Literature

ಇಂಜಿನಿಯರಿಂಗ್ ಕ್ಷೇತ್ರದ ಧ್ರುವತಾರೆ ಭಾರತರತ್ನ ಸರ್.ಎಂ.ವಿ. ( 1860–1962)

ಭಾರತರತ್ನ ಸರ್.ಎಂ.ವಿ. ವಿಶ್ವದ ಇಂಜಿನಿಯರಿಂಗ್ ಕ್ಷೇತ್ರದ ಧ್ರುವತಾರೆ. ಅನರ್ಘ್ಯ ರತ್ನ. ಇವರು ಸುವಿಖ್ಯಾತ ಇಂಜಿನಿಯರ್, ದಕ್ಷ ಆಡಳಿತಗಾರ, ನಿಷ್ಕಾಮ ಕರ್ಮಿ, ಶಿಸ್ತು ಮತ್ತು ದಕ್ಷತೆಗೆ ಮತ್ತೊಂದು ಹೆಸರು. ಭಾರತದ ಉನ್ನತಿಗೆ ಕೈಗಾರಿಕೋದ್ಯಮ ಅನಿವಾರ್ಯ ಎಂದು ನಂಬಿದವರು. ಅಪ್ಪಟ ಕನ್ನಡಿಗ, ನಿಜದೇಶಭಕ್ತ. ಮೈಸೂರು ಸಂಸ್ಥಾನ ಸೇರಿದಂತೆ ಅನೇಕ ರಾಜ್ಯಗಳ ನೀರಿನ ಸಮಸ್ಯೆಗೆ ಯೋಗ್ಯ ಪರಿಹಾರ ತೋರಿದವರು. ಆಧುನಿಕ ಭಗೀರಥರು.


ಚಿಕ್ಕಬಳ್ಳಾಪುರ ತಾಲೂಕಿನ‌ ಮುದ್ದೇನಹಳ್ಳಿ ಇವರ ಹುಟ್ಟಿದೂರು. ತಾಯಿ ವೆಂಕಟಲಕ್ಷ್ಮಮ್ಮ, ತಂದೆ ಶ್ರೀನಿವಾಸ ಶಾಸ್ತಿ. ಹುಟ್ಟಿದ ದಿನಾಂಕದ ಬಗ್ಯೆ ಗೊಂದಲವಿದ್ದರೂ ಅವರ ಜನ್ಮದಿನ 15-09-1860 ಎಂದೇ ಉಲ್ಲೇಕ. ಕಡು ಬಡತನ, ಹದಿನೈದರ ಹರೆಯದಲ್ಲೇ ಪಿತೃವಿಯೋಗ. ಸೋದರಮಾವನ ಆಶ್ರಯ. ಕಲಿಯುವಾಗಲೇ ಬೇರೆ ಮಕ್ಕಳಿಗೆ ಮನೆಪಾಠ ಮಾಡಿ ಕಲಿಯುವಿಕೆಗೆ ಬೇಕಾದ ಸಂಪಾದನೆಯ ದಾರಿ ನೋಡಿಕೊಂಡರು. 1881 ರಲ್ಲಿ ಬಿ.ಎ. ಪರೀಕ್ಷೆಯನ್ನು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿ ಪ್ರಾಂಶುಪಾಲರಿಂದ ಗೌರವಿಸಲ್ಪಟ್ಟವರು. ಮುಂದೆ ಪುಣೆಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಮುಂಬೈಗೇ ಪ್ರಥಮಸ್ಥಾನ ಗಳಿಸಿದರು.


1884 ರಿಂದ ಮುಂಬಯಿ ಸರ್ಕಾರದಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು.‌ ಮುಂದೆ ಸುಮಾರು 23 ವರ್ಷಗಳ ಕಾಲ ನಿಸ್ಪೃಹ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಧೂಲಿಯ ನಗರಕ್ಕೆ ನೀರು ಸರಬರಾಜಿನ ಯೋಜನೆ, ಪುಣೆ ನಗರಕ್ಕೆ ಕುಡಿಯುವ ನೀರಿನ ಯೋಜನೆ ರೂಪಿಸಿ ಹೆಸರು ಪಡೆದರು.

