತರಾಷ್ಟ್ರೀಯ ಪಾಪ್ ಸ್ಟಾರ್ ರಿಹಾನ್ನ ಬೆಂಬಲ ಸೂಚಿಸಿದ್ದಕ್ಕೆ. ಇತ್ತ ಬಾಲಿವುಡ್ ನಟಿ ಕಂಗನಾ ಕೆಂಡವಾಗಿದ್ದಾರೆ.
ರೈತರ ಪ್ರತಿಭಟನೆ ಬಗ್ಗೆ ನಾವ್ಯಾಕೆ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂಬ ರಿಹಾನ್ನರ ಟ್ವೀಟ್ಗೆ, ಪ್ರತಿಯಾಗಿ ಟ್ವಿಟ್ ಮಾಡಿರುವ ಕಂಗನಾ, ಯಾರೂ ಇದರ ಬಗ್ಗೆ ಮಾತನಾಡುತ್ತಿಲ್ಲ, ಏಕೆಂದರೆ ಅವರೆಲ್ಲಾ ರೈತರಲ್ಲ. ಭಾರತವನ್ನು ಇಬ್ಭಾಗ ಮಾಡಲು ನೋಡುತ್ತಿರುವ ಭಯೋತ್ಪಾದಕರು. ಅದರಿಂದ ದುರ್ಬಲಗೊಳ್ಳುವ ಭಾರತವನ್ನು ಚೀನಾ ವಶಕ್ಕೆ ಪಡೆದು ಅಮೆರಿಕಾದಂತೆಯೇ ಚೈನೀಸ್ ಕಾಲೋನಿ ಕಟ್ಟಲು ನೆರವಾಗುತ್ತಿರುವವರು. ಸಿಟ್ ಡೌನ್ ಯೂ ಫೂಲ್.. ನಾವು ನಿಮ್ಮ ರೀತಿ ನಮ್ಮ ದೇಶವನ್ನು ಮಾರಲ್ಲ ಅಂತ ಟ್ವೀಟ್ ಮಾಡಿದ್ದಾರೆ.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು