ಬಿಜೆಪಿ ಸರ್ಕಾರದಲ್ಲಿ ವರ್ಗಾವಣೆಯೂ ಒಂದು ದಂಧೇ ಆಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಅಬ್ಕಾರಿ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ನೇರವಾಗಿ ಪ್ರಧಾನಿಮಂತ್ರಿ ಗೆ ದೂರು ನೀಡಿ ದಿಟ್ಟತನ ತೋರಿದ್ದಾರೆ.
ಆ ಮಹಿಳಾ ಅಧಿಕಾರಿ ವರ್ಗಾವಣೆಗೆ 1 ಕೋಟಿ ರು ಹಣವನ್ನು ನೀಡುವಂತೆ ಅಬ್ಕಾರಿ ಸಚಿವ ಎಚ್ ನಾಗೇಶ್ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ದೂರು ಈಗ ಪ್ರಧಾನಿ ಕಚೇರಿಗೆ ತಲುಪಿದೆ.
ಅಬ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಅಧಿಕಾರಿಯ ಪುತ್ರಿ ಸ್ನೇಹ ಎಂಬುವವರು ಇ – ಜನ ಸ್ಪಂದನ ವಿಭಾಗಕ್ಕೂ ದೂರು ನೀಡಿದ್ದಾರೆ.
ಕಡ್ಡಾಯ ರಜೆಗೆ ಮಂತ್ರಿ ಸೂಚನೆ:
ಕಳೆದ ಜುಲೈನಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹ ಅವರನ್ನು ಬೆಂಗಳೂರಿನಲ್ಲಿರುವ ಜಂಟಿ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡುವಂತೆ ಅಬ್ಕಾರಿ ಮಂತ್ರಿ ಎಚ್ ನಾಗೇಶ್ ಅವರನ್ನು ಕೋರಿದಾಗ 1 ಕೋಟಿ ರು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.
ಇಷ್ಟೊಂದು ಹಣ ಕೊಡಲು ಸ್ನೇಹ ನಿರಾಕರಿಸಿದರು. ಆಗ ಕೂಡಲೇ ಸ್ನೇಹಾರನ್ನು ಕಡ್ಡಾಯ ರಜೆ ಮೇಲೆ ತೆರಳುವಂತೆ ಮಂತ್ರಿ ಗಳು ಸೂಚಿಸಿದರು.
ಇದುವರೆಗೂ 600 ಮಂದಿ ವರ್ಗಾವಣೆ? :
ವರ್ಗಾವಣೆ ದಂಧೆಯಲ್ಲಿ ಇದುವರೆಗೂ 600 ಕ್ಕೂ ಹೆಚ್ಚು ಮಂದಿಯನ್ನು ಹಣ ಪಡೆದು ವರ್ಗಾವಣೆ ಮಾಡಿದ್ದಾರೆ. ಕೋಲಾರದ ಎಲ್. ಎ. ಮಂಜುನಾಥ್ ಹಾಗೂ ಕಚೇರಿ ಸಿಬ್ಬಂದಿ ಹರ್ಷ ಅವರ ಮುಖಾಂತರ ವರ್ಗಾವಣೆ ದಂಧೆ ಮಾಡುವ ಅಬ್ಕಾರಿ ಮಂತ್ರಿಗಳು ಹಣ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ.
ಪ್ರಾಮಾಣಿಕತೆ ಕೆಲಸ ಮಾಡುವ ನನ್ನ ಆದರ್ಶಗಳು ಮೂಲೆ ಸೇರುತ್ತಿವೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿರುವ ಸ್ನೇಹ, ಅಬ್ಕಾರಿ ಸಚಿವರ ಈ ಎಲ್ಲಾ ವ್ಯವಹಾರಗಳ ಬಗ್ಗೆ ಡಿಸಿಎಂ ಅಶ್ವತ್ಥ್ ನಾರಾಯಣ ಅವರ ಗಮನಕ್ಕೆ ಹೋದರೂ ಸಹ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂಬ ಅಂಶವನ್ನು ಪತ್ರದಲ್ಲಿ ಗಮನಕ್ಕೆ ತಂದಿದ್ದಾರೆ
ಪ್ರಧಾನಮಂತ್ರಿಗಳಿಗೆ ಬರೆದ ದೂರಿನ ಪತ್ರವನ್ನು ಮುಖ್ಯ ಮಂತ್ರಿಗಳೂ ಸೇರಿದಂತೆ ಪ್ರಮುಖರಿಗೆ ಕಳುಹಿಸಲಾಗಿದೆ.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