ಅಪ್ರಾಪ್ತರನ್ನು ಬಳಸಿಕೊಂಡು ಬೈಕ್‍ಗಳನ್ನು ಕಳ್ಳತನ ಮಾಡಿಸುತ್ತಿದ್ದ ಕಾನ್‍ಸ್ಟೇಬಲ್‍ನನ್ನು ಪೊಲೀಸರೇ ಬಂಧಿಸಿದ್ದಾರೆ
ಈ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಡೆದಿದೆ. ಪೊಲೀಸ್ ಕಾನ್‍ಸ್ಟೇಬಲ್ ಹೊನ್ನಪ್ಪ ರವಿ ಬಂಧಿತ ಆರೋಪಿ.
ಈತ ಅಪ್ರಾಪ್ತರನ್ನು ಬಳಸಿಕೊಂಡು ಬೆಂಗಳೂರು, ಬೆಂಗಳೂರು ಹೊರವಲಯ, ಹಾವೇರಿಯ ರಾಣಿಬೆನ್ನೂರು ಸೇರಿದಂತೆ ಅನೇಕ ಕಡೆ ಬೈಕ್‍ಗಳನ್ನು ಕಳ್ಳತನ ಮಾಡಿಸುತ್ತಿದ್ದ.
ಈವರೆಗೂ ಹೊನ್ನಪ್ಪ ರವಿ ಮಾರಾಟ ಮಾಡಿದ್ದ 53 ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೊನ್ನಪ್ಪ, ರಾಜಸ್ಥಾನದ ರಮೇಶ್, ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
2016ರ ಬ್ಯಾಚ್‍ನ ಸಿವಿಲ್ ಕಾನ್‍ಸ್ಟೇಬಲ್ ಆಗಿರುವ ಹೊನ್ನಪ್ಪ ರವಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಆಗಿ ಕಾರ್ಯನಿರ್ವಹಿಸುತ್ತಿದ್ದ. ಸದ್ಯ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿರುವ ಹೊನ್ನಪ್ಪ ಮಾರಾಟ ಮಾಡಿದ ಬೈಕ್‍ನಿಂದ ಬಂದ ಹಣದಲ್ಲಿ ಐದರಿಂದ ಆರು ಸಾವಿರ ಹಣವನ್ನು ಹುಡುಗರಿಗೆ ನೀಡುತ್ತಿದ್ದ.
ಹೊನ್ನಪ್ಪನನ್ನು ಬಂಧಿಸಿದ ಮಾಗಡಿ ರಸ್ತೆ ಪೋಲಿಸರು ವಿಚಾರಣೆ ನಡೆಸಿದ್ದಾರೆ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