December 23, 2024

Newsnap Kannada

The World at your finger tips!

acb 1

3 ತಿಂಗಳು ಪ್ಲಾನ್ ಮಾಡಿ ಭ್ರಷ್ಟರ ಬೇಟೆ ಆಡಿದ್ದೇ ರೋಚಕ ಕತೆ !

Spread the love

ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಿಗ್ಗೆ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸುವ ಈ ದಾಳಿಗೆ ಕಳೆದ 3 ತಿಂಗಳಿನಿಂದ ರಹಸ್ಯವಾಗಿ ಕಾರ್ಯ ತಂತ್ರ ರೂಪಿಸಿದ್ದು ತುಂಬಾರೋಚಕವಾಗಿತ್ತು.

15 ಅಧಿಕಾರಿಗಳ ನಿವಾಸಗಳ ಮೇಲೆ  68 ಸ್ಥಳಗಳಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವವರ ವಿರುದ್ಧ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಸಾಕಷ್ಟು ಅಕ್ರಮ ಸಂಪತ್ ಅನ್ನು ಬಗೆದು ತೆಗೆದಿದ್ದಾರೆ

ಈ ಬೇಟೆಯ ಹಿಂದೆ ಸಾಕಷ್ಟು ದಿನಗಳ ಹಿಂದೆ ಮಾಸ್ಟರ್​ ಪ್ಲಾನ್​ ರೂಪಿಸಲಾಗಿತ್ತು. ಅದು ಇಂದು ಅನಾವರಣಗೊಂಡಿದೆ.

ಬುಧವಾರ ಬೆಳಗ್ಗೆ 6 ಗಂಟೆಗೆ ಏಕಕಾಲದಲ್ಲಿ ಒಟ್ಟು 15 ಅಧಿಕಾರಿಗಳ ವಿರುದ್ಧ ರಾಜ್ಯದ 68 ಕಡೆಗಳಲ್ಲಿ 68 ತಂಡಗಳಿಂದ ದಾಳಿ ನಡೆಸಲಾಗಿದೆ.  

acb

ಈ ಯಶಸ್ವಿ​ ದಾಳಿಗೆ 3 ತಿಂಗಳುಗಳಿಂದ ತಂತ್ರ ಹೆಣೆಯಲಾಗಿತ್ತಂತೆ. ದಾಳಿ ನಡೆಸಬೇಕೆಂದಿರುವ ಒಬ್ಬೊಬ್ಬ ಅಧಿಕಾರಗಳ ಜನ್ಮ ಜಾಲಾಡಿದ ಎಸಿಬಿ ಪ್ರತಿಯೊಬ್ಬ ಅಧಿಕಾರಿಯ ಮಾಹಿತಿಯನ್ನು ಇಂಚಿಂಚಾಗಿ ಕಲೆ ಹಾಕಿತ್ತು. ಕೊನೆಯದಾಗಿ 15 ಮಂದಿಯ ಲಿಸ್ಟ್​ ರೆಡಿ ಮಾಡಿ ಬೇಟೆ ಆಡಲು ಮುಹೂರ್ತ ನಿಗದಿ​ ಮಾಡಲಾಗಿತ್ತು.

ಕಳೆದ3 ತಿಂಗಳುಗಳವರೆಗೆ ಈ ಅಧಿಕಾರಿಗಳ ಮಾಹಿತಿ ಕಲೆ ಹಾಕುವುದೇ ದೊಡ್ಡ ಸವಾಲಾಗಿತ್ತು. ಜೊತೆಗೆ ಅದನ್ನು ರಹಸ್ಯವಾಗಿ ಕಾಪಾಡಿಕೊಂಡು ಬರೋದು ಅಷ್ಟೇ ರೋಚಕತೆಯಿಂದ ಕೂಡಿತ್ತು

ಮೇಲಾಧಿಕಾರಿಗಳು ಯಾವುದೇ ಸಂದರ್ಭದಲ್ಲಿ ಮಾಹಿತಿ ಸೋರಿಕೆಯಾಗಬಾರದೆಂದು ಖಡಕ್​ ಮಾಹಿತಿ ನೀಡಿದ್ದರಂತೆ.

ಪ್ರತಿ ಅಧಿಕಾರಿಗೆ ಒಬ್ಬರಿಂದ ಇಬ್ಬರನ್ನು ನೇಮಿಸಿ ಪ್ರತಿನಿತ್ಯ ಮಾಹಿತಿ ಕಲೆ ಹಾಕಲಾಗುತ್ತಿತ್ತು. ಹೀಗೆ ಮಾಹಿತಿ ಕಲೆ ಹಾಕಿದ ನಂತರ ದಾಳಿಗೆ ಸಿದ್ಧತೆ ನಡೆಸಲಾಗಿತ್ತು.

ಇಂದು ಮಧ್ಯರಾತ್ರಿ ನಂತರ 3 ಗಂಟೆಗೆ ಕಚೇರಿಗೆ ಬಂದಿದ್ದ ಅಧಿಕಾರಿಗಳು 4.30 ಕ್ಕೆ ಎಲ್ಲರೂ ಒಟ್ಟಿಗೆ ಕಚೇರಿಗಳಿಂದ ತೆರಳಿದ್ದರು. 6 ಗಂಟೆಗೆ ಏಕಕಾಲಕ್ಕೆ ದಾಳಿ ನಡೆಸಬೇಕೆಂದು ಮೇಲಾಧಿಕಾರಿಗಳು ಗ್ರೀನ್​ಸಿಗ್ನಲ್​ ನೀಡಿದ್ದರಂತೆ. ಆ ಪ್ರಕಾರ ನುಗ್ಗಿದ ಎಸಿಬಿ ಭ್ರಷ್ಟರ ಬೆವರಿಳಿಸಿದೆ. ಅಕ್ರಮ ಆಸ್ತಿ ಸಂಪತ್ ನೋಡಿ ದಾಳಿಗೆ ಹೋಗಿರುವ ತಂಡದ ಅಧಿಕಾರಿಗಳು ಮೂಛೆ೯ ಹೋಗಿದ್ದಾರಂತೆ.

Copyright © All rights reserved Newsnap | Newsever by AF themes.
error: Content is protected !!