ಮೈಸೂರು :ನಗರದ ಜಲಪುರಿಯಲ್ಲಿರುವ ಕರ್ನಾಟಕ ಸ್ಟೇಟ್ ಪೊಲೀಸ್ ವೆಲ್ಫೇರ್ & ಎಜ್ಯೂಕೇಷನ್ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಪೊಲೀಸ್ ಪಬ್ಲಿಕ್ ಸ್ಕೂಲ್ಗೆ 2024-25 ನೇ ಸಾಲಿಗೆ ಪ್ರಿನ್ಸಿಪಾಲ್, ಪ್ರಿ-ಪ್ರೈಮರಿ ಟೀಚರ್ಸ್, ಪ್ರೈಮರಿ ಟೀಚರ್ಸ್, ಮಿಡ್ಲ್ ಸ್ಕೂಲ್ ಟೀಚರ್ಸ್, ಸೆಕಂಡರಿ ಸ್ಕೂಲ್ ಟೀಚರ್ಸ್, ಮತ್ತು ಸೀನಿಯರ್ ಸೆಕಂಡರಿ ಸ್ಕೂಲ್ ಟೀಚರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅತ್ಯುತ್ತಮ ಸಂವಹನ ಕೌಶಲ್ಯಗಳೊಂದಿಗೆ ವಿಷಯದ ಜ್ಞಾನ, ದೃಷ್ಟಿ, ಸೃಜನಶೀಲತೆ ಮತ್ತು ವಿಧಾನದ ಸ್ವಂತಿಕೆ ಅಗತ್ಯವಾಗಿರುತ್ತದೆ. ಆಸಕ್ತರು ಪ್ರಕಟಿಸಿದ 10 ದಿನಗಳೊಳಗೆ ಸ್ವ-ವಿವರಳೊಂದಿಗೆ ಪೊಲೀಸ್ ಸಾರ್ವಜನಿಕ ಶಾಲೆ, ಮಹದೇವಪುರ ಮುಖ್ಯ ರಸ್ತೆ, ಜಲಪುರಿ, ಮೈಸೂರು-570019. (ದೂರವಾಣಿ ಸಂಖ್ಯೆ.0821/2459900 ಇಮೇಲ್: policepublicschoolresumes@gmail.com ಗೆ ಕಳುಹಿಸಬಹುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗು ಪೊಲೀಸ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು