January 10, 2025

Newsnap Kannada

The World at your finger tips!

police

ಡ್ಯೂಟಿಯಲ್ಲಿ ಇದ್ದಾಗಲೇ ಮದ್ಯ ಸೇವನೆ: ಮೂವರು ಪೊಲೀಸರು ಅಮಾನತ್ತು

Spread the love

ಕರ್ತವ್ಯ ಮಾಡುತ್ತಿದ್ದಾಗ ಸಮವಸ್ತ್ರ ಹಾಕಿಕೊಂಡು ಮದ್ಯ ಸೇವಿಸಿದ
ಮೂವರು ಪೋಲಿಸರನ್ನು ತುಮಕೂರು ಎಸ್ಪಿ ಡಾ‌. ಕೆ ವಂಶಿಕೃಷ್ಣ ಅಮಾನತ್ತು ಮಾಡಿದ್ದಾರೆ.

ಚಿಕ್ಕನಾಯಕನಹಳ್ಳಿ ಠಾಣೆ ಎಎಸ್‌ಐ ಶ್ರೀನಿವಾಸ್, ತುರುವೇಕೆರೆ ತಾಲೂಕು ದಂಡಿನಶಿವರ ಠಾಣೆ ಕಾನ್‌ಸ್ಟೆಬಲ್‌ ಪರಮೇಶ್ ಮತ್ತು ಸಂತೋಷ್ ಅವರೇ ಅಮಾನತ್ತು ಗೊಂಡವರು.

ಕುಣಿಗಲ್ ತಾಲೂಕಿನಲ್ಲಿ ಈ ಮೂವರು
ಚುನಾವಣಾ ಕರ್ತವ್ಯಕ್ಕೆ ನಿಯೋಜಿಸ ಲಾಗಿತ್ತು. ಚುನಾವಣಾ ಕೆಲಸ ಮುಗಿಸಿ ರಾತ್ರಿ ಮನೆಗಳಿಗೆ ಹೊರಟಿದ್ದರು. ಈ ವೇಳೆ ಹೊಯ್ಸಳ ವಾಹನದಲ್ಲಿಯೇ ಕುಳಿತು ಮದ್ಯ ಸೇವಿಸಿದ್ದಾರೆ.

ಈ ವೇಳೆ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ಮತ್ತು ಸಿಬ್ಬಂದಿ ನಡುವೆ ಮಾತಿಗೆ ಮಾತು ಬೆಳೆದಿದೆ. ಪೊಲೀಸರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿ ರಘು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಲು ರಘು ಅವರನ್ನು ಕುಣಿಗಲ್ ಪೊಲೀಸರು ಠಾಣೆಗೆ ಕರೆ ತಂದು ಹಲ್ಲೆ ಮಾಡಿದ್ದಾರೆ.

ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ಠಾಣೆ ಎದುರು ಪ್ರತಿಭಟಿಸಲು ಮುಂದಾದರು.

ಆಗ ಪೊಲೀಸರು ಮತ್ತು ಸಮಿತಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಡಿವೈಎಸ್‌ಪಿ ಜಗದೀಶ್ ಪ್ರತಿಭಟನಕಾರರ ಜತೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ವರದಿ ಸಲ್ಲಿಸಿದರು. ಈ ವರದಿ ಆಧರಿಸಿ ಎಸ್ಪಿ ಡಾ ವಂಶಿಕೃಷ್ಣ ಮೂವರನ್ನು ಅಮಾನತ್ತು ಮಾಡಿದರು.

Copyright © All rights reserved Newsnap | Newsever by AF themes.
error: Content is protected !!