ಇದು ರಾಧ ರಮಣನ ಕಥೆ ಅಲ್ಲ. ಪೋಲಿಸ್ ಅಧಿಕಾರಿಗಳಿಬ್ಬರ ಲೌವ್ ಸ್ಟೋರಿ ಕೇಳಲು ಚೆನ್ನಾಗಿದೆ. ಮಾಡಿರುವ ಘನ ಕಾರ್ಯ ಮಾತ್ರ ಯಾವ ಸಮಾಜವೂ ಒಪ್ಪಲ್ಲ. ಮಹಿಳಾ ವಿರೋಧಿ, ಲೌವ್ ನಲ್ಲೂ ದ್ರೋಹದ ಮಾಡಿದ ಎಸ್ ಐ ಆನಂದ್ ವಿರುದ್ಧ ಈಗ ಎಫ್ ಐಆರ್ ದಾಖಲಾಗಿದೆ.
ಮೈಸೂರಿನಲ್ಲಿನ ಇಬ್ಬರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಡುವಿನ ಲೌವ್ ಸ್ಟೋರಿ ಇದು. ಮೈಸೂರಿನ ಎನ್. ಆರ್. ಪೋಲಿಸ್ ಠಾಣೆಯ ಎಸೈ ಆನಂದ್ ಹಾಗೂ ವಿ ವಿ ಪುರಂ ಠಾಣೆಯ ರಾಧ ಪ್ರೀತಿ ಆರಂಭವಾಗಿದೆ. ಇದು ತುಂಬಾ ಸಲುಗೆಗೂ ಕಾರಣವಾಗಿದೆ.
ಎಸೈ ಆನಂದ್ , ಎಸೈ ರಾಧ ಅವರನ್ನು ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳಸಿದರು. ನಂತರ ರಾಧರಿಂದ ದೂರ ಸರಿಯುವ ವೇಳೆಗೆ ಆಕೆ ಗರ್ಭಿಣಿ ಎಂದು ಗೊತ್ತಾಗುವ ವೇಳೆಗೆ ಮತ್ತೊಂದು ಹುಡುಗಿಯೊಂದಿಗೆ ಆನಂದ್ ನಿಶ್ಚಿತಾರ್ಥ ಮಾಡಿಕೊಳ್ಳುವ ಸ್ಥಳಕ್ಕೆ ತೆರಳಿದ ಎಸೈ ರಾಧ, ತಮಗಾದ ಅನ್ಯಾಯದ ವಿರುದ್ದ ಸಿಡಿದೆದ್ದು ಆನಂದ್ ಮಾಡಿದ ಮೋಡಿ, ಮೋಸ ಮತ್ತು ವಂಚನೆ ಬಗ್ಗೆ ವಿವರ ನೀಡಿ ಅದನ್ನು ತಡೆದಿದ್ದಾರೆ.
ಕೆಲವು ದಿನಗಳ ನಂತರ ಪ್ರೇಯಸಿ ರಾಧಾರನ್ನು ಬಿಟ್ಟು ಮತ್ತೊಂದು ಹುಡುಗಿಯ ಜೊತೆ ಮದುವೆ ಆಗಲು ಆನಂದ್ ಮುಂದಾಗಿದ್ದಾರೆ. ಆದರೆ ಈ ಬಾರಿ ಆನಂದ್ ಬಹಳ ಎಚ್ಚರಿಕೆ ವಹಿಸಿ, ರಾಧಾಗೆ ತಿಳಿಯದಂತೆ ರಹಸ್ಯವಾಗಿ ಮದುವೆ ಆಗಿದ್ದಾರೆ ಎನ್ನಲಾಗಿದೆ.
ಈಗ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ರಾಧಾ ದೂರು ನೀಡಿದ್ದಾರೆ. ನ್ಯಾಯಕ್ಕಾಗಿ ಹಿರಿಯ ಪೋಲಿಸ್ ಅಧಿಕಾರಿಗಳ ಮೊರೆ ಹೋಗಿದ್ದಾರೆ.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
ತುಪ್ಪ ಎಂಬ ಮಹಾ ಔಷಧಿ