ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿ ಮರಣ ಹೊಂದಿದ ಮನಿಶಾಳ ಕುಟುಂಬಸ್ಥರನ್ನು ಸಂತೈಸಲು ಹೋಗುತ್ತಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ವಾದ್ರಾ ಅವರನ್ನು ಪೋಲೀಸರು ಬಂಧಿಸಿದ್ದಾರೆ.
ಸಾವಿರಾರು ಕಾರ್ಯಕರ್ತರೊಡನೆ ಸಂತ್ರಸ್ತೆಯ ಕುಟುಂಬದವರನ್ನು ಸಂತೈಸಲು ಹತ್ರಾಸ್‌ಗೆ ಹೋಗುತ್ತಿದ್ದ ವೇಳೆ ಗ್ರೇಟರ್ ನಾಯ್ಡಾ ಬಳಿ ಪರಿಚೌಕದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾದ್ರಾ ಅವರ ವಾಹನಗಳನ್ನು ದಾರಿಯಲ್ಲಿ ತಡೆದಿದ್ದಾರೆ.
ವಾಹನಗಳನ್ನು ಬಿಟ್ಟು ಕಾಲ್ನಡಿಗೆಯಲ್ಲಿ ಹತ್ರಾಸ್‌ಗೆ ತೆರಳುತ್ತಿದ್ದಾಗ ಅವರನ್ನು ಪೋಲೀಸರು ಬಂಧಿಸಿದ್ದಾರೆ.
‘ಕಳೆದ ವರ್ಷ ಉನ್ನಾವ್ ಪ್ರಕರಣವೂ ಸಹ ಇದೇ ಸಮಯದಲ್ಲಿ ನಡೆದಿತ್ತು. ಅದಕ್ಕೆ ಸರಿಯಾಗಿ ಒಂದು ವರ್ಷಕ್ಕೆ ಮತ್ತೆ ಅತ್ಯಾಚಾರದ ಪ್ರಕರಣ ವರದಿಯಾಗಿದೆ. ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಸಿಗುವವರೆಗೂ ನಮ್ಮ ಹೋರಾಟವನ್ನು ನಡೆಸುತ್ತೇವೆ’ ಎಂದು ಅವರು ತಿಳಿಸಿದರು.
‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆಸಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆದಿತ್ಯನಾಥ್ ಮಹಿಳೆಯರಿಗೆ ರಕ್ಷಣಾ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಮಹಿಳೆಯರು ಅವರ ವಿರುದ್ಧ ಹೋರಾಟಕ್ಕೆ ನಿಲ್ಲುತ್ತಾರೆ. ಉತ್ತರ ಪ್ರದೇಶದಲ್ಲಿ ಪ್ರತಿದಿನ 11 ಅತ್ಯಾಚಾರ ಪ್ರಕರಣಗಳು ಕಂಡುಬರುತ್ತಿವೆ. ನಾವು ಸರ್ಕಾರವನ್ನು ಎಚ್ಚರಿಸಿದಿದ್ದರೆ ಸರ್ಕಾರವು ಮಹಿಳೆಯರ ರಕ್ಷಣೆಗೆ ಏನೂ ಕ್ರಮಗಳನ್ನು ಕೈಗೊಳ್ಳುವದಿಲ್ಲ’ ಎಂದು ಹೇಳಿದರು.
More Stories
ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
ರಾಜ್ಯಗಳಾದ್ಯಂತ `ED’ ದಾಳಿ: ಲಾಟರಿ ಕಿಂಗ್ ಮಾರ್ಟಿನ್ನ 12.41 ಕೋಟಿ ನಗದು ಜಪ್ತಿ