December 18, 2024

Newsnap Kannada

The World at your finger tips!

men,bee,attack

ಪಿತೃಪಕ್ಷ ಪೂಜೆ: ಹೆಜ್ಜೇನಿನ ದಾಳಿಗೆ ವ್ಯಕ್ತಿ ಸಾವು, ಐವರಿಗೆ ಗಾಯ

Spread the love

ಕೋಲಾರ:ತಾಲ್ಲೂಕಿನ ಜಂಗಾಲಹಳ್ಳಿ ಬಳಿ ಮಂಗಳವಾರ ಪಿತೃಪಕ್ಷ ಪೂಜೆಯ ವೇಳೆ ಹೆಜ್ಜೇನಿನ ದಾಳಿಯಿಂದಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತ ವ್ಯಕ್ತಿಯು ಜಂಗಾಲಹಳ್ಳಿಯ ವೆಂಕಟಸ್ವಾಮಿ (60) ಎಂದು ಗುರುತಿಸಲಾಗಿದೆ. ಗಾಯಗೊಂಡವರು ಶಾಮಣ್ಣ, ಸುಂದರ್ ರಾಜ್, ಕಾರ್ತಿಕ್ (ಎಲ್ಲರೂ ಜಂಗಾಲಹಳ್ಳಿ) ಮತ್ತು ನಿದರಮಂಗಲ ಗ್ರಾಮದಿಂದ ಬಂದ ಶ್ರೀನಿವಾಸ್, ವೆಂಕಟಗಿರಿಯಪ್ಪ ಆಗಿದ್ದಾರೆ. ಗಾಯಾಳುಗಳನ್ನು ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ವ್ಯಕ್ತಿಯ ಕುಟುಂಬವು ಜಂಗಾಲಹಳ್ಳಿ ಹೊರವಲಯದಲ್ಲಿ ಇರುವ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಲು 8 ರಿಂದ 10 ಮಂದಿ ಗುಂಪಾಗಿ ಸೇರಿದ್ದು , ಈ ವೇಳೆ ಸಾಂಬ್ರಾಣಿ ಹೊಗೆ ಹೆಚ್ಚಾಗಿ ಹರಿಯುತ್ತಿದ್ದ ಕಾರಣ, ಹೆಜ್ಜೇನಿನ ಹುಳಗಳು ಸ್ಥಳವನ್ನು ಆವರಿಸಿದೆ .

ಓಡಲು ಪ್ರಯತ್ನಿಸುತ್ತಿರುವಾಗ, ಮಹಿಳೆಯರು ಸೀರೆಯಲ್ಲಿ ತಮ್ಮ ಮುಖವನ್ನು ಮುಚ್ಚಿಕೊಂಡರೂ, ಪುರುಷರು ಈಹೆಜ್ಜೇನುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವೆಂಕಟಸ್ವಾಮಿ ಅವರು ಹೆಚ್ಚಿನ ಹುಳಗಳ ಕಚ್ಚಿನಿಂದ ಗಂಭೀರವಾಗಿ ಗಾಯಗೊಂಡು, ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟರು.ಬಾಂಗ್ಲಾ ವಿರುದ್ಧ 2-0 ಸರಣಿ ಗೆಲುವು: ವಿಶ್ವಕ್ಕೆ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತವೇ ನಂಬರ್ ಒನ್

ಮೃತ ದೇಹವನ್ನು ಶವಾ ಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಾಗಿದೆ.

Copyright © All rights reserved Newsnap | Newsever by AF themes.
error: Content is protected !!