December 25, 2024

Newsnap Kannada

The World at your finger tips!

food , security , Yojana

ಪ್ರಧಾನಿ ಮೋದಿ ಟ್ವಿಟರ್​ ಹ್ಯಾಕ್ : ​​ಹ್ಯಾಕರ್ಸ್ ಪೋಸ್ಟ್​ ನಲ್ಲಿ ಏನಿದೆ ?

Spread the love

ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟರ್​ ಖಾತೆಯನ್ನು ಹ್ಯಾಕ್​ ಮಾಡಿ ಹ್ಯಾಕರ್ಸ್ ಶಾಕ್ ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಅವರ ಟ್ವಿಟರ್ ಖಾತೆಯನ್ನು ಭಾನುವಾರ ಮುಂಜಾನೆ 2 ಗಂಟೆ ಸಮಯದಲ್ಲಿ ಹ್ಯಾಕರ್​​​ಗಳು ಹ್ಯಾಕ್​ ಮಾಡಿದ್ದಾರೆ.

ಈ ವಿಚಾರವನ್ನುಪಿಎಂಒ ತನ್ನ ಟ್ವಿಟರ್​ ಖಾತೆಯಲ್ಲಿ 3 ಗಂಟೆ ವೇಳೆಗೆ ಟ್ವೀಟ್​ ಮಾಡಿ ಖಚಿತ ಪಡಿಸಿದೆ.

ಹ್ಯಾಕ್ ಆಗಿರುವ ವಿಚಾರವನ್ನು ಟ್ವಿಟರ್​​ಗೆ ಮಾಹಿತಿ ನೀಡಲಾಗಿದೆ, ಸದ್ಯ ಪ್ರಧಾನಿಗಳ ಖಾತೆಯನ್ನು ಭದ್ರಪಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಮೋದಿ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರೋ ಹ್ಯಾಕರ್, ಕ್ರಿಪ್ಟೋ ಕರೆನ್ಸಿ ಕುರಿತು ಟ್ವೀಟ್​ ಮಾಡಿದ್ದರು. ಬಿಟ್​ ಕಾಯಿನ್​​​​ಅನ್ನು ಸರ್ಕಾರ ಅಧಿಕೃತವಾಗಿ ಅನುಮೋದಿಸಿದೆ. ಬಿಟ್​ ಕಾಯಿನ್​ ಟೆಂಡರ್​​​​ಗಳನ್ನು ಸರ್ಕಾರ ಕರೆದಿದೆ. ಸರ್ಕಾರ 500 ಬಿಟಿಸಿಗಳನ್ನು ಖರೀದಿ ಮಾಡಿದೆ. ದೇಶದ ಜನರಿಗೆ ಸರ್ಕಾರ ಹಂಚಿಕೆ ಮಾಡಲಿದೆ ಎಂದು ಹ್ಯಾಕರ್​ಗಳು ಪೋಸ್ಟ್​ ಮಾಡಿದ್ದರು.

ಸದ್ಯ ಈ ಪೋಸ್ಟ್​ಅನ್ನು ಡಿಲೀಟ್ ಮಾಡಲಾಗಿದೆ. ಟ್ವಿಟರ್​ ಖಾತೆ ಹ್ಯಾಕ್ ಆದ ಸಂದರ್ಭದಲ್ಲಿ ಪೋಸ್ಟ್​ ಮಾಡಲಾಗಿರುವ ಸಂದೇಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಡಿ ಎಂದು ಪಿಎಂಒ ಖಾತೆ ತಿಳಿಸಿದೆ.

Copyright © All rights reserved Newsnap | Newsever by AF themes.
error: Content is protected !!