February 27, 2026

Newsnap Kannada

The World at your finger tips!

PM car

ಭದ್ರತಾ ಲೋಪ – 15 ನಿಮಿಷ ಕಾಲ ಸೇತುವೆ ಮೇಲೆ ನಿಂತ ಪ್ರಧಾನಿ ಮೋದಿ – ನಮ್ಮ ತಪ್ಪಿಲ್ಲ: ಪಂಜಾಬ್ ಸಿಎಂ

Spread the love

ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್​ ಭೇಟಿ ಇಂದು ಭದ್ರತಾ ಲೋಪದ ಕಾರಣದಿಂದ ರದ್ದಾಗಿದೆ.

ಪಂಜಾಬ್​​ನ ಫಿರೋಜ್​​ಪುರ್​​ಗೆ ರಸ್ತೆ ಮಾರ್ಗದ ಮೂಲಕ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿಗಳ ಭದ್ರತಾ ಬೆಂಗಾವಲು ಪಡೆಗಳಿಗೆ ಅಡ್ಡಿ ಪಡಿಸಿದ್ದ ಕಾರಣ ಸುಮಾರು 15 ನಿಮಿಷಗಳ ಕಾಲ ಸೇತುವೆ ಮೇಲೆಯೇ ಪ್ರಧಾನಿ ಮೋದಿ ವಾಹನ ನಿಂತಿತ್ತು

ಈ ಘಟನೆ ಕುರಿತಂತೆ ಪಂಜಾಬ್ ಸಿಎಂ ಪ್ರತಿಕ್ರಿಯೆ ನೀಡಿದೆ ಪ್ರಧಾನಿಗಳ ಪಂಜಾಬ್ ಭೇಟಿ ವೇಳೆ ಭದ್ರತಾ ಲೋಪ ಆಗಿರೋದು ನಿಜ. ಆದರೆ ಅದರಲ್ಲಿ ನಮ್ಮ ರಾಜ್ಯ ಸರ್ಕಾರದ ಯಾವುದೇ ತಪ್ಪು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿಗಳ ಪ್ರವಾಸದ ಸಂದರ್ಭದಲ್ಲಿ ಎದುರಾದ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವಾಲಯ ಪಂಜಾಬ್​​ ರಾಜ್ಯ ಸರ್ಕಾರದ ಬಳಿ ವಿವರಣೆ ಕೇಳಿ ವರದಿ ನೀಡುವಂತೆ ಸೂಚನೆ ನೀಡಿದೆ.

ಅಲ್ಲದೇ ಭದ್ರತಾ ಲೋಪ ಎದುರಾಗಲು ಕಾರಣವಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸೂಚನೆ ನೀಡಿದೆ.

ಈಘಟನೆ ಕುರಿತಂತೆ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿಯನ್ನು ಕುಗ್ಗಿಸಲು ಸಾಧ್ಯವಿರುವ ಎಲ್ಲಾ ತಂತ್ರಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

error: Content is protected !!