ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ನಿಖರವಾದ ಸ್ಪಷ್ಟತೆ ಇಲ್ಲದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಆದಷ್ಟೂ ಬೇಗ ಪೊಗರು ನೋಡಬಹುದು ಎಂದು ಕಾಯುತ್ತಿದ್ದವರಿಗೆ ಕೊರೊನಾ ವೈರಸ್ ಬೇರೆ ಅಡ್ಡಗಾಲು ಹಾಕಿತ್ತು.
ಚಿತ್ರರಂಗ ನಿಧಾನವಾಗಿ ಯಥಾಸ್ಥಿತಿಗೆ ಮರಳುತ್ತಿದೆ. ಆದ್ರೆ, ಸ್ಟಾರ್ ನಟರ ಚಿತ್ರಗಳು ಯಾವುದು ಮೊದಲು ತೆರೆಗೆ ಬರಲಿದೆ ಎಂಬ ಗೊಂದಲ ಉಂಟಾಗಿದೆ. ದರ್ಶನ್ ರಾಬರ್ಟ್, ಯುವರತ್ನ, ಕೋಟಿಗೊಬ್ಬ 3 ಚಿತ್ರಗಳ ಜೊತೆ ಪೊಗರು ಬಿಡುಗಡೆ ಬಗ್ಗೆ ಚಿಂತಿಸುತ್ತಿದೆ.
ಈ ಎಲ್ಲ ಗೊಂದಲಗಳ ನಡುವೆ ಪೊಗರು ಚಿತ್ರತಂಡ ರಿಲೀಸ್ ಬಗ್ಗೆ ಒಂದು ನಿರ್ಧಾರಕ್ಕೆ ಬಂದಿದೆ. ಎಲ್ಲ ಅಂದುಕೊಂಡಂತೆ ಆದರೆ ಡಿಸೆಂಬರ್ 25ಕ್ಕೆ ಪೊಗರು ಬಿಡುಗಡೆ ಮಾಡಲು ಯೋಜಿಸಲಾಗಿದೆ. ಒಂದು ವೇಳೆ ಡಿಸೆಂಬರ್ 25ಕ್ಕೆ ಆಗಿಲ್ಲ ಅಂದ್ರೆ ಸಂಕ್ರಾಂತಿ ಹಬ್ಬವನ್ನು ಟಾರ್ಗೆಟ್ ಮಾಡಿದ್ದಾರೆ.
ಈ ಕುರಿತು ಖುದ್ದು ನಿರ್ದೇಶಕ ನಂದಕಿಶೋರ್ ಅವರೇ ಮಾಹಿತಿ ನೀಡಿದ್ದಾರೆ. ಧ್ರುವ ಸರ್ಜಾ ಹಾಗೂ ನಂದ ಕಿಶೋರ್ ಮಾಡಲಿರುವ ದುಬಾರಿ ಚಿತ್ರ ಮುಹೂರ್ತ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡೈರೆಕ್ಟರ್ ನಂದ ಕಿಶೋರ್ ”ಡಿಸೆಂಬರ್ 25 ಅಥವಾ ಸಂಕ್ರಾಂತಿ ಹಬ್ಬಕ್ಕೆ ಪೊಗರು ಬರುತ್ತೆ” ಎಂದಿದ್ದಾರೆ. ಈ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಕೂಡ ಡಿಸೆಂಬರ್ 25ಕ್ಕೆ ಬರಲು ತಯಾರಿ ನಡೆಸಿದೆ ಎನ್ನಲಾಗಿದೆ. ಒಂದು ವೇಳೆ ರಾಬರ್ಟ್ ಕ್ರಿಸ್‌ಮಸ್‌ಗೆ ಪ್ಲಾನ್ ಮಾಡಿದ್ರೆ ಪೊಗರು ಮುಂದಕ್ಕೆ ಹೋಗಲಿದೆ. ಇಲ್ಲವಾದಲ್ಲಿ ಪೊಗರು ಚಿತ್ರವೇ ಮೊದಲು ಬರಲಿದೆ.
More Stories
KRS ಡ್ಯಾಂನಿಂದ ಕೃಷಿಗೆ ನೀರು: ವೇಳಾಪಟ್ಟಿ ಪ್ರಕಟ
BBMP ಕಚೇರಿಯಲ್ಲಿ ಇಡಿ ದಾಳಿ: 960 ಕೋಟಿ ರೂ. ಅಕ್ರಮ ತನಿಖೆ
ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ: ಈಶ್ವರ್ ಖಂಡ್ರೆ ಸ್ಪಷ್ಟನೆ