ಕೆಲಸಕ್ಕೆ ಸೇರಿದ ಇಪ್ಪತ್ತು ತಿಂಗಳಲ್ಲೇ ತಮ್ಮ ಪ್ರಾಮಾಣಿಕ ಸೇವೆಯಿಂದ ಮೊದಲ ದರ್ಜೆಯ ಎಂಜಿನಿಯರ್ ಆದರು. ಸಿಂಧ್ ವಿಭಾಗಕ್ಕೆ ಸೇರಿದ ಸಕ್ಕೂರಿಗೆ, ತಪತಿ ನದಿಯಿಂದ ಸೂರತ್ತಿಗೆ ನೀರೊದಗಿಸುವ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದರು. ಈ ಸಮಯದಲ್ಲೇ ಇವರು ಸ್ವಯಂಚಾಲಿತ ತೂಬಿನ ಬಾಗಿಲುಗಳನ್ನು ನಿರ್ಮಿಸಿದರು.‌


1904 ರಲ್ಲಿ ಸಿಂಧ್ ಒಳಗೊಂಡ ಮುಂಬಯಿ ಪ್ರಾಂತ್ಯಕ್ಕೆ ಸ್ಯಾನಿಟರಿ ಇಂಜಿನಿಯರ್ ಆಗಿ ನೇಮಿತರಾದರು. ಈ ಹುದ್ದೆಯನ್ನಲಂಕರಿಸಿದ ಮೊದಲ ಭಾರತೀಯರಿವರು. ಲಂಡನ್ನಿನ ಸಿವಿಲ್ ಇಂಜಿನಿಯರ್ಸ್ ಸಂಸ್ಥೆಗೆ ಸದಸ್ಯರಾಗಿ ಆಯ್ಕೆಯಾದರು. ಮುಂಬಯಿ ವಿ ವಿ ಯ ನಿಯಮಾವಳಿ ರೂಪಿಸುವ ಮಂಡಳಿಗೆ ಸದಸ್ಯರಾಗಿ ಸರಕಾರದಿಂದ ನೇಮಕಗೊಂಡರು. ಪುಣೆಯ ಒಳಚರಂಡಿ ವ್ಯವಸ್ಥೆಯನ್ನು ರೂಪಿಸಿದರು.1906 ರಲ್ಲಿ ಏಡನ್ ಗೆ ಹೋಗಿ ಆ ನಗರಕ್ಕೆ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿದರು. ಸರ್ಕಾರದಿಂದ ಕೈಸರ್-ಇ-ಹಿಂದ್’ ಪ್ರಶಸ್ತಿಗೆ ಪಾತ್ರರಾದರು. ಕೊಲ್ಲಾಪುರದ ಕೆರೆ ದುರಸ್ತಿ ಮಾಡಿಸಿ ನೀರು ಸರಬರಾಜನ್ನು ವ್ಯವಸ್ಥೆಗೊಳಿಸಿದರು. ಎಲ್ಲೆಡೆ ಮನ್ನಣೆಗೆ ಪಾತ್ರರಾದರು.


ವಿದೇಶಗಳಲ್ಲಿನ ಕೈಗಾರಿಕಾ ಪ್ರಗತಿಗಳನ್ನು ಗಮನಿಸಿ ತಮ್ಮ ದೇಶಕ್ಕೂ ಅವುಗಳ ಪ್ರಯೋಜನ‌ ದೊರಕಿಸಿ ಕೊಡುವಲ್ಲಿ1898 ರಲ್ಲಿ ಜಪಾನ್ ಗೆ ಹೋದರು. ಮುಂಬೈ ಸರಕಾರದ ನೌಕರಿಯಿಂದ ನಿವೃತ್ತರಾಗುವ ಮೊದಲು ರಜೆ ಪಡೆದು ಯುರೋಪ್, ಅಮೆರಿಕ ಪ್ರವಾಸ ಮಾಡಿದರು. ಇಟೆಲಿ, ಜರ್ಮನಿ, ಲಂಡನ್, ಪ್ಯಾರಿಸ್, ಡೆನ್ಮಾರ್ಕ್, ಸ್ವೀಡನ್,ಹಾಕೆಂಡ್,ಕೆನಡಾ,ಲೆನಿನ್ ಗ್ರಾಡ್,ಮಾಸ್ಕೋ ಇತ್ಯಾದಿ ನಗರಗಳಿಗೆ ಭೇಟಿನೀಡಿ ಅಲ್ಲಿ ಪ್ರಗತಿಯನ್ನೆಲ್ಲ ಕಂಡುಬಂದರು.‌

ಅನುಭವದ ಕಾರಣದಿಂದ ಪುಣೆ, ಹೈದರಾಬಾದ್,ಧೂಲಿಯಾ, ಏಡನ್, ಇಂದೋರ್ ಮತ್ತು ಮೈಸೂರು ನಗರಗಳ ಒಳಚರಂಡಿ ವ್ಯವಸ್ಥೆ ಇವರ ಸೂಚನೆ ಮತ್ತು ಸಲಹೆಯ ಮೇಲೆಯೇ ರೂಪಿಸಲಾಯಿತು. ಹೈದರಾಬಾದ್ ನ ನಿಜಾಮರ ಕೋರಿಕೆಯ ಮೇರೆ 1909 ರಲ್ಲಿ ಅಲ್ಲಿ ಸ್ಥಳಪರೀಕ್ಷೆ ನಡೆಸಿ ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸುವಲ್ಲಿ ಮಾರ್ಗದರ್ಶನ ಮಾಡಿದರು. ಇದರಿಂದ ಹೈದರಾಬಾದ್ ನಗರ ಸುಂದರವಾಗಿ ಕಂಗೊಳಿಸಿತು. ಸುತ್ತಲ ಪ್ರದೇಶದ ಜಲಾಭಾವವೂ ನೀಗಿತು.


