Main News

ಗಂಡ ಕೊಲೆಗೆ ಗೆಳೆಯನ ಸಾಥ್: ಮುಹೂರ್ತ ಇಟ್ಟು ಕಾರ್ಯ ಮುಗಿಸಿದ ಪತ್ನಿ

ಪ್ರಿಯಕರನಿಗಾಗಿ ಗಂಡನನ್ನೇ ಕೊಲೆ ಮಾಡಲು ಸಹಕಾರ ನೀಡಿದ್ದ ಕೊಲೆ ಪ್ರಕರಣವನ್ನು ಪೋಲೀಸರು ಭೇದಿಸಿದ್ದಾರೆ.

ನಂಜನಗೂಡಿನ ಅಡ್ಡಹಳ್ಳಿಯ ಶವ ರಾಜ್ ಕೊಲೆಯಾದ ವ್ಯಕ್ತಿ. ಆತನ ಪತ್ನಿ ಸೌಮ್ಯ , ಯೋಗೇಶ್ ಹಾಗೂ ಚಲುವರಾಜು ಸೇರಿ ಸಂಚು ಮಾಡಿ ಕೊಲೆ ಮಾಡಿದ್ದು ಬೆಳಕಿಗೆ ಬಂದಿದೆ.

ಸೌಮ್ಯ ಶುಂಠಿ ಕೆಲಸಕ್ಕೆ ಆಟೋದಲ್ಲಿ ಹೋಗುವ ವೇಳೆ ಚಾಲಕ ಯೋಗೇಶ್ ಆತ್ಮೀಯತೆ ಬೆಳಸಿಕೊಂಡಿದ್ದರು. ಈ ರೀತಿಯ ಸಲುಗೆ, ಸಂಬಂಧದ ಬಗ್ಗೆ ಪತಿ ಶಿವರಾಜು ದೂರ ಇರುವಂತೆ ಹೇಳಿ,
ಶುಂಠಿ ಕೆಲಸಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದನು.

ಗಂಡನ ಕಟ್ಟಪ್ಪಣೆಯಿಂದ ಸೌಮ್ಯಳನ್ನು ಭೇಟಿ ಮಾಡಲು ಆಟೋ ಚಾಲಕ ಯೋಗೇಶ್ ಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಶಿವರಾಜ್ ನನ್ನು ಕೊಲೆ ಮಾಡಲು ಪತ್ನಿ ಸೌಮ್ಯ ಸೇರಿ ಪ್ಲಾನ್ ಮಾಡಿದ ಯೋಗೇಶ್ , ಈ ಕೃತ್ಯಕ್ಕೆ ಗೆಳೆಯ ಚೆಲುವರಾಜ್ ನೆರವು ಪಡೆದನು.

ಯೋಗೇಶ್ ನ ನಿರ್ದೇಶನ ಮೇರೆಗೆ ಸೌಮ್ಯ ಪತಿಗೆ ಕಂಠಪೂರ್ತಿ ಕುಡಿಸಿದಳು. ತರುವಾಯ ಯೋಗೇಶ್ ಮತ್ತು ಚಲುವರಾಜು ಜೊತೆ ಸೇರಿ ಡಿ. 7 ರಂದು ಶಿವರಾಜ್ ಕೈ ಕಾಲು ಕಟ್ಟಿ ಕಬಿನಿ ಬಲದಂಡೆ ನಾಲೆಗೆ ಶವ ಎಸೆದಿದ್ದರು.
ಆದರೆ ಪತಿ ನಾಪತ್ತೆಯಾಗಿರುವ ಬಗ್ಗೆ ಸೌಮ್ಯ ಪೊಲೀಸರಿಗೆ ದೂರು ಕೂಡ ನೀಡಲಿಲ್ಲ.

ಡಿ. 15 ರಂದು ನಾಲೆಯಲ್ಲಿ ಶವ ಪತ್ತೆಯಾಗಿತ್ತು. ಅಪರಿಚಿತ ವ್ಯಕ್ತಿ ಶವ ಪತ್ತೆಯಾದ ಮೇಲೆ ಪೊಲೀಸರು ಮೃತನ ಪತ್ತೆ ಕಾರ್ಯ ಕೈಗೊಂಡರು.

