December 22, 2024

Newsnap Kannada

The World at your finger tips!

polard

T-20 ವಿಶ್ವ ಕಪ್ ಮುನ್ನವೇ ಪೋಲಾರ್ಡ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ

Spread the love

ವೆಸ್ಟ್​ ಇಂಡೀಸ್ ಆಲ್​ರೌಂಡರ್​, ಮಾಜಿ ಕ್ಯಾಪ್ಟನ್ ಕೀರನ್ ಪೋಲಾರ್ಡ್​ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ್ದಾರೆ.

ಐಪಿಎಲ್​ ಸೇರಿದಂತೆ ವಿವಿಧ ಲೀಗ್​​ಗಳಲ್ಲಿ ಆಡುವುದಾಗಿ​ ಹೇಳಿರುವ ಪೋಲಾರ್ಡ್(34), ತಮ್ಮ ರಿಟೈರ್​ಮೆಂಟ್​ ನಿರ್ಧಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಮೂಲಕ ಪ್ರಕಟಿಸಿದ್ದಾರೆ.

2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ, ಪೋಲಾರ್ಡ್​ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದರು

15 ವರ್ಷಗಳ ಕ್ರಿಕೆಟ್​​ ಜರ್ನಿಯಲ್ಲಿ ಪೋಲಾರ್ಡ್​ 123 ಏಕದಿನ ಹಾಗೂ 101 ಟಿ-20 ಪಂದ್ಯಗಳನ್ನಾಡಿದ್ದಾರೆ.
ಏಕದಿನ ಮಾದರಿಯಲ್ಲಿ 113 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರೋ ಪೋಲಾರ್ಡ್, 26.02ರ ಸರಾಸರಿಯಲ್ಲಿ 2706 ರನ್ ಗಳಿಸಿದ್ದಾರೆ.

ಇದರಲ್ಲಿ ಮೂರು ಶತಕ ಹಾಗೂ 13 ಅರ್ಧಶತಕ ಸೇರಿವೆ. ಬೌಲಿಂಗ್​ನಲ್ಲಿ 55 ವಿಕೆಟ್ ಉರುಳಿಸಿದ್ದಾರೆ. ಟಿ-20 ಮಾದರಿಯಲ್ಲಿ ಪೋಲಾರ್ಡ್​, 83 ಇನ್ನಿಂಗ್ಸ್​ಗಳಿಂದ 135.14ರ ಸರಾಸರಿಯಲ್ಲಿ 1569 ರನ್ ಸಿಡಿಸಿದ್ದಾರೆ. ಬೌಲಿಂಗ್​ನಲ್ಲಿ 42 ವಿಕೆಟ್​ ಪಡೆದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!