ಮುಂದೆ1909 ರ ನವೆಂಬರ್ 15 ರಂದು ಮೈಸೂರು ರಾಜ್ಯದ ಪ್ರಧಾನ ಇಂಜಿನಿಯರ್ ಆಗಿ ಅಧಿಕಾರ ಸ್ವೀಕರಿಸಿದರು. ಮೈಸೂರ ಅರಸು ನಾಲ್ವಡಿ ಕೃಷ್ಣರಾಜ ಒಡೆಯರ್ ರ ಆಸೆಯಂತೆ ಮೈಸೂರು ಸಂಸ್ಥಾನವನ್ನು ಆದರ್ಶ ಸಂಸ್ಥಾನವನ್ನಾಗಿ ರೂಪಿಸಲು ಹಗಲಿರುಳೆನ್ನದೆ ಅಹರ್ನಿಶಿ ದುಡಿದರು.

ನಾಲ್ವಡಿ ಹಾಗೂ ಸರ್.ಎಂ.ವಿ.ಅವರಿಂದ ಮೈಸೂರು ಸಂಸ್ಥಾನ ನೀರಾವರಿ, ಕೈಗಾರಿಕೆ,ಶಿಕ್ಷಣ,ಬ್ಯಾಂಕಿಂಗ್,ಸಾಹಿತ್ಯ,ಸಾಮಾಜಿಕ ರಂಗಗಳಲ್ಲಿ ದಾಪುಗಾಲಲ್ಲಿ ಮುನ್ನಡೆಯಿತು. ದಿವಾನರಾಗಿದ್ದ ಸರ್.ಎಂ.ವಿ ಅವರ ಸಮಯೋಚಿತ ಚತುರತೆಯಿಂದ ಮಹಾರಾಜರಿಗೆ ರಾಜ್ಯದ ಒಳಾಡಳಿತದಲ್ಲಿ ಹೆಚ್ಚು ಸ್ವಾತಂತ್ರ್ಯ ದೊರಕಿತು.

ಇಂಜಿನಿಯರಿಂಗ್ ಕಾಲೇಜು, ಕೆ.ಆರ್.ಎಸ್, ಗಂಧದೆಣ್ಣೆ ಕಾರ್ಖಾನೆ, ಸಾಬೂನು ಕಾರ್ಖಾನೆ,ಮೈಸೂರು ವಿ ವಿ, ಮೈಸೂರು ಬ್ಯಾಂಕ್, ಸಾಹಿತ್ಯ ಪರಿಷತ್ತು,ಹೊಸ ರೈಲ್ವೆ,ಸಾರಿಗೆ ಮೊದಲಾದುವೆಲ್ಲ ಪ್ರಾರಂಭಗೊಂಡವು. ಹೀಗೆ ಸರ್.ಎಂ.ವಿ.ಅವರು ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಹಾಗೂ ದಿವಾನರಾಗಿದ್ದ ಕಾಲದಲ್ಲಿ ಸರ್ವತೋಮುಖ ಬೆಳವಣಿಗೆ ಕಂಡು ಮಾದರಿ ಸಂಸ್ಥಾನವೆನಿಸಿತು.


ಸರ್ ಎಂ.ವಿ.ಅವರು 1918 ರ ಡಿಸೆಂಬರ್ 9 ರಂದು ದಿವಾನ ಪದವಿಗೆ ರಾಜೀನಾಮೆ ನೀಡಿದರು. ದೇಶಪರ್ಯಟಣೆಗೆ ಹೊರಟರು. ಹಿಂದಿರುಗಿ ಬಂದಾಗ ಅಧೋಗತಿಗೆ ಇಳಿದಿದ್ದ ಭದ್ರಾವತಿಯ ಕಬ್ಬಿಣ ಕಾರ್ಖಾನೆಯನ್ನು ಮತ್ತೆ ಅಭಿವೃದ್ದಿ ಪಡಿಸಿದರು. ಟಾಟಾ ಕಬ್ಬಿಣ ಮತ್ತು ಉಕ್ಕಿನ ಕಂಪೆನಿಯಲ್ಲಿ 28 ವರ್ಷಗಳ ಕಾಲ ಡೈರೆಕ್ಟರ್ ಆಗಿ ದುಡಿದರು.‌

