January 13, 2026

Newsnap Kannada

The World at your finger tips!

nikhil

ಅಮ್ಮ, ಮಗ ಸಂಧಾನದಿಂದ ದೇವೇಗೌಡ- ಪುಟ್ಟರಾಜು ಮನವೊಲಿಕೆ ಯಶಸ್ವಿ ?

Spread the love

ಜೆಡಿಎಸ್‌ನಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರ ಸ್ವಾಮಿ ಫುಲ್ ಅತೃಪ್ತರ ಮನವೊಲಿಸಲು ಖಾಡಕ್ಕೆ ಧುಮುಕಿದ್ದಾರೆ ಎಂದು ತಿಳಿದು ಬಂದಿದೆ

ಶಾಸಕ ಜಿ.ಟಿ.ದೇವೆಗೌಡ, ಮೇಲುಕೋಟೆ ಶಾಸಕ ಪುಟ್ಟರಾಜು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ

ಜಿಟಿಡಿ ಕುಟುಂಬದ ಸದಸ್ಯರ ಜೊತೆ ಅನಿತಾ ಕುಮಾರಸ್ವಾಮಿ ತುಂಬಾ ವಿಶ್ವಾಸದಲ್ಲಿದ್ದಾರೆ.
ಯಾವುದೇ ಕಾರಣಕ್ಕೂ ಪಕ್ಷ ತೊರೆಯಬೇಡಿ, ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಅನಿತಾ ಭರವಸೆ ನೀಡಿದ್ದಾರಂತೆ.

ಜೊತೆಗೆ ಮಂಡ್ಯ ಜಿಲ್ಲಾ ಶಾಸಕರ ಸಭೆಯಲ್ಲೂ ಭಾಗಿಯಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯಿಂದ ಅಂತರ ಕಾಯ್ದುಕೊಂಡಿದ್ದ ಪುಟ್ಟರಾಜು ಜೊತೆಗೂ ಮಾತುಕತೆ ನಡೆಸಿದ್ದಾರಂತೆ.

ಈ ಮೂಲಕ ಅತೃಪ್ತ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿ ಅನಿತಾ ಕುಮಾರಸ್ವಾಮಿ ಇದ್ದಾರೆ ಎನ್ನಲಾಗಿದೆ.

ಅಮ್ಮನಿಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಸಾಥ್ ನೀಡಿದ್ದಾರೆ . ಈ ಮೂಲಕ ಮುನಿಸು ಸರಿಪಡಿಸುವ. ಹಾದಿ ರೂಪಿಸಿದ್ದಾರೆ ಎಂದು ಗೊತ್ತಾಗಿದೆ.

error: Content is protected !!