ಮಧ್ಯಪ್ರದೇಶದ ಉಜ್ಜಯಿನಿ-ಅಲೋಟ್ ಲೋಕಸಭಾ ಕ್ಷೇತ್ರದ ಸಂಸದ ಅನಿಲ್ ಫಿರೋಜಿಯಾ ನಿನ್ನೆ ತಮ್ಮ ಕುಟುಂಬದೊಂದಿಗೆ ಪ್ರಧಾನಿ ಮೋದಿಯನ್ನು ಭೇಟಿಯಾದರು.
ಈ ವೇಳೆ ಸಂಸದರ 5 ವರ್ಷದ ಮಗಳು ಅಹಾನಾ ಫಿರೋಜಿಯಾರನ್ನ ಮೋದಿ ಹತ್ತಿರಕ್ಕೆ ಕರೆದು, ಪ್ರೀತಿಯಿಂದ ಚಾಕಲೇಟ್‌ಗಳನ್ನು ನೀಡಿ ಆಶೀರ್ವಾದಿಸಿದರು.
5 ರಿಂದ 10 ನಿಮಿಷಗಳ ಕಾಲ ಪುಟಾಣಿ ಬಾಲಕಿಯನ್ನು ಮೋದಿ ಮಾತಿಗೆ ಎಳೆದರು
ಪ್ರಧಾನಿ ಮೋದಿ, ನಿನಗೆ ನಾನು ಯಾರು ಎಂದು ತಿಳಿದಿದೆಯೇ? ಅಂತಾ ಬಾಲಕಿಗೆ ಪ್ರಶ್ನೆ ಮಾಡಿದರು . ಅದಕ್ಕೆ ಪುಟಾಣಿ.. ‘ಗೊತ್ತು.. ನೀವು ಮೋದಿಜೀ.. ಟಿವಿಯಲ್ಲಿ ದಿನಾ ಬರುತ್ತೀರಿ..’ ಎಂದಿದ್ದಾಳೆ.
ಮೋದಿ ಪ್ರತಿಕ್ರಿಯಿಸಿ.. ‘ನಾನು ಏನ್ ಮಾಡ್ತೀನಿ ಎಂದು ನಿನಗೆ ಗೊತ್ತಾ..?’ ಎಂದು ಕೇಳಿದ್ದಾರೆ.. ‘ಹೌದು.. ಲೋಕಸಭೆಯಲ್ಲಿ ಕೆಲಸ ಮಾಡ್ತೀರಿ.. ಪಪ್ಪ ಕೂಡ ಅಲ್ಲೇ ಕೆಲಸ ಮಾಡ್ತಾರೆ’ ಎಂದಿದ್ದಾಳೆ.
ನಕ್ಕ ಮೋದಿ, ಪುಟಾಣಿ ಬಾಲಕಿಗೆ ಚಾಕಲೇಟ್ ನೀಡಿ ಆಶೀರ್ವಾದ ಮಾಡಿದ್ದಾರೆ. ಮಗಳು ಅಹಾನಾ ಮೋದಿ ಜೊತೆ ಮಾತನಾಡಿದ ವಿಶೇಷ ಕ್ಷಣಗಳನ್ನು ಅನಿಲ್ ಫಿರೋಜಿಯಾ ಹಂಚಿಕೊಂಡಿದ್ದಾರೆ.
ವಿಶ್ವದ ಅತ್ಯಂತ ಜನಪ್ರಿಯ ನಾಯಕ, ದೇಶದ ಅತ್ಯಂತ ಯಶಸ್ವಿ ಪ್ರಧಾನಿ, ಅತ್ಯಂತ ಗೌರವಾನ್ವಿತ ನರೇಂದ್ರ ಮೋದಿಯನ್ನು ಇಂದು ನನ್ನ ಕುಟುಂಬ ಭೇಟಿ ಮಾಡುವ ಭಾಗ್ಯ ಸಿಕ್ಕಿತ್ತು ಎಂದು ಬರೆದುಕೊಂಡಿದ್ದಾರೆ.
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