ಪೋಲಿಸರಿಗೆ ಕೆಲವು ಸಂಶಯ ಬಂದ ಮೇಲೆ ಸೌಮ್ಯಳನ್ನು ವಿಚಾರಣೆಗೆ ಒಳಪಡಿಸಿದಾಗ ಸೌಮ್ಯ, ಯೋಗೇಶ್ ಮತ್ತು ಚಲುವರಾಜ್ ಜೊತೆ ಸೇರಿ ಕೊಲೆ ಮಾಡಿರವುದಾಗಿ ಒಪ್ಪಿಕೊಂಡರು. ಈಗ
ನಂಜನಗೂಡು ಪೋಲಿಸರು ಮೂವರನ್ನು ಬಂಧಿಸಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಮೂವರು ಸಜೀವ ದಹನ

ಚೆನ್ನೈ : ಇಂದು ತಮಿಳುನಾಡಿನ ವಿರುಧುನಗರ ಜಿಲ್ಲೆಯ ಸತ್ತೂರು ಬಳಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು ,ಮೂವರು ಸಾವನ್ನಪ್ಪಿದ್ದಾರೆ ಮತ್ತು… Read More

June 29, 2024

ಕೆ ಆರ್ ಎಸ್ ಗೆ 18 ಸಾವಿರ ಕ್ಯುಸೆಕ್ ಒಳಹರಿವು -92.80 ಅಡಿ ನೀರು – ಕಬಿನಿಗೆ 17 ಸಾವಿರ ಕ್ಯುಸೆಕ್ ನೀರು ಒಳ ಹರಿವು

ಮೈಸೂರು : ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಜಲಾಶಯಗಳಿಗೆ ಒಳ ಹರಿವು ಕೊಂಚ ತಗ್ಗಿದೆ. Join WhatsApp Group ಕೆಆರ್ ಎಸ್… Read More

June 29, 2024

ಕೆ ಆರ್ ಎಸ್ ಗೆ 13 ಸಾವಿರ ಕ್ಯುಸೆಕ್ ಒಳಹರಿವು -90 ಅಡಿ ನೀರು – ಕಬಿನಿಗೆ 20 ಸಾವಿರ ಕ್ಯುಸೆಕ್ ನೀರು ಒಳ ಹರಿವು

ಮೈಸೂರು : ಕೇರಳ, ಕೊಡಗು, ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಭಾರಿ ಪ್ರಮಾಣದ… Read More

June 28, 2024

ಹಾವೇರಿ ಬಳಿ ಭೀಕರ ರಸ್ತೆ ಅಪಘಾತ: ಭದ್ರಾವತಿಯ 13 ಮಂದಿ ದುರಂತ ಸಾವು

ಹಾವೇರಿ : ದೇವಸ್ಥಾನಕ್ಕೆ ತೆರಳಿ ಸ್ವಗ್ರಾಮಕ್ಕೆ ವಾಪಸ್ಸು ಆಗುತ್ತಿದ್ದ ವೇಳೆ ನಿಂತಿದ್ದ ಲಾರಿಗೆ ಟಿಟಿವೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ… Read More

June 28, 2024

ರಾಜ್ಯದಲ್ಲಿ ‘ಡೇಂಘಿ’ ಜ್ವರಕ್ಕೆ ಹಾವೇರಿಯಲ್ಲಿ ಮೊದಲ ಬಲಿ

ಹಾವೇರಿ : ಡೇಂಘಿ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದ್ದು ಇದೀಗ ಹಾವೇರಿ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ . ಹಾವೇರಿ ಜಿಲ್ಲೆಯ… Read More

June 27, 2024

24 ವರ್ಷದ ಯುವತಿ ಹೃದಯಾಘಾತದಿಂದ ಸಾವು

ಮಡಿಕೇರಿ : ಹೃದಯಾಘಾತದಿಂದ 24 ವರ್ಷದ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮಡಿಕೇರಿಯಲ್ಲಿ (Madikeri) ನಡೆದಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ… Read More

June 27, 2024