ಬೆಂಗಳೂರಿನ ಭಾರತೀಯ ವಿಜ್ಞಾನ ಮಂಡಳಿಯ ಅಧ್ಯಕ್ಷರಾಗಿ ದುಡಿದರು.‌ಇವರಿಂದಲೇ ವಿಮಾನ ಕಾರ್ಖಾನೆ ಅಸ್ತಿತ್ವಕ್ಕೆ ಬಂತು. ತುಂಗಭದ್ರಾ ಜಲಾಶಯದ ನಿರ್ಮಾಣದಲ್ಲು ಇವರ ಅಮೂಲ್ಯ ಸಲಹೆ ಪಡೆದಿದ್ದರು. ಸರ್ ಎಂ.ವಿ. ಅವರ ಜೀವನ ಚರಿತ್ರೆ ಎಂದರೆ ಮೈಸೂರು ಸಂಸ್ಥಾನದ ಮತ್ತು ಭಾರತದ ಕೈಗಾರಿಕಾ ಪ್ರಗತಿಯ ಇತಿಹಾಸ.


ಸರ್.ಎಂ.ವಿ.ಅವರಿಗೆ ಪ್ರಪಂಚದಾದ್ಯಂತ ಅನೇಕ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದವು. 1955 ರಲ್ಲಿ ಭಾರತ ಸರ್ಕಾರ ‘ಭಾರತರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿತು.1960 ಸಪ್ಟಂಬರ್ 15 ರಂದು ಭಾರತದಾದ್ಯಂತ ಇವರ ಜನ್ಮಶತಮಾನೋತ್ಸವವನ್ನು ಆಚರಿಸಿ ಸರ್ ಎಂ.ವಿ. ಅವರಿಗೆ ಗೌರವ ಸಮರ್ಪಿಸಲಾಯಿತು.


ಅತ್ಯಂತ ದಕ್ಷ,ವಿಚಕ್ಷಣ, ತೀಕ್ಷ್ಣಮತಿ ಸರ್. ಎಂ.ವಿ. ಅವರು1962 ರ ಎಪ್ರಿಲ್ 15 ರಂದು ನಿಧನರಾದರು. ಒಳ್ಖೆಯ ಬರಹಗಾರರಾಗಿದ್ದ ಇವರು ಅನೇಕ ಗ್ರಂಥಗಳನ್ನು ಇಂಜಿನಿಯರ್ ವಿಷಯಕ್ಕೆ ಸಂಬಂಧಿಸಿದಂತೆ ಬರೆದಿದ್ದಾರೆ.‌ ಇವರ ಕುರಿತಾಗಿಯೂ ಹಲವಾರು ಕೃತಿಗಳು ಬಂದಿವೆ. ಇವರ ಸಾಂಸಾರಿಕ ಜೀವನ ಮಾತ್ರ ತುಂಬ ನೋವಿನದ್ದಾಗಿತ್ತು.


ಸರ್.ಎಂ.ವಿ.ಅವರ 162 ನೇ ಜನ್ಮದಿನವಿಂದು. ದೇಶದ ಸರ್ವತೋಮುಖ ಅಭಿವೃದ್ಧಿಗಾಗಿಯೇ ತಮ್ಮನ್ನು ಮುಡಿಪಾಗಿಟ್ಟ ಸರ್.ಎಂ.ವಿ.ಅವರ ಜನ್ಮ ದಿನಾಚರಣೆಯ ಈ ಶುಭದಿನದಂದು ದೇಶದ ಉನ್ನತಿಗಾಗಿ ಕಾಯಾ ವಾಚಾ ಮನಸಾ ದುಡಿಯುವಲ್ಲಿ ನಮ್ಮಿಂದ ಸಾಧ್ಯವಾದಷ್ಟು ತೊಡಗಿಸಿ ಕೊಂಡರೆ ಆಗ ಅವರ ಜನ್ಮದಿನಾಚರಣೆ ಸಾರ್ಥಕತೆ ಪಡೆಯುತ್ತದೆ. ಆ ನಿಟ್ಟಿನಲ್ಲಿ ಚಿಂತಿಸಿ ಆವರ ಬದುಕ ಆದರ್ಶ- ಶಿಸ್ತನ್ನು ನಮ್ಮ ಬದುಕಲ್ಲೂ ಅಳವಡಿಸಿಕೊಂಡರೆ ನಮ್ಮ ಬದುಕೂ ಸಾರ್ಥಕವಾಗುತ್ತದೆ.

ಡಾ.ಪ್ರದೀಪ್ ಕುಮಾರ್ ಹೆಬ್ರಿ
Team Newsnap
Leave a Comment
Share
Published by
Team Newsnap

Recent Posts

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024

ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು

ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More

May 5, 2024

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024